ಬದುಕನ್ನು ಸಂಭ್ರಮಿಸದೇ 3.9 ಕೋಟಿ ಉಳಿತಾಯ: ವೃದ್ಧಾಪ್ಯದಲ್ಲಿ ವಿಷಾದ ಪಟ್ಟ ವೃದ್ಧ

Published : Sep 29, 2025, 11:13 AM IST
Man Regrets Saving Millions

ಸಾರಾಂಶ

Saving vs Living: ಜಪಾನ್‌ನ ಸುಜುಕಿ ಎಂಬ ವ್ಯಕ್ತಿ ಯೌವ್ವನದಲ್ಲಿ ತೀವ್ರ ಮಿತವ್ಯಯದಿಂದ ಬದುಕಿ ₹3.9 ಕೋಟಿ ಉಳಿತಾಯ ಮಾಡಿದ್ದರು. ಆದರೆ, 67ನೇ ವಯಸ್ಸಿನಲ್ಲಿ ಪತ್ನಿಯ ಸಾವಿನ ನಂತರ, ಹಣಕ್ಕಿಂತ ಜೀವನದ ಸುಂದರ ಕ್ಷಣಗಳು ಮತ್ತು ಅನುಭವಗಳಿಗೆ ಆದ್ಯತೆ ನೀಡದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ನಮ್ಮಲ್ಲಿ ಬಹುತೇಕರಿಗೆ ಹಣವನ್ನು ಮುಂದಿನ ಭವಿಷ್ಯಕ್ಕಾಗಿ ಕೂಡಿಡುವ ಅಭ್ಯಾಸವೇ ಇಲ್ಲ. ಎಷ್ಟು ಸ್ಯಾಲರಿ ಬಂತೊ ಅವೆಲ್ಲವನ್ನು ಬೇಕಾಬಿಟ್ಟಿ ಖರ್ಚು ಮಾಡಿ ತಿಂಗಳಾಂತ್ಯಕ್ಕೆ ಯಾರ ಬಳಿಯಾದರೂ ಬೇಡುವ ಸ್ಥಿತಿ ಅನೇಕರದ್ದು. ಇನ್ನು ಕೆಲವರದ್ದು ಹಿತಮಿತವಾದ ಜೀವನ ತಿಂಗಳಿಗೆ 15 ಸಾವಿರ ಸಂಬಳ ಸಿಕ್ಕರೂ ಮಿತವಾಗಿ ವೆಚ್ಚ ಮಾಡುವ ಮೂಲಕ ಜೀವನವನ್ನು ನೆಮ್ಮದಿಯಿಂದ ಜೀವನ ಮಾಡ್ತಾರೆ. ಇನ್ನು ಕೆಲವರು ಹೊಟ್ಟೆಗೆ ಸರಿಯಾಗಿ ತಿನ್ನದೇ ಅಗತ್ಯಗಳಿಗೆ ಖರ್ಚು ಮಾಡದೆ ಕೂಡಿಡುತ್ತಾರೆ. ಇಂತಹವರು ಬೇಗನೇ ಶ್ರೀಮಂತರೇನೋ ಆಗಬಹುದು. ಅದರೆ ಸ್ವಲ್ಪವೂ ಅಗತ್ಯಗಳಿಗೆ ಖರ್ಚು ಮಾಡದೇ ಹೋದರೆ ಮುಂದೆ ಬೇಕಾದಷ್ಟು ಹಣವಿದ್ದರೂ ಛೇ ಸುಮ್ಮನೇ ಕೂಡಿಟ್ಟೆ ಎಂದು ಬೇಸರಿಸುವ ಸ್ಥಿತಿ ಬರಬಹುದು. ಹಾಗೆಯೇ ಇಲ್ಲೊಬ್ಬರು ವೃದ್ಧರಿಗೆ ಯೌವ್ವನದಲ್ಲಿ ಚೆನ್ನಾಗಿಯೇ ಹಣ ಉಳಿತಾಯ ಮಾಡಿ ವೃದ್ಧಾಪ್ಯದಲ್ಲಿ ಶ್ರೀಮಂತರಾಗಿದ್ದರೂ ಅವರಿಗೆ ತಾವು ಈ ರೀತಿ ಕೂಡಿಟ್ಟಿದ್ದಕ್ಕೆ ಬೇಸರವಾಗಿದೆಯಂತೆ..

ಹೌದು ಇಂದಿನ ವೇಗದ ಯುಗದಲ್ಲಿ ವೃದ್ದಾಪ್ಯದಲ್ಲಿ ಯಾರೊಂದಿಗೂ ಕೈ ಚಾಚದೇ ಸ್ವಾಭಿಮಾನದಿಂದ ಬದುಕಲು ಅನೇಕರು ಯೌವ್ವನದಲ್ಲಿ ಸಾಕಷ್ಟು ಕೂಡಿಡುತ್ತಾರೆ. ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಅನೇಕರು ಸಂಪತ್ತನ್ನು ಹೂಡಿಕೆ ಮಾಡುತ್ತಾರೆ. ಕಡಿಮೆ ಖರ್ಚು ಮಾಡಿ ಮತ್ತು ಭವಿಷ್ಯಕ್ಕೆ ತುಸು ಹಣ ಉಳಿಸಿ ಎಂದು ಪೋಷಕರಿಂದ ಹಿಡಿದು ಇನ್ಯ್ಶೂರೆನ್ಸ್ ಸಂಸ್ಥೆಯವರೆಗೂ ಎಲ್ಲರೂ ಬುದ್ಧಿ ಹೇಳುವುದಕ್ಕೆ ಬರುತ್ತಾರೆ. ಈ ಉಳಿತಾಯದ ಮನಸ್ಥಿತಿ ಸ್ಥಿರತೆ ಮತ್ತು ಮನಸ್ಸಿಗೆ ಶಾಂತಿ ನೀಡುತ್ತದೆಯಾದರೂ ಯೌವ್ವನದಂತೆ ವೃದ್ಧಾಪ್ಯದಲ್ಲಿ ಹಣವಿದ್ದರೂ ಎಂಜಾಯ್ ಮಾಡಲಾಗುತ್ತದೆ. ಎಲ್ಲಾದರೂ ಹೋಗಲಾಗುತ್ತದೆಯೇ ಎಂಬುದು. ವಯಸ್ಸಾಗುತ್ತಿದ್ದಂತೆ ಸರಿಯಾಗಿ ತಿನ್ನುವುದಕ್ಕೂ ನಮ್ಮಿಂದಾಗುವುದಿಲ್ಲ. ಹೀಗಿರುವಾಗ ಉಳಿತಾಯ ಮಾಡುವುದರ ಪ್ರಯೋಜನ ಏನು ಎಂಬುದು ಅನೇಕರ ಪ್ರಶ್ನೆ.

ಹಣ ಉಳಿತಾಯದಲ್ಲೇ ಇಡೀ ಜೀವನ ಕಳೆದ ವೃದ್ಧ

ಅದೇ ರೀತಿ ಜಪಾನ್‌ನ ವೃದ್ಧರೊಬ್ಬರಿಗೆ ಯೌವ್ವನದಲ್ಲಿ ಉಳಿತಾಯ ಮಾಡಿ ವೃದ್ಧಾಪ್ಯದಲ್ಲಿ ಶ್ರೀಮಂತನಾಗಿದ್ದಕ್ಕೆ ಬೇಸರವಾಗಿದೆಯಂತೆ. ಹೌದು ಜಪಾನಿನ ಸುಜುಕಿ ಎಂಬ ವ್ಯಕ್ತಿ ದಶಕಗಳಿಂದ ತೀವ್ರವಾದ ಮಿತವ್ಯಯದಿಂದ ಬದುಕುವ ಮೂಲಕ 65 ಮಿಲಿಯನ್ ಯೆನ್ ಉಳಿತಾಯ ಮಾಡಿದ್ದಾರೆ. ಈ ಉಳಿತಾಯದ ಭರದಲ್ಲಿ ಅವರು ಅಗತ್ಯವಾಗಿದ್ದ ಊಟ ಮತ್ತು ಪ್ರವವಾಸದಂತಹ ಖುಷಿಗಳನ್ನು ಮರೆತರು. ಈಗ ಅವರಿಗೆ 67 ವರ್ಷ ವಯಸ್ಸಾಗಿದ್ದು, ಪತ್ನಿಯ ಸಾವಿನ ನಂತರ ತಾವು ಹಂಚಿಕೊಳ್ಳಬೇಕಿದ್ದ ಸುಂದರ ಕ್ಷಣಗಳು ಮತ್ತು ಜೀವನ ಅನುಭವಗಳಿಗಿಂತ ಹಣಕ್ಕೆ ಆದ್ಯತೆ ನೀಡಿದ್ದಕ್ಕಾಗಿ ತೀವ್ರವಾಗಿ ಪಶ್ಚಾತಾಪ ಪಡುತ್ತಿರುವುದಾಗಿ ಸುಜುಕಿ ಹೇಳಿಕೊಂಡಿದ್ದಾರೆ. ಇವರ ಕಥೆ ಆರ್ಥಿಕ ಭದ್ರತೆ ಮತ್ತು ತೃಪ್ತಿಕರವಾದ ಜೀವನ ಇವೆರಡರ ನಡುವೆ ಸಮತೋಲ ಸಾಧಿಸುವುದು ಎಷ್ಟು ಅಗತ್ಯ ಎಂಬುದನ್ನು ಒತ್ತಿ ಹೇಳುತ್ತದೆ.

ಜೀವನವನ್ನು ಸಂಭ್ರಮಿಸದೇ ಹಣ ಉಳಿತಾಯ ಮಾಡಿದ್ದಕ್ಕೆ ಬೇಸರ

ಅನೇಕ ಜನರು ಬೇಗ ಕೆಲಸದಿಂದ ನಿವೃತ್ತಿ ಪಡೆಯಬೇಕು ಎಂದು ಬಯಸುತ್ತಾರೆ ಇದಕ್ಕಾಗಿ ಹಣದಲ್ಲಿ ಸಾಕಷ್ಟು ಉಳಿತಾಯ ಮಾಡುತ್ತಾರೆ. ಆದರೆ ಕೆಲವೊಮ್ಮೆ, ಉಳಿತಾಯದ ಗೀಳು ಜೀವನದ ಸಂತೋಷಗಳನ್ನು ಮರೆಮಾಡಬಹುದು, ಪ್ರೀತಿಪಾತ್ರರೊಂದಿಗೆ ತಿರುಗಾಡುವುದು ಜೊತೆಗೆ ಊಟ ಮಾಡುವುದು ಅವರಿಗಾಗಿ ಸ್ವಲ್ಪ ಹಣ ಖರ್ಚು ಮಾಡುವುದು ಇದ್ಯಾವುದು ಮಾಡದೇ ಹೋದರೆ ನಂತರ ವಿಷಾದ ಪಡಲೇಬೇಕಾಗುತ್ತದೆ.. ಅದೇ ರೀತಿ ಇಲ್ಲಿ ಸುಜುಕಿ ಬಹಳ ಮಿತವ್ಯಯದಿಂದ ನಿಜ ಹೇಳಬೇಕು ಎಂದರೆ ಜಿಪುಣತನದಿಂದಲೇ ಜೀವನ ಮಾಡಿದ್ದರು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಸುಜುಕಿ 65 ಮಿಲಿಯನ್ ಯೆನ್ ಅಂದರೆ ಸುಮಾರು ₹3.9 ಕೋಟಿ ಉಳಿತಾಯ ಮಾಡಿದ್ದರು. ಆದರೂ, 67 ನೇ ವಯಸ್ಸಿನಲ್ಲಿ, ಅವರು ವಿಷಾದದಿಂದ ಹಿಂತಿರುಗಿ ನೋಡುವಂತಾಗಿದೆ.

ಅಂದಹಾಗೆ ಸುಜುಕಿಯವರ ಜೀವನ ಆರಮಭವಾಗಿದೆ ಬಡತನದಿಂದ. ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುತ್ತಲೇ ಓದಬೇಕಾದಂತಹ ಅನಿವಾರ್ಯತೆ ಇತ್ತು. ಹೀಗಾಗಿ ಅವರು ಆರ್ಥಿಕ ಸ್ವಾವಲಂಬನೆಯಲ್ಲಿ ಆಳವಾದ ನಂಬಿಕೆಯನ್ನು ಬೆಳೆಸಿಕೊಂಡರು. ಓದು ಮುಗಿದು ಸಂಪೂರ್ಣವಾಗಿ ದುಡಿಯಲು ಆರಂಭಿಸಿದ ಮೇಲೆ ಮನೆ ಬಾಡಿಗೆ ಉಳಿಸಲು ಅವರು ಕೆಲಸದಿಂದ ದೂರದಲ್ಲಿರುವ ಕಡಿಮೆ ಬೆಲೆಯ ಅಪಾರ್ಟ್ಮೆಂಟ್‌ನಲ್ಲಿ ವಾಸಿಸಲು ಶುರು ಮಾಡಿದರು. ಹಣ ಉಳಿಸುವುದಕ್ಕಾಗಿ ಅವರು ಒಂದು ದಿನವೂ ಹೊರಗೆ ಊಟ ಮಾಡುತ್ತಿರಲಿಲ್ಲ. ವಾಹನದಲ್ಲಿಯೂ ಸಾಗುತ್ತಿರಲಿಲ್ಲ, ಬಳಸಿದರೆ ಸಾರ್ವಜನಿಕ ಸಾರಿಗೆ ಅಥವಾ ಸೈಕಲ್ ಬಳಸುತ್ತಿದ್ದರು. ವಿದ್ಯುತ್ ಬಿಲ್ ಕಡಿಮೆ ಮಾಡುವುದಕ್ಕೆ ಹವಾನಿಯಂತ್ರಣವನ್ನು ಬಳಸುತ್ತಿರಲಿಲ್ಲ. ನಂತರ ಮದುವೆಯೂ ಆಯ್ತು ಮಗುವೂ ಜನಿಸಿತು. ಆದರೆ ಜೀವನ ಮಟ್ಟದಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳಲಿಲ್ಲ. ಆದರೆ ಈಗ ಇಳಿವಯಸ್ಸಿನಲ್ಲಿ ಪತ್ನಿ ತೀರಿಕೊಂಡ ನಂತರ ಅವರಿಗೆ ಜೀವನವನ್ನು ಖುಷಿಯಿಂದ ಬದುಕದೇ ಇಷ್ಟೊಂದು ಹಣ ಉಳಿಸಿದ್ದಕ್ಕೆ ವಿಷಾದ ಮೂಡಿದೆ. ಹಣ ಉಳಿತಾಯದ ಹಿಂದೆ ಬಿದ್ದು, ಜೀವನದ ಮರಳಿ ಬಾರದ ಅಮೂಲ್ಯ ಸಮಯವನ್ನು ಕಳೆದುಕೊಂಡಿರುವುದಕ್ಕೆ ಅವರು ಈಗ ವೃದ್ದಾಪ್ಯದಲ್ಲಿ ಬೇಸರಿಸುತ್ತಿದ್ದಾರೆ. ಈ ವ್ಯಕ್ತಿಯ ಕತೆ ಕೇಳಿ ನಿಮಗೇನನಿಸಿತು ಕಾಮೆಂಟ್ ಮಾಡಿ..

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ