ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ಸಮಂತಾ ರುತ್ ಪ್ರಭು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ವಿವಾಹದ ಸುದ್ದಿ ಚರ್ಚೆಯ ವಿಷಯವಾಗಿದೆ. ಡಿಸೆಂಬರ್ 1, 2025 ರಂದು 38 ವರ್ಷದ ಸಮಂತಾ, ನಿರ್ದೇಶಕ ರಾಜ್ ನಿಡಿಮೋರು (50 ವರ್ಷ) ಅವರನ್ನು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ನಡೆದ ಅತ್ಯಂತ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಅನೇಕ ತಿಂಗಳುಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ಅಂತ್ಯ ಹಾಡುತ್ತಾ ಸಮಂತಾ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡರು. ಇದರಲ್ಲಿ ಅವರು ಕೆಂಪು ಸೀರೆಯಲ್ಲಿ ದೇವತೆಯಂತೆ ಕಾಣುತ್ತಿದ್ದರು.
ಆದರೆ ಹೆಚ್ಚು ಗಮನ ಸೆಳೆದದ್ದು ಅವರ ಮದುವೆಯ ಉಂಗುರ. ಅದರ ಬೆಲೆ ಅತ್ಯಂತ ದುಬಾರಿಯಾಗಿದೆ. ಈ ಬೆರಗುಗೊಳಿಸುವ ಉಂಗುರವು ಪ್ರೀತಿಯನ್ನು ಸಂಕೇತಿಸುವುದಲ್ಲದೆ, ಸಮಂತಾಳ ಬೋಲ್ಡ್ ಸ್ಟೈಲ್ ಪ್ರತಿಬಿಂಬಿಸುತ್ತದೆ.
ಸಮಂತಾ ಮತ್ತು ರಾಜ್ ಜೋಡಿ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇವರು "ದಿ ಫ್ಯಾಮಿಲಿ ಮ್ಯಾನ್ 2" ಮತ್ತು "ಸಿಟಾಡೆಲ್: ಹನಿ ಬನ್ನಿ" ನಂತಹ ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2024 ರಿಂದ ಇವರು ಆತ್ಮೀಯರಾಗಿರುವ ವದಂತಿಗಳು ಹರಡುತ್ತಲೇ ಇತ್ತು. ಆದರೆ ಇಬ್ಬರೂ ಅದನ್ನು ಸಾರ್ವಜನಿಕವಾಗಿ ದೃಢಪಡಿಸಲಿಲ್ಲ. ಆದರೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದ ಫೋಟೋ ನೋಡಿ ಅಭಿಮಾನಿಗಳನ್ನು ಇದನ್ನು ಗೆಸ್ ಮಾಡಿದ್ದರು. ಅಂತಿಮವಾಗಿ ನಿನ್ನೆ ಮುಂಜಾನೆ ನಡೆದ ವಿವಾಹ ಸಮಾರಂಭದಲ್ಲಿ ಕೇವಲ 30 ಆಪ್ತರು ಮಾತ್ರ ಭಾಗವಹಿಸಿದ್ದರು.
ಸಮಂತಾ ಫೋಟೋಗೆ "01.12.2025" ಎಂದು ಸರಳವಾಗಿ ಶೀರ್ಷಿಕೆ ನೀಡಿದ್ದಾರೆ. ಅದು ಫೋಟೋಗಳ ಜೊತೆಗೆ ವೈರಲ್ ಆಗಿದೆ. ರಾಜ್ ಬಿಳಿ ಕುರ್ತಾ ಮತ್ತು ಶೇರ್ವಾನಿಯಲ್ಲಿ ಸರಳವಾಗಿ ಕಾಣುತ್ತಿದ್ದರು. ಆದರೆ ಸಮಂತಾ ಅವರ ಕೆಂಪು ರೇಷ್ಮೆ ಸೀರೆ (ಜರಿ ಬಾರ್ಡರ್‌ನೊಂದಿಗೆ), ಗಜ್ರಾ, ಮೆಹೆಂದಿ ಮತ್ತು ಭಾರವಾದ ಚಿನ್ನದ ಆಭರಣಗಳು ಸಾಂಪ್ರದಾಯಿಕ ವಾತಾವರಣವನ್ನೇ ನಿರ್ಮಾಣ ಮಾಡಿತ್ತು. ಒಂದು ಫೋಟೋದಲ್ಲಿ, ರಾಜ್ ಸಮಂತಾ ಅವರ ಬೆರಳಿಗೆ ಉಂಗುರ ಹಾಕುತ್ತಿರುವುದು ಕಂಡುಬಂದರೆ, ಇನ್ನೊಂದು ಫೋಟೋದಲ್ಲಿ ಅವರನ್ನು ಅಪ್ಪಿಕೊಂಡು ತನ್ನ ಹೊಳೆಯುವ ಉಂಗುರವನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಈ ಕ್ಷಣಗಳು ತುಂಬಾ ಮುದ್ದಾಗಿದ್ದು, ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಪೋಸ್ಟ್ ಹಂಚಿಕೊಂಡ ತಕ್ಷಣ, ಸೆಲೆಬ್ರಿಟಿಗಳಿಂದ ಅಭಿನಂದನಾ ಸಂದೇಶಗಳು ಹರಿದು ಬರಲು ಪ್ರಾರಂಭಿಸಿದವು. ಬಾಲಿವುಡ್‌ನ ಅನನ್ಯಾ ಪಾಂಡೆ ಹನ್ಸಿಕಾ ಮೋಟ್ವಾನಿ, ದಿಯಾ ಮಿರ್ಜಾ, ರಿದ್ಧಿಮಾ ಪಂಡಿತ್ ಮತ್ತು ಉರ್ಫಿ ಜಾವೇದ್ ಕೂಡ ಹೃದಯದ ಇಮೋಜಿ ಹಾಕಿ ಶುಭಾಶಯಗಳನ್ನು ತಿಳಿಸಿದರು. ಎಕ್ಸ್ (ಟ್ವಿಟರ್) ನಲ್ಲಿಯೂ ಸಹ ಫೋಟೋಗಳು ಟ್ರೆಂಡಿಂಗ್ ಆಗುತ್ತಿವೆ. ಬಳಕೆದಾರರು "ಸಮಂತರ ನಗು ನೋಡಿ ಸಂತೋಷವಾಯಿತು! ಹೊಸ ಆರಂಭವಾಗಲಿ!" ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೈಕ್‌ಗಳು ಮತ್ತು ಶೇರ್‌ಗಳನ್ನು ಪಡೆದುಕೊಂಡಿದೆ.
ಸಮಂತಾ ಮದುವೆಯ ಉಂಗುರ ಬಗ್ಗೆ ಈಗ ಎಲ್ಲೆಡೆ ಚರ್ಚೆ ಅಗುತ್ತಿದೆ. ಫೋಟೋಗಳಲ್ಲಿ, ಅವರು ದೊಡ್ಡ ಸ್ಟೋನ್‌ನ ವಿಶಿಷ್ಟವಾದ ಜ್ಯಾಮಿತೀಯ ವಿನ್ಯಾಸದ ಉಂಗುರವನ್ನು ಧರಿಸಿರುವುದು ಕಂಡುಬಂದಿದೆ. ಅದು ಬಹಳ ಮಾಡರ್ನ್ ಆಗಿರುವುದಲ್ಲದೆ, ದೊಡ್ಡದಾಗಿ ಕಾಣುತ್ತದೆ. ಮಾಧ್ಯಮ ವರದಿಗಳ ಪ್ರಕಾರ ಉಂಗುರವು 1.5 ಕೋಟಿ ರೂ.ಮೌಲ್ಯದ್ದಾಗಿದೆ. ಇದು ಸಮಂತಾಳ ಬಲವಾದ ಮತ್ತು ಸ್ವತಂತ್ರ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವ ಸ್ಟೇಟ್‌ಮೆಂಟ್ ಕಾಕ್‌ಟೈಲ್ ಉಂಗುರ ಎಂದು ತಜ್ಞರು ಹೇಳುತ್ತಾರೆ.
ಇದು ಸಮಂತಾರ ಎರಡನೇ ಮದುವೆ. 2017 ರಲ್ಲಿ ನಾಗ ಚೈತನ್ಯ ಜೊತೆ ಅದ್ಧೂರಿಯಾಗಿ ಮದುವೆಯಾದ ಸಮಂತಾ, 2021 ರಲ್ಲಿ ಬೇರೆಯಾಗುವುದಾಗಿ ಘೋಷಿಸಿದರು. ಟಾಲಿವುಡ್‌ನಲ್ಲಿ "ಪವರ್ ಕಪಲ್" ಎಂದು ಪರಿಗಣಿಸಲ್ಪಟ್ಟ ಈ ಜೋಡಿ ವಿಚ್ಛೇದನದ ನಂತರವೂ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದೆ. ನಾಗ ನಂತರ ಶೋಭಿತಾ ಧುಲಿಪಾಲ ಅವರನ್ನು ವಿವಾಹವಾದರು. ರಾಜ್ ಕೂಡ 2015 ರಲ್ಲಿ ಶ್ಯಾಮಲಿ ದೇ ಅವರನ್ನು ವಿವಾಹವಾಗಿದ್ದರು . 2022 ರಲ್ಲಿ ಶ್ಯಾಮಲಿ ದೇ ಅವರಿಗೆ ವಿಚ್ಛೇದನ ಮಾಡಿದರು. ಆದರೆ ಈಗ ಅವರ ಹೊಸ ಆರಂಭವು ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ. "ತಲಾಶ್" ನಂತರ ಸಮಂತಾ ನಿರ್ಮಾಪಕಿಯೂ ಆಗಿದ್ದಾರೆ ಮತ್ತು ರಾಜ್ "ದಿ ಫ್ಯಾಮಿಲಿ ಮ್ಯಾನ್" ಮತ್ತು "ಫರ್ಜಿ" ನಂತಹ ಹಿಟ್‌ಗಳ ನಿರ್ದೇಶಕ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.