
ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಬಳಲುತ್ತಿರುವವರಿಗೆ ಸಿಹಿಸುದ್ದಿ! ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ, ಪಥ್ಯಕ್ರಮವಿಲ್ಲದೆ ನಿಮ್ಮ ಕಲ್ಲನ್ನು ಹೊರಹಾಕಬಹುದು. ಇದಕ್ಕೆ ನೀವು ಮಾಡಬೇಕಿರೋದು ಇಷ್ಟೇ, ಸೀದಾ ಹೋಗಿ ರೋಲರ್ ಕೋಸ್ಟರ್ ಏರುವುದು!
ಇದು ಜೋಕ್ ಅಲ್ಲ. ಅಮೆರಿಕದ ಮಿಚಿಗನ್ ವಿವಿಯ ಕಿಡ್ನಿ ಸ್ಪೆಷಲಿಸ್ಟ್ ಡೇವಿಡ್ ಇದನ್ನು ಸಂಶೋಧನೆ ಮೂಲಕ ಸಾಬೀತುಪಡಿಸಿದ್ದಾರೆ. ರೋಲರ್ ಕೋಸ್ಟರ್ ಸವಾರಿ ಮಾಡುವುದರಿಂದ ಕಲ್ಲುಗಳನ್ನು ಶೇ.70ರಷ್ಟುಹೊರಹಾಕಬಹುದಂತೆ. ಡೇವಿಡ್ ಅವರಿಗೆ ಇದು ಗೊತ್ತಾಗಿದ್ದು ಒಬ್ಬ ರೋಗಿಯ ಮೂಲಕ! ರೋಲರ್ ಕೋಸ್ಟರ್ ಸವಾರಿ ಮಾಡಿದ ನಂತರ ಮೂರ್ನಾಲ್ಕು ಬಾರಿ ಮೂತ್ರಪಿಂಡದ ಕಲ್ಲುಗಳು ಹೊರಬಿದ್ದಿವೆ ಎಂದಾಗ ವೈದ್ಯರಿಗೆ ಅಚ್ಚರಿಯಾಯಿತಂತೆ. ರೋಗಿ ಹೀಗೆ ಹೇಳಿದ್ದನ್ನು ಪ್ರಯೋಗಾತ್ಮಕ ಸಂಶೋಧನೆಗೊಳಪಡಿಸಿದಾಗ ಇದು ಸಾಬೀತಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.