ನಾವು ಕುಡಿಯೋ ಫಿಲ್ಟರ್ ನೀರು ಜೀವಕ್ಕೇ ಮಾರಕ: ಇದು WHO ಕೊಟ್ಟ ವರದಿ

By Suvarna News  |  First Published Jun 12, 2019, 1:06 PM IST

ಶುದ್ಧ ಕುಡಿಯುವ ನೀರು ಎನ್ನುವ ಫಿಲ್ಟರ್ ವಾಟರ್‌ನಿಂದ ಜೀವಕ್ಕೇ ಕುತ್ತು| ಆರೋಗ್ಯಕ್ಕೆ ಒಳ್ಳೆಯದೆಂದರೆ ಅದು ಹೆಡ್ಡತನ| ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯಲ್ಲಿದೆ ಶಾಕಿಂಗ್ ಮಾಹಿತಿ|


ಶುದ್ಧ ನೀರು ಎಂದು ಆರೋಗ್ಯಕ್ಕೆ ಒಳ್ಳೆಯದು. ಹೀಗಂತ ನೀವು ಫಿಲ್ಟರ್ ನೀರಿನ ಮೊರೆ ಹೋದರೆ ಮಾತ್ರ ಬಹಳ ಡೇಂಜರ್. ಹೌದು ನೀವು ಶುದ್ಧ ನೀರು, ಆರೋಗ್ಯವಂತರಾಗಿರಬಹುದು ಎಂದು ಸೇವಿಸುವ ನೀರು ಈಗ ಪ್ರಾಣಕ್ಕೆ ಸ್ಲೋ ಪಾಯ್ಸನ್‌ನಂತೆ ನಿಮ್ಮ ಜೀವಕ್ಕೆ ಮಾರಕವಾಗಿ ಮಾರ್ಪಾಡಾಗುತ್ತಿದೆ. ಈ ಕುರಿತಾಗಿ ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆ ನೀಡಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ವಿವರ

ಚರಂಡಿ ನೀರಿನ ಬಿಯರ್‌ಗೆ ಡಿಮ್ಯಾಂಡೋ ಡಿಮ್ಯಾಂಡ್

Tap to resize

Latest Videos

undefined

ರಿವರ್ಸ್ ಆಸ್ಮೋಯ್ಸಿಸ್/ಆರ್ ಒ ಫಿಲ್ಟರ್ ವಾಟರ್ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಷ್ಟೇ ಅಲ್ಲದೇ, ನೀರಿನಲ್ಲಿರುವ ಉಪ್ಪಿನಾಂಶ ಹಾಗೂ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂನಂತಹ ಅಗತ್ಯ ಪೋಷಕಾಂಶಗಳನ್ನೂ ತೆಗೆದು ಹಾಕುತ್ತದೆ. ಹೀಗಿರುವಾಗಲೇ ಸರ್ಕಾರವೂ  'ಶುದ್ಧ ಕುಡಿಯುವ ನೀರಿನ ಘಟಕ' ಎಂಬ ಹೆಸರಿನಲ್ಲಿ RO ಫಿಲ್ಟರ್ ಪ್ಲಾಂಟ್ ಗಳನ್ನು ಸ್ಥಾಪಿಸುತ್ತಿದೆ. ಹೀಗಿರುವಾಗ ಕಡಿಮೆ ಬೆಲೆಗೆ ನೀರು ಸಿಗುತ್ತದೆ ಎಂದು ಅದನ್ನೇ ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗದೆ ಅನಾರೋಗ್ಯ ಬಾಧಿಸುವುದರಲ್ಲಿ ಅನುಮಾನವಿಲ್ಲ.

ಆರ್‌ಒ ಪ್ಯುರಿಫೈಯರ್ ನಿಷೇಧಕ್ಕೆ ಆದೇಶ

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಎ. ಆರ್. ಶಿವಕುಮಾರ್ 'ವಾಟರ್ ಫಿಲ್ಟರ್ ಉದ್ಯಮ ಮಾಫಿಯಾವಾಗಿ ಮಾರ್ಪಾಡಾಗಿದೆ. ಹೀಗಾಗಿ ಅವರ ಉದ್ಯಮಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ಅಧ್ಯಯನವನ್ನು ಅವರು ಒಪ್ಪಿಕೊಳ್ಳುವುದಿಲ್ಲ' ಎಂದಿದ್ದಾರೆ.

click me!