ಶೇವಿಂಗ್ ಬಳಿಕ ತುರಿಸುವುದು ಸಾಮಾನ್ಯ ಸಮಸ್ಯೆ. ಹಾಗಂತ ತುರಿಕೆ ಅನುಭವಿಸುವುದು ಸುಲಭವಲ್ಲ. ಶೇವ್ ಆದ ನಂತರ ತುರಿಕೆ, ಉರಿ, ಬಾವು ಉಂಟಾದರೆ ಮನೆಯಲ್ಲೇ ಅದಕ್ಕೆ ಒಂದಿಷ್ಟು ಚಿಕಿತ್ಸೆ ಮಾಡಿಕೊಂಡು ನೋಡಿ.
ಕೆಲವರಿಗೆ ರೇಜರ್ ಬ್ಲೇಡ್ ಎಂದರೆ ಅಲರ್ಜಿ. ಅಂಥವರಿಗೆ ಪ್ರತಿ ಬಾರಿ ಶೇವ್ ಮಾಡಿದಾಗಲೂ ತುರಿಕೆ, ಕೆಂಪಾಗುವುದು, ಗುಳ್ಳೆಗಳಾಗುವುದು ಮುಂತಾದ ಕಿರಿಕಿರಿಗಳು ತಪ್ಪಿದ್ದಲ್ಲ. ಆದರೆ, ಈ ತುರಿಕೆ ನಿಲ್ಲಿಸಲು ಮನೆಯಲ್ಲೇ ಕೆಲ ಸರಳ ಚಿಕಿತ್ಸೆ ಮಾಡಿಕೊಳ್ಳಬಹುದು.
1. ಒಮ್ಮೆ ಶೇವ್ ಮಾಡಿ ತುರಿಕೆ ಆರಂಭವಾದರೆ, ದೇಹದ ಆ ಭಾಗಕ್ಕೆ ಸ್ವಲ್ಪ ರೆಸ್ಟ್ ಕೊಡಿ. ತುರಿಕೆ ಪೂರ್ತಿ ಗುಣವಾಗುವವರೆಗೆ ಮತ್ತೆ ಮತ್ತೆ ಮುಟ್ಟಿಕೊಳ್ಳುವುದು ಅಥವಾ ಶೇವ್ ಮಾಡುವುದು ಬೇಡ. ಇದರಿಂದ ತ್ವಚೆಯ ಸ್ಥಿತಿ ಮತ್ತಷ್ಟು ಕೆಡುತ್ತದೆ. ಕೆಲ ದಿನಗಳ ಕಾಲ ಆ ತ್ವಚೆ ತನ್ನ ಪಾಡಿಗೆ ತಾನಿರಲಿ. ಪರಿಮಳರಹಿತವಾದ ಉತ್ಪನ್ನಗಳನ್ನು ಮಾತ್ರ ಬಳಸಿ.
ಪುರುಷ ಬಂಜೆತನ: ಸಿಗರೇಟ್ ಸೇದುವ ಅಪ್ಪಂದಿರೇ ಮಕ್ಕಳಿಗೆ ವಿಲನ್!
2. ತುರಿಕೆ ಅಥವಾ ರೆಡ್‌ನೆಸ್ ಇರುವ ಭಾಗಕ್ಕೆ ಐಸ್‌ಪ್ಯಾಕ್ ಇಡಿ. ಐಸ್‌ಪ್ಯಾಕನ್ನು ಟವೆಲ್‌ನಲ್ಲಿ ಸುತ್ತಿ ಅಥವಾ ಒದ್ದೆ ಬಟ್ಟೆಯನ್ನಿಡಿ. ಸುಮಾರು 20 ನಿಮಿಷಗಳ ಕಾಲ ಐಸ್‌ಪ್ಯಾಕ್ ಇಡುವುದರಿಂದ ತುರಿಕೆ ಮತ್ತು ಉರಿ ನಿಯಂತ್ರಣಕ್ಕೆ ಬರುತ್ತದೆ. ಈ ವಿಧಾನವನ್ನು ದಿನದಲ್ಲಿ ಹಲವು ಬಾರಿ ಪ್ರಯತ್ನಿಸಬಹುದು. ಆದರೆ ಎಂದಿಗೂ ಐಸ್‌ಪ್ಯಾಕನ್ನು ನೇರವಾಗಿ ಚರ್ಮದ ಮೇಲಿಟ್ಟುಕೊಳ್ಳಬೇಡಿ. ಒದ್ದೆ ಬಟ್ಟೆಯನ್ನಿಡುತ್ತೀರಾದರೆ, ಬಟ್ಟೆಯನ್ನು ತಣ್ಣೀರಿನಲ್ಲಿ ಅದ್ದಿ. ಕೆಲ ನಿಮಿಷ ಫ್ರೀಜರ್‌ನಲ್ಲಿಟ್ಟೂ ತೆಗೆಯಬಹುದು.
3. ಅಲೋವೆರಾ ತುರಿಕೆ ತಡೆಯಲು ಸಹಾಯಕ. ಹೀಗಾಗಿ, ತುರಿಕೆ ಇರುವ ಭಾಗಕ್ಕೆ ಅಲೋವೆರಾ ಜೆಲ್ ಹಚ್ಚಿ. ಮನೆಯಲ್ಲಿ ಅಲೋವೆರಾ ಗಿಡವಿದ್ದಲ್ಲಿ ಫ್ರೆಶ್ ಎಲೆ ಕತ್ತರಿಸಿ, ಒಳಗಿನ ಜೆಲ್ ತೆಗೆದು ಹಚ್ಚಿ.
4.ರೆಡ್‌ನೆಸ್, ತುರಿಕೆ, ಉರಿ ಇದ್ದ ಭಾಗಕ್ಕೆ ಆ್ಯಸ್ಟ್ರಿಜೆಂಟ್ ಹಚ್ಚಿ. ತಣ್ಣಗಿನ ಬ್ಲ್ಯಾಕ್ ಟೀ, ಆ್ಯಪಲ್ ಸೈಡರ್ ವಿನೆಗರ್, ಡೈಲ್ಯೂಟ್ ಮಾಡಿದ ಟೀ ಟ್ರೀ ಆಯಿಲ್ ಯಾವುದನ್ನು ಬೇಕಾದರೂ ಬಳಸಬಹುದು.
5. ಕೊಬ್ಬರಿಎಣ್ಣೆ, ಆಲಿವ್ ಆಯಿಲ್, ಆಲ್ಮಂಡ್ ಆಯಿಲ್ ಯಾವುದಾದರೂ ತೈಲವನ್ನು ತುರಿಕೆಯಿದ್ದ ಜಾಗಕ್ಕೆ ನಯವಾಗಿ ಸವರಿ. ಇದರಿಂದ ತ್ವಚೆ ಸಾಫ್ಟ್ ಆಗುತ್ತದೆ. ತುರಿಕೆ ನಿಲ್ಲುತ್ತದೆ. ನೀವು ಬೇಕಿದ್ದರೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಬಹುದು, ಇಲ್ಲವೇ ಕೈಗಳಲ್ಲೇ ಉಜ್ಜಿ ಬಿಸಿಯಾಗಿಸಬಹುದು. ಮತ್ತೊಂದು ಆಯ್ಕೆಯಾಗಿ ನಿಮ್ಮ ಮಾಯಿಶ್ಚರೈಸಿಂಗ್ ಇಲ್ಲವೇ ಎಮೋಲಿಯೆಂಟ್ ಲೋಶನ್‌ನ್ನು ಹಚ್ಚಬಹುದು. ಆದರೆ, ಅದರಲ್ಲಿ ಆಲ್ಕೋಹಾಲ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ತುರಿಕೆ ಮತ್ತಷ್ಟು ಗಂಭೀರವಾಗಬಹುದು.
ಪ್ರತಿ ದಿನ ಗಾಸಿಪ್ ಮಾಡಲೆಂದೇ 52 ನಿಮಿಷ ಮೀಸಲಿಡುತ್ತೇವಂತೆ!
6. ಓಟ್‌ಮೀಲ್‌ನಿಂದ ಒಮ್ಮೆ ಸ್ನಾನ ಮಾಡಿ ನೋಡಿ. ಮುಖ ಇಲ್ಲವೇ ತಲೆಯಲ್ಲಿ ತುರಿಕೆಯಾದರೆ ಓಟ್ಸ್‌ನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಅದಕ್ಕೆ ಮೊಸರು, ಜೇನುತುಪ್ಪ ಸೇರಿಸಿ ಮಾಸ್ಕ್‌ನಂತೆ ಹಚ್ಚಿ 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಮೈಯ್ಯಲ್ಲಿ ತುರಿಕೆಯಾದರೆ ಕೊಲೈಡಲ್ ಓಟ್‌ಮೀಲನ್ನು ಟಬ್ ನೀರಿಗೆ ಸೇರಿಸಿಕೊಂಡು ಅದರಲ್ಲಿ ಅರ್ಧ ಗಂಟೆ ಕುಳಿತರೂ ಆದೀತು. ಇದು ಉರಿಯನ್ನು ಕಡಿಮೆ ಮಾಡುತ್ತದೆ.
7. ಒಂದು ಚಮಚ ಬೇಕಿಂಗ್ ಸೋಡಾವನ್ನು ಒಂದು ಕಪ್ ನೀರಿಗೆ ಹಾಕಿ. ಇದಕ್ಕೆ ಹತ್ತಿಯನ್ನು ಅದ್ದಿ, ತುರಿಕೆ ಇರುವ ಭಾಗಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ವಿಧಾನವನ್ನು ದಿನಕ್ಕೆರಡು ಬಾರಿಯಂತೆ ಮಾಡಿನೋಡಿ.
8. ಓಟಿಸಿ ಹೈಡ್ರೋಕಾರ್ಟಿಸೋನ್ ಕ್ರೀಮ್ ಹಚ್ಚಿನೋಡಿ. ಇದನ್ನು ಕೇವಲ ತುರಿಕೆ ಹಾಗೂ ಉರಿ ಇರುವ ಚರ್ಮದ ಮೇಲೆ ಮಾತ್ರ ಬಳಸಿ. ಕೆಲವರಿಗೆ ಇದು ಆಗಿಬರುವುದಿಲ್ಲ. ಆಯಿಂಟ್‌ಮೆಂಟ್ ಹಚ್ಚಿದ ಬಳಿಕ ತುರಿಕೆ, ಉರಿ ಹೆಚ್ಚಾದರೆ ತಕ್ಷಣ ನೀರಿನಿಂದ ತೊಳೆದುಕೊಳ್ಳಿ.
9. ಇಷ್ಟರಲ್ಲಿ ಯಾವ ವಿಧಾನವೂ ನಿಮಗೆ ಸಹಾಯವಾಗಲಿಲ್ಲವೆಂದರೆ ವೈದ್ಯರನ್ನು ಭೇಟಿಯಾಗಿ. ಶೇವಿಂಗ್ ಬಳಿಕ ತುರಿಕೆ ಸಾಮಾನ್ಯವಾಗಿದ್ದು, ಕೆಲ ದಿನಗಳಲ್ಲಿ ಅದು ಹೋಗಬೇಕು. ಆದರೆ, ಕೆಲವರಿಗೆ ಶೇವ್ ಮಾಡಿದ ಜಾಗದಲ್ಲಿ ಇನ್ಫೆಕ್ಷನ್ ಆಗಬಹುದು. ಇದಕ್ಕೆ ಚಿಕಿತ್ಸೆ ಆಗಲೇಬೇಕು. ಅತಿಯಾದ ರೆಡ್‌ನೆಸ್, ಚಕ್ಕೆ ಏಳುವುದು, ಕೀವು, ಚರ್ಮ ಒಡೆಯುವುದು, ನೋವು ಹಾಗೂ ಬಾವು ಇದ್ದರೆ ವೈದ್ಯರನ್ನು ಕಾಣಲು ತಡ ಮಾಡಬೇಡಿ.