
ನವದೆಹಲಿ (ಆ.04) ಭಾರತದಲ್ಲಿ ಹಲವು ಮದ್ಯಗಳು ಜನಪ್ರಿಯವಾಗಿದೆ. ಈ ಪೈಕಿ ಓಲ್ಡ್ ಮಾಂಕ್ ರಮ್ ಬಹುತೇಕರ ನೆಚ್ಚಿನ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಓಲ್ಡ್ ಮಾಂಕ್ ಗುಟುಕು ಹಲವರನ್ನು ಬೆಚ್ಚಗಾಗಿಸುತ್ತದೆ. ಆದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಇದೀಗ ಓಲ್ಡ್ ಮಾಂಕ್ ಸೇರಿದಂತೆ ಕೆಲ ವಿಸ್ಕಿ ಪ್ರಿಯರಿಗೆ ಶಾಕ್ ನೀಡಿದೆ. ಓಲ್ಡ್ ಮಾಂಕ್, ಆಂಟಿಕ್ವಿಟಿ ಬ್ಲೂ, ರಾಯಲ್ ಚಾಲೆಂಜ್ ಮತ್ತು ಬ್ಯಾಗ್‌ಪೈಪರ್ ಡೆಲಕ್ಸ್ ಸೇರಿದಂತೆ ಕೆಲ ವಿಸ್ಕಿ ಹಾಗೂ ರಮ್ ಬ್ರ್ಯಾಂಡ್ ಮಾರಾಟ ಬ್ಯಾನ್ ಮಾಡಿದೆ.
FSSAI ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತದಲ್ಲಿ ಅತ್ಯಂತ ಹಳೇ ರಮ್ ಬ್ರ್ಯಾಂಡ್‌ಗಳಲ್ಲಿ ಓಲ್ಡ್ ಮಾಂಕ್ ಕೂಡ ಒಂದು. ಇನ್ನು ಆ್ಯಂಟಿಕ್ವಿಟಿ , ರಾಯಲ್ ಚಾಲೆಂಜ್, ಬ್ಯಾಗ್‌ಪೈಪರ್ ಸೇರಿದಂತೆ ಕೆಲ ವಿಸ್ಕಿ ಹಾಗೂ ರಮ್ ಬ್ರ್ಯಾಂಡ್‌ಗಳಲ್ಲಿ ಕೃತಕ ಫ್ಲೇವರ್ ಬಳಸುತ್ತಿರುವುದನ್ನು FSSAI ಪತ್ತೆ ಹಚ್ಚಿದೆ. ಇಷ್ಟೇ ಅಲ್ಲ ದಾರಿತಪ್ಪಿಸುವ ಮಾಹಿತಿ ನೀಡಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಗಂಭೀರ ನಿಯಮಗಳ ಉಲ್ಲಂಘನೆ ಮಾಡಿರುವ ಬ್ರ್ಯಾಂಡ್‌ಗಳನ್ನು FSSAI ಬ್ಯಾನ್ ಮಾಡಿದೆ.
ರಮ್, ವಿಸ್ಕಿ ತಯಾರಿಕೆಯಲ್ಲಿ ಬೆಲ್ಲದ ರಸ, ಮಾಲ್ಟ್ ಅಥವಾ ದ್ರಾಕ್ಷಿ ಬಳಸಿ ನೈಸರ್ಗಿಕವಾಗಿ ಫರ್ಮಂಟೇಶನ್ ಮಾಡಲಾಗುತ್ತದೆ. ಬಳಿಕ ಮ್ಯಾಚ್ಯುರೇಶನ್ ಮೂಲಕ ನೈಸರ್ಗಿಕ ಸುವಾಸನೆ ಬರುತ್ತದೆ. ಆದರೆ ಕೆಲ ಮಧ್ಯ ತಯಾರಿ ಕಂಪನಿಗಳು ನ್ಯೂಟ್ರಲ್ ಮದ್ಯಕ್ಕೆ ಕೃತಕ ರಮ್ ಫ್ಲೇವರ್, ವಿಸ್ಕಿ ಫ್ಲೇವರ್ ಬೆರೆಸಿ ಮಾರಾಟ ಮಾಡುತ್ತಿದೆ. ಇದು FSSAI ಪ್ರಯೋಗದಲ್ಲಿ ಪತ್ತೆಯಾಗಿದೆ. ಓಲ್ಡ್ ಮಾಂಕ್, ಆ್ಯಂಟಿಕ್ವಿಟಿ, ರಾಯಲ್ ಚಾಲೆಂಜ್, ಬ್ಯಾಗ್‌ಪೈಪರ್ ಡಿಲಕ್ಸ್ ಸೇರಿದಂತೆ ಕೆಲ ಬ್ರ್ಯಾಂಡ್‌ಗಳು ನ್ಯೂಟ್ರಲ್ ಅಲ್ಕೋಹಾಲ್‌ಗೆ ಫ್ಲೇವರ್ ಬಳಸಿ ಗ್ರಾಹಕರಿ ನೀಡುತ್ತಿದೆ. ಹೀಗಾಗಿ FSSAI ಈ ಮದ್ಯಗಳನ್ನು ಭಾರತದಲ್ಲಿ ಬ್ಯಾನ್ ಮಾಡಿದೆ.
ನ್ಯೂಟ್ರಲ್ ಮದ್ಯಗಳಿಗೆ ಕೃತಕ ಫ್ಲೇವರ್ ಬಳಸುವ ಯಾವುದೇ ಮಾನ್ಯತೆ ಪದ್ಧತಿಗಳು ಜಗತ್ತಿನಲ್ಲಿ ಇಲ್ಲ. ಕೃತಕ ಫ್ಲೇವರ್ ಮೂಲಕ ಜನರಿಗೆ ಮೋಸ ಮಾಡಿದ್ದು ಮಾತ್ರವಲ್ಲ, ಆರೋಗ್ಯ, ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದೆ. ಯಾವುದೇ ಕೃತಕ ಫ್ಲೇವರ್ ಬಳಸಿದರೆ ಲೇಬಲ್ ಮೇಲೆ ಸ್ಪಷ್ಟವಾಗಿ ಫ್ಲೇವರ್ಡ್ ರಮ್ ಅಥವಾ ಫ್ಲೇವರ್ಡ್ ವಿಸ್ಕಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಆದರೆ ಮದ್ಯ ಕಂಪನಿಗಳು ಇದನ್ನೂ ಉಲ್ಲಂಘಿಸಿದೆ ಎಂದು FSSAI ಹೇಳಿದೆ. ಇನ್ನು 7 ವರ್ಷ ಹಳೇ ಮಧ್ಯ, 12 ವರ್ಷ ಹಳೇ ಮದ್ಯ ಎಂದು ಲೇಬಲ್ ಹಾಕಲಾಗಿದೆ. ಆದರೆ ಈ ಮದ್ಯ ಪ್ರಯೋಗಾಲಯದಲ್ಲಿ ಒಂದು ವರ್ಷವೂ ಬ್ಲೆಂಡ್ ಮಾಡದೇ ನೀಡಲಾಗುತ್ತಿತ್ತು ಅನ್ನೋದು ಸಾಬೀತಾಗಿದೆ.
ಓಲ್ಡ್ ಮಾಂಕ್ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳನ್ನು ತಕ್ಷಣದಿಂದಲೇ ಮಾರಾಟ ಬ್ಯಾನ್ ಮಾಡಲಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ತೆರಿಗೆ ಕಡಿತಗೊಳಿಸಿದ ಪರಿಣಾಮ ಮದ್ಯ ಮಾರಾಟದಲ್ಲಿ ಭಾರಿ ಏರಿಕೆ ಕಂಡಿತ್ತು. ಹಲವು ಜನಪ್ರಿಯ ಬ್ರ್ಯಾಂಡ್‌ಗಳ ಮೇಲಿನ ಬೆಲೆ ಕಡಿತಗೊಂಡಿತ್ತು. ಈ ಪಟ್ಟಿಯಲ್ಲಿ ಈಗ ಬ್ಯಾನ್ ಮಾಡಿರುವ ಬ್ರ್ಯಾಂಡ್‌ಗಳು ಸೇರಿತ್ತು. ಮಾರಾಟದಲ್ಲಿ ಗರಿಷ್ಠ ದಾಖಲೆ ಕಾಣುತ್ತಿದ್ದಂತೆ FSSAI ಈ ನಿರ್ಧಾರ ಮದ್ಯ ಕಂಪನಿಗಳಿಗೆ ಶಾಕ್ ಕೊಟ್ಟಿದೆ.
ವಿಶೇಷ ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ. ಈ ಸುದ್ದಿ ಕೇವಲ ಮದ್ಯ ಬ್ರ್ಯಾಂಡ್ ನಿಷೇಧ ಮಾಹಿತಿಗಾಗಿ ಮಾತ್ರ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.