ಹಾವು ಹಾಗೂ ಶ್ರೀಗಂಧ ಮರದ ಮಧ್ಯೆ ವಿಶೇಷ ನಂಟಿದೆ. ಗಂಧದ ಮರಕ್ಕೆ ಹಾವುಗಳು ಜೋತ್ಬೀಳೋದು ಹೆಚ್ಚು. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಶ್ರೀಗಂಧದ ಮರ (Sandalwood tree) ಪವಿತ್ರ ಎಂದು ಹಿಂದೂ ಧರ್ಮ (Hinduism) ದಲ್ಲಿ ನಂಬಲಾಗಿದೆ. ಶ್ರೀಗಂಧವನ್ನು ಶುಭ ಸಂದರ್ಭಗಳಲ್ಲಿ ಬಳಕೆ ಮಾಡಲಾಗುತ್ತದೆ. ಪವಿತ್ರ ಮರಕ್ಕೆ ವಿಷಕಾರಿ ಹಾವು (poisonous snakes) ಅಂಟಿಕೊಂಡಿರುವುದನ್ನು ನೀವು ನೋಡ್ಬಹುದು. ಶ್ರೀಗಂಧದ ಮರಕ್ಕೆ ಹಾವು ಸುತ್ತಿಕೊಂಡಿರುತ್ತದೆ. ಮರ ತಂಪಾಗಿರೋದು ಇದಕ್ಕೆ ಕಾರಣ ಅಂತ ಹಿರಿಯರು ಹೇಳ್ತಿರುತ್ತಾರೆ. ಮಹಾಕವಿ ರಹೀಮ್ ತಮ್ಮ ದ್ವಿಪದಿಯಲ್ಲಿ ಇದನ್ನು ಉಲ್ಲೇಖ ಮಾಡಿದ್ದಾರೆ. ಶ್ರೀಗಂಧದ ಮರಕ್ಕೆ ಹಾವುಗಳು ಅಂಟಿಕೊಂಡಿದ್ದರೂ ಅದರ ಸುಗಂಧಕ್ಕೆ ಹಾವಿನ ವಿಷ ಅಡ್ಡಿಯಾಗುವುದಿಲ್ಲ ಎಂದಿದ್ದಾರೆ. ಶ್ರೀಗಂಧದ ಮರಕ್ಕೆ ಯಾಕೆ ಹಾವುಗಳು ಹೆಚ್ಚು ಸುತ್ತಿಕೊಂಡಿರುತ್ತವೆ ಎಂಬುದಕ್ಕೆ ಇದೇ ಕಾರಣ ಎಂಬುದಿಲ್ಲವಾದ್ರೂ ವಿಜ್ಞಾನಿ (scientist) ಗಳು ಕೆಲ ಕಾರಣವನ್ನು ಹೇಳಿದ್ದಾರೆ. ಹಾವು, ಆಹಾರ, ಸೂಕ್ತ ತಾಪಮಾನವನ್ನು ಬಯಸುತ್ತದೆ. ಅದಕ್ಕೆ ಎಲ್ಲವೂ ಈ ಶ್ರೀಗಂಧದ ಮರದಲ್ಲಿ ಸಿಗುವ ಕಾರಣ, ಅದು ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗಂಧದ ಮರಕ್ಕೆ ಹಾವು ಸುತ್ತಿಕೊಂಡಿರಲು ಕಾರಣವೇನು ಎಂಬ ವಿವರ ಇಲ್ಲಿದೆ.
ಸ್ತನ ದೊಡ್ಡದಿದ್ರೆ ಬ್ಯೂಟಿ ಹೆಚ್ಚುತ್ತೆಂದು ಬೀಗಬೇಡಿ, ಕ್ಯಾನ್ಸರ್‌ಗೂ ಮಾಡಿ ಕೊಡುತ್ತೆ ದಾರಿ!
ಹಾವುಗಳನ್ನು ಆಕರ್ಷಿಸುತ್ತದೆ ಶ್ರೀಗಂಧ ಮರದ ಸುಹಾಸನೆ : ಶ್ರೀಗಂಧದ ಮರದ ಪರಿಚಯ ನಿಮಗಿಲ್ಲ ಎಂದಾದ್ರೆ ಅದ್ರ ಬಳಿ ಹೋಗಿ ನಿಂತರೂ ನಿಮಗೆ ಅದು ಶ್ರೀಗಂಧದ ಮರ ಎಂಬುದು ಗೊತ್ತಾಗೋದಿಲ್ಲ. ಕಾರಣ, ದೂರದಿಂದ ಮರ ತನ್ನ ಸುವಾಸನೆಯನ್ನು ಹೊರಸೂಸುವುದಿಲ್ಲ. ಅದರ ತೊಗಟೆಯನ್ನು ಉಜ್ಜಿದಾಗಲೇ ನಿಮಗೆ ಸುವಾಸನೆ ಬರುತ್ತದೆ. ಆದ್ರೆ ಹಾವುಗಳಿಗೆ ಇದ್ರ ವಾಸನೆ ಸಿಗುತ್ತೆ ಎನ್ನಲಾಗಿದೆ. ಹಾವುಗಳಿಗೆ ಅದ್ಭುತವಾದ ವಾಸನೆಯ ಸಾಮರ್ಥ್ಯವಿದೆ. ಅನೇಕ ಅಧ್ಯಯನದಿಂದ ಇದು ಸಾಭಿತಾಗಿದೆ. ಹಾವುಗಳು ಮೂಗಿನ ಹೊಳ್ಳೆಗಳ ಮೂಲಕ ಮಾತ್ರವಲ್ಲದೆ ನಾಲಿಗೆಯ ಮೇಲ್ಭಾಗದ ಮೂಲಕವೂ ವಾಸನೆಯನ್ನು ಪತ್ತೆ ಮಾಡುತ್ತವೆ. ಶ್ರೀಗಂಧದ ಮರದ ವಾಸನೆ ಹಾವುಗಳಿಗೆ ಅಮಲೇರಿಸುತ್ತವೆ. ದೂರದಿಂದಲೇ ಮರಗಳ ವಾಸನೆ ಪತ್ತೆ ಮಾಡುವ ಹಾವುಗಳು, ಶ್ರೀಗಂಧದ ಮರ ಸಿಕ್ಕಲ್ಲಿ ಬಿಡೋದಿಲ್ಲ. ಶ್ರೀಗಂಧ ಮರದಂತೆ ಮಲ್ಲಿಗೆ ಹೂವಿನ ಪರಿಮಳ, ಹಾವನ್ನು ಆಕರ್ಷಿಸುತ್ತವೆ. ಮಲ್ಲಿಗೆ ಗಿಡದ ಸುತ್ತಮುತ್ತಲೂ ನೀವು ಹಾವುಗಳಿರೋದನ್ನು ಕಾಣ್ಬಹುದು.
ತಂಪಾದ ಶ್ರೀಗಂಧ ಮರ : ಶ್ರೀಗಂಧ ಮರ ಸ್ವಭಾವದಲ್ಲಿ ತುಂಬಾ ತಂಪಾಗಿರುತ್ತದೆ. ಅದ್ರಲ್ಲಿರುವ ದಟ್ಟ ಎಲೆಗಳು, ಶಾಖವನ್ನು ಕಡಿಮೆ ಮಾಡುತ್ತವೆ. ಹಾವುಗಳು ತಂಪಾದ ಮತ್ತು ಗಾಢವಾದ ಸ್ಥಳಗಳಲ್ಲಿ ವಾಸಿಸಲು ಇಷ್ಟಪಡುತ್ತವೆ. ಇದಕ್ಕೆ ಕಾರಣ ಎಕ್ಟೋಥರ್ಮ್. ಈ ವರ್ಗಕ್ಕೆ ಸೇರುವ ಸರಿಸೃಪಗಳು, ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಲು ಬಾಹ್ಯ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತವೆ. ಹಾವುಗಳು ಪೊದೆಗಳಲ್ಲಿ, ನೀರಿನ ಹತ್ತಿರ ಅಥವಾ ರಂಧ್ರಗಳಲ್ಲಿ ವಾಸಿಸಲು ಇಷ್ಟಪಡುತ್ತವೆ. ಟ್ಯೂಬೆರೋಸ್, ಶ್ರೀಗಂಧ ಮತ್ತು ಮಲ್ಲಿಗೆಯ ಉಷ್ಣತೆಯು ಇತರ ಮರಗಳು ಮತ್ತು ಸಸ್ಯಗಳಿಗಿಂತ ತುಂಬಾ ಕಡಿಮೆ. ಅದಕ್ಕಾಗಿಯೇ ಹಾವುಗಳು ಅವುಗಳ ಮೇಲೆ ಹೆಚ್ಚು ವಾಸಿಸುತ್ತವೆ. ಎಲೆಗಳ ಮಧ್ಯೆ ತಂಪಾದ ಜಾಗದಲ್ಲಿ ಹಾವುಗಳು ಹಾಯಾಗಿ ವಾಸಮಾಡುತ್ತವೆ.
ಆಹಾರಕ್ಕೆ ಕೊರತೆ ಇಲ್ಲ : ಇನ್ನು ಶ್ರೀಗಂಧ ಮರಕ್ಕೆ ಜೋತು ಬೀಳುವ ಹಾವುಗಳಿಗೆ ಆಹಾರ ಹುಡುಕುವ ತಾಪತ್ರಯವಿಲ್ಲ. ಶ್ರೀಗಂಧದ ಮರ ತಂಪಾಗಿರುವ ಕಾರಣ, ಅನೇಕ ಕೀಟಗಳು ಈ ಮರದ ಬಳಿ ಬರುತ್ತವೆ. ಅಲ್ಲಿಯೇ ಕೀಟಗಳನ್ನು ತಿಂದು ಅವು ಹೊಟ್ಟೆ ತುಂಬಿಸಿಕೊಳ್ಳುತ್ತವೆ.
ಕೋರಿಯನ್ನರಂತೆ ಸ್ಲಿಮ್ ಕಾಣಬೇಕಾ? ಈ ಡಯಟ್ ಆಹಾರ ಸೇವಿಸಿ ತೂಕ ಇಳಿಸಿ!
ಕರ್ನಾಟಕ, ಮಹಾರಾಷ್ಟ್ರದಲ್ಲಿ ಶ್ರೀಗಂಧ ಮರಗಳ ಸಂಖ್ಯೆ ಹೆಚ್ಚಿದೆ. ಶ್ರೀಗಂಧದ ಮರ ತಾನೇ ಆಹಾರವನ್ನು ಉತ್ಪಾದಿಸುವುದಿಲ್ಲ. ಅದು ಆಹಾರ ಮತ್ತು ನೀರಿಗೆ ಬೇರೆ ಮರವನ್ನು ಅವಲಂಭಿಸಿರುತ್ತದೆ. ಇತರ ಮರಗಳ ಮೂಲಕ ನೀರನ್ನು ಹೀರಿಕೊಳ್ಳುತ್ತದೆ. ಇನ್ನು ಭಾರತದಲ್ಲಿ ಸುಮಾರು 300ಕ್ಕೂ ಹೆಚ್ಚು ಹಾವಿನ ಪ್ರಭೇದಗಳಿವೆ. ಪ್ರತಿ ವರ್ಷ 1500ಕ್ಕೂ ಹೆಚ್ಚು ಮಂದಿ ಹಾವು ಕಚ್ಚಿ ಸಾಯ್ತಿದ್ದಾರೆ.