Viral Video: ಪ್ರಧಾನಿಯಿಂದಲೂ ಶೇರ್‌ ಆಯ್ತು ಪುಟ್ಟ ಬಾಲಕಿ ಶಾಲ್ಮಲಿಯ 'ಪಲ್ಲವಗಳ ಪಲ್ಲವಿಯಲಿ'

Published : Apr 25, 2023, 11:12 AM ISTUpdated : Apr 25, 2023, 11:22 AM IST
Viral Video: ಪ್ರಧಾನಿಯಿಂದಲೂ ಶೇರ್‌ ಆಯ್ತು ಪುಟ್ಟ ಬಾಲಕಿ ಶಾಲ್ಮಲಿಯ 'ಪಲ್ಲವಗಳ ಪಲ್ಲವಿಯಲಿ'

ಸಾರಾಂಶ

ಕನ್ನಡದ ಪ್ರೇಮಕವಿ ಕೆ.ಎಸ್.‌ ನರಸಿಂಹ ಸ್ವಾಮಿ ಅವರು ಬರೆದಿರುವ “ಪಲ್ಲವಗಳ ಪಲ್ಲವಿಯಲಿʼ ಹಾಡಿನ ಟ್ಯೂನ್‌ ಗೆ ಚೆಂದವಾಗಿ ಪಿಯಾನೋ ನುಡಿಸಿರುವ ಶಾಲ್ಮಲೀ ಎಂಬ ಪುಟ್ಟ ಬಾಲಕಿಯ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಈ ವಿಡಿಯೋವನ್ನು ಶೇರ್‌ ಮಾಡಿರುವುದು ವಿಶೇಷ.   

“ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ…ʼ ಹಾಡು ಒಬ್ಬ ಪುಟ್ಟ ಬಾಲಕಿಯಿಂದಾಗಿ ಇತ್ತೀಚೆಗೆ ಮತ್ತೆ ಜನಪ್ರಿಯವಾಗುತ್ತಿದೆ! ಅಮ್ಮ ಹಾಡಿದ ಈ ಹಾಡಿಗೆ ಅದ್ಭುತವಾಗಿ ಪಿಯಾನೋ ನುಡಿಸುತ್ತಿರುವ ಪುಟ್ಟ ಬಾಲಕಿಯ ವಿಡಿಯೋವೊಂದನ್ನು ಇತ್ತೀಚೆಗೆ ವಾಟ್ಸಾಪ್‌ ನಲ್ಲಿ ಎಲ್ಲರೂ ನೋಡಿರಬಹುದು. ಆಕೆಯ ನಗು, ಖುಷಿಯಾಗಿರುವ ಕಣ್ಣುಗಳು, ಒಂದೇ ಕೈಯಿಂದ ಪುಟ್ಟ ಪುಟ್ಟ ಬೆರಳುಗಳಲ್ಲಿ ಪಿಯಾನೋವನ್ನು ಶುದ್ಧವಾಗಿ ನುಡಿಸುತ್ತಿರುವ ಆ ವಿಡಿಯೋ ಹಾಗೂ ಅದರಲ್ಲಿನ ಹಾಡಿನ ಮಾಧುರ್ಯ ಎಲ್ಲರ ಗಮನ ಸೆಳೆದಿತ್ತು. ವಿಡಿಯೋವನ್ನು ನೋಡಿದವರು ಖಂಡಿತವಾಗಿ ಒಂದು ಬಾರಿಯಲ್ಲ, ಹೆಚ್ಚು ಸಲ ನೋಡಿ ನೋಡಿ ಖುಷಿ ಪಟ್ಟಿದ್ದುದೂ ಇದೆ. ವಿಡಿಯೋದಲ್ಲಿ ಹಾಡುತ್ತಿರುವುದು ಆ ಬಾಲಕಿಯ ಅಮ್ಮನೇ ಇರಬಹುದು, ಆಕೆ ಹಾಡಿರುವ ರೀತಿ ಕೂಡ ಚೆನ್ನಾಗಿದೆ. ಹಾಗೆಯೇ, ಪಿಯಾನೋ ನುಡಿಸುವ ಹುಡುಗಿಯ ರೀತಿಯಂತೂ  ಮನಸೂರೆಗೊಳ್ಳುವಂತಿದೆ. 
ಜನಮಾನಸದಲ್ಲಿ ಸಂತಸದ ಅಲೆ ಮೂಡಿಸಿದ್ದ ಈ ಹುಡುಗಿಯ ಹೆಸರು ಶಾಲ್ಮಲೀ. ಇವಳೀಗ ಪ್ರಧಾನಿ ನರೇಂದ್ರ ಮೋದಿ ಅವರ ಗಮನವನ್ನೂ ಸೆಳೆದಿದ್ದಾಳೆ. ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ ನಲ್ಲಿ ಶೇರ್‌ ಮಾಡಿದ್ದಾರೆ. “ಈ ವಿಡಿಯೋ ಪ್ರತಿಯೊಬ್ಬರ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಅಸಾಧಾರಣ ಪ್ರತಿಭೆ ಮತ್ತು ಕ್ರಿಯಾಶೀಲತೆ ಈ ಬಾಲಕಿಯಲ್ಲಿದೆ. ಬೆಸ್ಟ್‌ ವಿಶಸ್‌ ಟು ಶಾಲ್ಮಲೀʼ ಎಂದು ಬರೆದಿದ್ದಾರೆ. 

ಆರಂಭಿಕವಾಗಿ ಈ ವಿಡಿಯೋವನ್ನು ಅನಂತ್‌ ಕುಮಾರ್‌ ಎನ್ನುವವರು ಟ್ವಿಟರ್‌ (Twitter) ನಲ್ಲಿ ಶೇರ್‌ (Share) ಮಾಡಿದ್ದರು. ಅದಕ್ಕೂ ಮುನ್ನ ವಾಟ್ಸಾಪ್‌ ನಲ್ಲಿ ಸಾಕಷ್ಟು ಹರಿದಾಡಿತ್ತು. ಎಲ್ಲರೂ “ಈಕೆ ಯಾರಿರಬಹುದು, ಯಾವ ಊರಿನವರಿರಬಹುದು?ʼ ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದೀಗ ಈ ಹುಡುಗಿಯ ಹೆಸರು ಶಾಲ್ಮಲೀ (Shalmalee) ಎನ್ನುವುದು ಪ್ರಧಾನಿ (Prime Minister) ಅವರ ಕಡೆಯಿಂದಲೇ ಬಹಿರಂಗವಾಗಿದೆ. 

ಬಡವರಾದರೇನು ಪ್ರಿಯೆ ಚಿನ್ನದಂತ ಮಗನಿರಬೇಕಾದ್ರೆ... ನೋಡಿ ವೈರಲ್ ವೀಡಿಯೋ

ವಿಡಿಯೋದ ಮಾಧುರ್ಯ
ಈ ವಿಡಿಯೋದಲ್ಲಿ ಬಾಲಕಿಯ (Little Girl) ಅಮ್ಮ “ಪಲ್ಲವಗಳ ಪಲ್ಲವಿಯಲಿ ಗರಿಗೆದರಿದ ಗೀತ.. (Pallavagala Pallaviyali) ʼಹಾಡನ್ನು (Song) ಹಾಡುತ್ತಾಳೆ. ಶಾಲ್ಮಲೀ ಅದಕ್ಕೆ ತಲೆದೂಗುತ್ತ ಸುಂದರವಾಗಿ ಪಿಯಾನೋ (Piano) ನುಡಿಸುತ್ತಾಳೆ. ಈಕೆ ಹಾಸಿಗೆಯ ಮೇಲೆ ಕುಳಿತಿದ್ದು, ಎದುರು ಪಿಯಾನೋ ಇಟ್ಟುಕೊಂಡಿರುವುದು ಕಂಡುಬರುತ್ತದೆ. ಮಧ್ಯೆ ಮಧ್ಯೆ ಈಕೆ ತಾನೂ ಹಾಡುತ್ತಾಳೆ. ಕನ್ನಡದ ಪ್ರೇಮಕವಿ ಎಂದೇ ಹೆಸರು ಪಡೆದಿರುವ “ಮೈಸೂರು ಮಲ್ಲಿಗೆʼ ಯ ಕವಿ ಕೆ. ಎಸ್‌. ನರಸಿಂಹ ಸ್ವಾಮಿ (K.S.Narasimha Swami) ಅವರು ಬರೆದಿರುವ ಹಾಡು ಇದಾಗಿದೆ. ಹಿರಿಯ ಗಾಯಕಿ ರತ್ನಮಾಲಾ ಪ್ರಕಾಶ್‌ ಅವರು ಈ ಹಾಡನ್ನು ಹಾಡಿ ಜನಪ್ರಿಯಗೊಳಿಸಿದ್ದರು. ಬಳಿಕ, ನಂತರದ ತಲೆಮಾರುಗಳಲ್ಲೂ ಇದು ಜನಪ್ರಿಯತೆ ಉಳಿಸಿಕೊಂಡಿರುವ ಗೀತೆಯಾಗಿದೆ. 

ನಿನಗೆ ನಾನು ನನಗೆ ನೀನು... ವೃದ್ಧ ಜೋಡಿಯ ಬಾಂಧವ್ಯದ ವಿಡಿಯೋ ವೈರಲ್

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಾಲ್ಮಲೀ ವಿಡಿಯೋ ಶೇರ್‌ ಮಾಡಿದ ಬಳಿಕ ಭಾರೀ ಪ್ರಮಾಣದಲ್ಲಿ ಜನರು ಇದನ್ನು ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಜನ ಮನಸೂರೆಗೊಂಡಿರುವ ವಿಡಿಯೋಕ್ಕೆ ನೋಡಿದವರೆಲ್ಲರೂ ಮೆಚ್ಚುಗೆ ಸೂಸಿದ್ದಾರೆ. ಆಕೆಯ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಇನ್ನೂ 3-4 ವರ್ಷದೊಳಗಿರುವ ಶಾಲ್ಮಲೀಯ ಸಂಗೀತ (Music) ಪ್ರತಿಭೆ (Talent) ಕಂಡು ನಿಬ್ಬೆರಗಾಗಿದ್ದಾರೆ. 
ಅನಂತ್‌ ಕುಮಾರ್‌ (Anant Kumar) ಎನ್ನುವವರು ಈ ವಿಡಿಯೋ ಶೇರ್‌ ಮಾಡಿದಾಗ ಹಲವು ಜನ ಇದರ ಸಾಹಿತ್ಯವನ್ನು ಕೇಳಿದ್ದರಂತೆ. ಅದಕ್ಕೆ ಅವರು ಸಾಹಿತ್ಯದ ಲಿಂಕನ್ನೂ ನಂತರ ಶೇರ್‌ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಕೆ.ಎಸ್.ನ ಅವರ ಈ ಹಾಡು ಮತ್ತೊಮ್ಮೆ ಹೊಸ ತಲೆಮಾರಿನ ಕೇಳುಗರನ್ನು, ಸಾಹಿತ್ಯ ಆರಾಧಕರನ್ನು ಸೆಳೆದಿದೆ. 

ಶಾಲ್ಮಲೀ ವಿಡಿಯೋ ನೋಡಿದ ಕೆಲವರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನೂ ನೆನಪಿಸಿಕೊಂಡಿದ್ದಾರೆ. “ಬಾಲಕಿ ಮುಗ್ಧವಾಗಿ ಕ್ಯೂಟ್‌ (Cute) ಆಗಿದ್ದಾಳೆ. ಈಕೆಯ ಅಮ್ಮನ ದನಿಯೂ ಮನಸ್ಸಿಗೆ ಮುದ ನೀಡುವಂತಿದೆʼ ಎಂದು ಹಲವರು ಹೇಳಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?
ರಾತ್ರಿ ಮಲಗುವ ಮುನ್ನ ಟಿವಿ ಅನ್‌ಪ್ಲಗ್‌ ಮಾಡೋದಿಲ್ವಾ? ಶೇ. 99ರಷ್ಟು ಜನರಿಗೆ ಈ ವಿಚಾರವೇ ಗೊತ್ತಿಲ್ಲ..