ಮಾಂಸಾಹಾರ ತ್ಯಜಿಸಿ ಸಸ್ಯಹಾರಿಗಳಾಗುತ್ತಿದ್ದೀರಾ : ಎಚ್ಚರ ಕೆಲ ಗಂಭೀರ ಸಮಸ್ಯೆ ಕಾಡಬಹುದು...

By Suvarna Web DeskFirst Published Jan 17, 2018, 1:00 PM IST
Highlights

ಅನೇಕ ಜನರು ಮಾಂಸಹಾರವನ್ನು ಸೇವನೆ ಮಾಡುತ್ತಿದ್ದವರು ತಕ್ಷಣ ಅದನ್ನು ತ್ಯಜಿಸಿ ಸಸ್ಯಹಾರಿಗಳಾದರೆ ನಿಮ್ಮ ದೇಹದಲ್ಲಿ ಕೆಲ ಬದಲಾವಣೆಯನ್ನು ಕಾಣಬಹುದಾಗಿದೆ. ಅಲ್ಲದೇ ಗಂಭೀರ ಸಮಸ್ಯೆಗಳು ಕಾಡುತ್ತವೆ. ಅಂತಹ ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಮಾರಕವಾಗಿರುತ್ತದೆ.

ಅನೇಕ ಜನರು ಮಾಂಸಹಾರವನ್ನು ಸೇವನೆ ಮಾಡುತ್ತಿದ್ದವರು ತಕ್ಷಣ ಅದನ್ನು ತ್ಯಜಿಸಿ ಸಸ್ಯಹಾರಿಗಳಾದರೆ ನಿಮ್ಮ ದೇಹದಲ್ಲಿ ಕೆಲ ಬದಲಾವಣೆಯನ್ನು ಕಾಣಬಹುದಾಗಿದೆ. ಅಲ್ಲದೇ ಗಂಭೀರ ಸಮಸ್ಯೆಗಳು ಕಾಡುತ್ತವೆ. ಅಂತಹ ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಮಾರಕವಾಗಿರುತ್ತದೆ.

ಬಾಲಿವುಡ್’ನಲ್ಲಿ ಅನೇಕ ಮಂದಿ ಈಗಾಗಲೇ ಮಾಂಸಾಹಾರವನ್ನು ತ್ಯಜಿಸಿದ್ದಾರೆ. ಈ ಸಾಲಿನಲ್ಲಿ ಅಲಿಯಾ ಭಟ್, ಕರೀನಾ, ಅಮಿರ್ ಖಾನ್ ಸೇರಿದಂತೆ ಅನೇಕರಿದ್ದಾರೆ. ಮಾಂಸಾಹಾರ ತ್ಯಜಿಸುವುದರಿಂದ ಆದರೆ ಇದರಿಂದ ಸಂಪೂರ್ಣ ಅನಾನುಕೂಲ ಎನ್ನಲಾಗದು , ಕೆಲ ಅನುಕೂಲಗಳು ಕೂಡ ಇವೆ.

ಈ ರೀತಿ ತಕ್ಷಣ ಸಸ್ಯಹಾರಿಗಳಾದವರಲ್ಲಿ ಕಂಡು ಬರುವ ಕೆಲವು ಸಮಸ್ಯೆಗಳು ಯಾವವು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.

*ವಿಟಮಿನ್ ಬಿ12 ಕೊರತೆ ಕಂಡು ಬರುತ್ತದೆ. ಅಲ್ಲದೇ ಸುಸ್ತು ಕಾಡಿ , ಆಲಸ್ಯ ಉಂಟಾಗುತ್ತದೆ. ತಲೆನೋವು ಉಂಟಾಗುತ್ತದೆ. ಅನೀಮಿಯಾಗೂ ಕಾರಣವಾಗುತ್ತದೆ.

*ದೇಹಕ ತೂಕ ನಷ್ಟ : ಮಾಂಸಾಹಾರಿಗಳಾಗಿದ್ದವರು ತಕ್ಷಣ ಸಸ್ಯಹಾರದ ಕಡೆಗೆ ಹೋಗುವುದರಿಂದ  ದೇಹದ ತೂಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತದೆ.

*ಕ್ಯಾಲ್ಸಿಯಂ ಸಮಸ್ಯೆ ಕಾಡಬಹುದಾಗಿದೆ. : ಇದರಿಂದ ಸಸ್ಯಜನ್ಯ ಹಾಲುಗಳ ಪಯೋಗವನ್ನು ಹೆಚ್ಚು ಮಾಡುವುದರಿಂದ  ಸಮಸ್ಯೆಯನ್ನು ದೂರ ಮಾಡಬಹುದಾಗಿದೆ.

ಇನ್ನು ಸಸ್ಯಹಾರಿಗಳಾಗುವುದರಿಂದ ಆಗುವ ಲಾಭಗಳ್ಯಾವವು

*ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದಾಗಿದೆ. ಅತೀ ಹೆಚ್ಚಿನ ಕೊಬ್ಬಿನಂಶವಿರುವ ಆಹಾರವನ್ನು ತ್ಯಜಿಸುವುದುರಿಂದ ಕೆಲವು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದಾಗಿದೆ.

*ಜೀರ್ಣಶಕ್ತಿ ಹೆಚ್ಚುತ್ತದೆ : ಸಸ್ಯಹಾರಿಗಳಾದಲ್ಲಿ ದೇಹದಲ್ಲಿ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಅದರಿಂದ ಅಜೀರ್ಣದಂತ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ.

click me!