ಜೀವನದಲ್ಲಿ Success ಸಿಗ್ಬೇಕೆಂದ್ರೆ ಮೊದಲು ನೀವು ಬದಲಾಗ್ಲೇಬೇಕು

By Suvarna News  |  First Published Jun 23, 2023, 12:05 PM IST

ಬೇರೆಯವರಿಂದ ಎರವಲು ಪಡೆಯಲು ಯಶಸ್ಸು, ವಸ್ತುವಲ್ಲ. ಅದಕ್ಕೆ ನಿಮ್ಮ ಸಂಪೂರ್ಣ ಶ್ರಮ ಅಗತ್ಯ. ಹಾಗೆ ಯಶಸ್ಸು ಸುಲಭವಾಗಿ ಕೈಗೆ ಸಿಗುವಂತಹದ್ದಲ್ಲ. ಅದರ ಗಳಿಕೆ ಗುರಿ ಹೊಂದಿರುವ ನೀವು, ನಿಮ್ಮಲ್ಲಿ ಬದಲಾವಣೆ ಮಾಡಿಕೊಳ್ಳುವು ಅನಿವಾರ್ಯ. 
 


ವೃತ್ತಿ ಜೀವನದಲ್ಲಿ ಯಶಸ್ಸು ಸಿಗ್ಬೇಕು, ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡ್ಬೇಕು ಎನ್ನುವವರು ತಮ್ಮ ವ್ಯಕ್ತಿತ್ವ ವಿಕಸನದತ್ತ ಹೆಚ್ಚು ಮಹತ್ವ ನೀಡ್ಬೇಕು. ನಿಮ್ಮ ವ್ಯಕ್ತಿತ್ವ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದು ನಿಮ್ಮ ಯಶಸ್ಸನ್ನು ಸುಲಭಗೊಳಿಸುತ್ತದೆ. ವ್ಯಕ್ತಿತ್ವ ವಿಕಸನವಾಗ್ಬೇಕು, ಎಲ್ಲರಿಗಿಂತ ನೀವು ಭಿನ್ನವಾಗಿರಬೇಕೆಂದ್ರೆ ನಿಮ್ಮ ಸ್ವಭಾವದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕು. 

ಸ್ವಭಾವ (Nature) ದಲ್ಲಿ ಧನಾತ್ಮಕ ಬದಲಾವಣೆಯಾದಲ್ಲಿ ನಿಮ್ಮ ಬೆಳವಣಿಗೆ, ನಿಮ್ಮ ವೃತ್ತಿ (Career) ಯಲ್ಲಿ ಬೆಳವಣಿಗೆ ಕಾಣುವ ಜೊತೆಗೆ ಅನೇಕರು ನಿಮ್ಮ ಅಭಿಮಾನಿಗಳಾಗೋದ್ರಲ್ಲಿ ಎರಡು ಮಾತಿಲ್ಲ. ನಾವಿಂದು ಯಾವೆಲ್ಲ ಸ್ವಭಾವವನ್ನು ಬದಲಿಸಿಕೊಳ್ಳಬೇಕು ಅಂತಾ ನಿಮಗೆ ಹೇಳ್ತೇವೆ.

Tap to resize

Latest Videos

Kids Care : ಮಕ್ಕಳಿಗೆ ಟಿವಿಯೋ, ಮೊಬೈಲ್ ತೋರಿಸ್ತಾ ಊಟ ಮಾಡಿಸ್ತೀರಾ?

ಯಶಸ್ಸು (Success) ಸಿಗ್ಬೇಕೆಂದ್ರೆ ಹೀಗೆ ಬದಲಾಗಿ : 
ಮನಸ್ಥಿತಿಯನ್ನು ಸಮತೋಲನದಲ್ಲಿಡುವುದು ಮುಖ್ಯ :
ನಿಮ್ಮ ಮನಸ್ಸು ಚಂಚಲಾಗಿದ್ದರೆ, ಭಯಗೊಂಡಿದ್ದರೆ ಸಾಧನೆ ಕಷ್ಟವಾಗುತ್ತದೆ. ನೀವ್ಯಾವಾಗಲೂ ದೃಢವಾಗಿರಬೇಕು. ಧನಾತ್ಮಕ ಚಿಂತನೆ ಮಾಡಬೇಕು. ಹಾಗೆಯೇ ನಿಮ್ಮ ಕಂಫರ್ಟ್ ಲೈಫ್ ನಿಂದ ಹೊರಗೆ ಬರುವುದು ಮುಖ್ಯವಾಗುತ್ತದೆ. ಇಲ್ಲಿಯೇ ಆರಾಮವಾಗಿದ್ದೇವೆ, ಮತ್ತೇಕೆ ರಿಸ್ಕ್ ಎಂದುಕೊಂಡು ಹಿಂದೆ ಹೆಜ್ಜೆ ಹಾಕಿದ್ರೆ ಸಾಧನೆ ಶೂನ್ಯವಾಗುತ್ತದೆ. ನಿಮ್ಮಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ನಿಮ್ಮ ಮನಸ್ಸು (Mind) ಅಲ್ಲಿ ಇಲ್ಲಿ ಓಡ್ತಿದೆ, ಮನಸ್ಥಿತಿ ಸರಿಯಾಗಿಲ್ಲ ಎನ್ನುವವರು ಮನಸ್ಥಿತಿಯನ್ನು ಸ್ಥಿರವಾಗಿಟ್ಟುಕೊಳ್ಳಲು ವ್ಯಾಯಾಮ, ಧ್ಯಾನ, ಆರೋಗ್ಯಕರ ಉಪಹಾರವನ್ನು ತೆಗೆದುಕೊಳ್ಳಬೇಕು. 

ಜ್ಞಾನವನ್ನು ಹೆಚ್ಚಿಸಿಕೊಳ್ಳಿ (Enhance Knowldge) : ಪ್ರತಿಯೊಬ್ಬ ವ್ಯಕ್ತಿಗೆ ಎಲ್ಲ ಕ್ಷೇತ್ರದ ಬಗ್ಗೆ ಸ್ವಲ್ಪವಾದ್ರೂ ಜ್ಞಾನ ಇರಬೇಕು. ಅದ್ರಲ್ಲೂ ಕೆಲಸ ಮಾಡುತ್ತಿರುವ ಕ್ಷೇತ್ರದ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವುದು ಮುಖ್ಯ. ನಿಮ್ಮಲ್ಲಿರುವ ಜ್ಞಾನ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಉತ್ತಮ ಆಲೋಚನೆಗಳಿಗೆ ಸ್ಪೂರ್ತಿ ನೀಡುತ್ತದೆ. ಜ್ಞಾನ ವೃದ್ಧಿಗೆ ಪುಸ್ತಕಗಳನ್ನು ಓದುವುದು, ವಿಷ್ಯಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕುವ ಕೆಲಸ ಮಾಡಬೇಕಾಗುತ್ತದೆ.

ಪ್ರತಿ ಮಹಿಳೆಯೂ ತಿಳಿದಿರಲೇಬೇಕಾದ 3 ಆರೋಗ್ಯ ರಹಸ್ಯಗಳು!

ಭಯ ಎದುರಿಸಲು ಕಲಿಯಿರಿ (Face Fear) : ಚಿಕ್ಕಪುಟ್ಟ ವಿಷ್ಯಕ್ಕೆ ನೀವು ಭಯಪಡ್ತಿದ್ದರೆ ಜೀವನ ನಡೆಸೋದು ಕಷ್ಟವಾಗುತ್ತದೆ. ಕೆಲವರು ಮುಂದೆ ಹಾಗಾದ್ರೆ, ಹೀಗಾದ್ರೆ ಎನ್ನುವ ನಕಾರಾತ್ಮಕ ಚಿಂತನೆಯಲ್ಲೇ ಹೆಜ್ಜೆ ಮುಂದಿಡಲು ಹೆದರುತ್ತಾರೆ. ಯಾವುದೇ ವಿಷಯಕ್ಕೂ, ಸಂದರ್ಭಕ್ಕೂ ಭಯಪಡದೆ ಮುನ್ನುಗ್ಗಬೇಕು. ಕೆಲ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಕೇಳಿ, ಓದಿ ತಿಳಿಯುವ ಮೂಲಕ ಅದನ್ನು ನೀವು ಸ್ಪೂರ್ತಿಯಾಗಿ ತೆಗೆದುಕೊಳ್ಳಬಹುದು.

ಗುರಿಯ ಬಗ್ಗೆ ಸ್ಪಷ್ಟತೆ ಮುಖ್ಯ (Have clarity about ambition) : ಪ್ರತಿಯೊಬ್ಬ ವ್ಯಕ್ತಿ ಗುರಿ ಹೊಂದಿದ್ದರೆ ಮಾತ್ರ ಸಾಧನೆ ಸಾಧ್ಯ. ಗುರಿಯಲ್ಲದೆ, ಗುರುವಿಲ್ಲದೆ ಜೀವನದಲ್ಲಿ ಯಶಸ್ಸು ಗಳಿಸಲು ಆಗುವುದಿಲ್ಲ. ಮಕ್ಕಳಂತೆ ದಿನಕ್ಕೊಮ್ಮೆ ನಿಮ್ಮ ಗುರಿ ಬದಲಾಗ್ತಾ ಇದ್ರೆ ಯಾವ ಕ್ಷೇತ್ರದಲ್ಲೂ ನೀವು ನೆಲೆ ನಿಲ್ಲಲು ಸಾಧ್ಯವಾಗುವುದಿಲ್ಲ. ಮೊದಲು ನಿಮ್ಮ ಆಸಕ್ತಿ ಏನು, ನಿಮ್ಮ ಜ್ಞಾನವೇನು, ನಿಮ್ಮ ಸಾಮರ್ಥ್ಯವೇನು ಎಂಬುದನ್ನು ತಿಳಿದು, ಸೂಕ್ತ ಗುರಿಯಿಟ್ಟುಕೊಳ್ಳಿ. ಸದ್ಯ ನೀವಿರುವ ಕ್ಷೇತ್ರದಲ್ಲಿಯೇ ನೀವೊಂದು ಗುರಿ ಹೊಂದಿದ್ದು, ಅದನ್ನು ತಲುಪುವ ನಿರ್ಧಾರ ಮಾಡಿ ಮುನ್ನುಗ್ಗಿದರೆ ಯಾವುದೇ ಸಮಸ್ಯೆ ನಿಮ್ಮನ್ನು ತಡೆದಿಡಲು ಸಾಧ್ಯವಿಲ್ಲ.  

ದೌರ್ಬಲ್ಯಗಳನ್ನು ಗುರುತಿಸಿ (Findout Weakness) : ನಿಮ್ಮ ದೌರ್ಬಲ್ಯವನ್ನು ಗುರುತಿಸುವುದು ಕೂಡ ಮುಖ್ಯವಾಗುತ್ತದೆ. ನೀವು ಯಾವ ಕ್ಷೇತ್ರದಲ್ಲಿ ಬಲ ಹೊಂದಿದ್ದೀರಿ ಎಂಬುದು ನಿಮಗೆ ತಿಳಿದಿರುತ್ತದೆ. ಆದ್ರೆ ದೌರ್ಬಲ್ಯ ಎಲ್ಲಿದೆ ಎಂಬುದನ್ನು ಅನೇಕರು ಪತ್ತೆ ಮಾಡುವುದಿಲ್ಲ. ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಪ್ರಬಲತೆಗಿಂತ ದೌರ್ಬಲ್ಯ ಪತ್ತೆಯಾದ್ರೆ ನೀವು ವ್ಯಕ್ತತ್ವ ವಿಕಸನ ಮಾಡುವುದು ಸುಲಭವಾಗುತ್ತದೆ. ನಿಮ್ಮ ದೌರ್ಬಲ್ಯವನ್ನು ಸರಿಪಡಿಸುವತ್ತ ನೀವು ಚಿತ್ತ ಹರಿಸಬೇಕಾಗುತ್ತದೆ. ಆಗ ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ನೀವು ಅಭಿವೃದ್ಧಿ ಕಾಣಬಹುದು. 

click me!