ಮಕ್ಕಳು ಕಮ್ಮಿ ಮಾರ್ಕ್ಸ್ ತೆಗೀಲಿಕ್ಕೆ ಪೋಷಕರೇ ಕಾರಣ!

By Web DeskFirst Published Apr 30, 2019, 4:14 PM IST
Highlights

ಮಕ್ಕಳಿಗೆ ಅಂಕ ತೆಗೆಯುವಂತೆ ಸದಾ ಒತ್ತಡ ಹಾಕಲಾಗುತ್ತದೆ. ಆದರೆ, ಅವರವರ ಐಕ್ಯೂಗೆ ತಕ್ಕಂತೆ ಮಾರ್ಕ್ಸ್ ತೆಗೆಯುವುದಲ್ಲದೇ, ಮಕ್ಕಳು ತೆಗೆಯುವ ಅಂಕಗಳಿಗೆ ಪೋಷಕರೂ ಹೊಣೆ. ಹೇಗೆ?

ಮಕ್ಕಳನ್ನು ಸದಾ ಓದು ಓದು ಎಂದು ಕಾಡುವ ಪೋಷಕರೇ ನಿಮ್ಮ ಬುದ್ಧಿಮಟ್ಟ ಎಷ್ಟಿದೆ ಎಂಬುವುದು ನಿಮಗೆ ಗೊತ್ತಾ? ಮಕ್ಕಳಿಗೆ ಕಡಿಮೆ ಮಾರ್ಕ್ಸ್ ಬರಲು ನೀವೂ ಕಾರಣ! ಯಾಕೆ ಎಷ್ಟು ಓದಿದ್ರೂ ಅಂತ ಬರ್ತಿಲ್ಲ? ಕೆಲವರಿಗೆ ಓದಿಲ್ಲದಿದ್ರೂ ಮಾರ್ಕ್ಸ್ ಬರುತ್ತದೆ ಎನ್ನುವ ಮಾತಿಗೆ ಇಲ್ಲಿದೆ ಉತ್ತರ. 

ನಿಮಗೆ ಗೊತ್ತಾಗದೆ ಮಕ್ಕಳು ಹೇಳಿಕೊಡುವ ತಿನ್ನೋ ಪಾಠ!

  • ಶೈಕ್ಷಣಿಕ ಪ್ರಗತಿ ಬಗ್ಗೆ ಸಂಶೋಧನೆಯೊಂದರ ಪ್ರಕಾರ ಮಕ್ಕಳು ತಂದೆ-ತಾಯಿ ಓದಿದಂತೆಯೇ ಓದುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಹೆಚ್ಚು ಗ್ರಾಸ್ಪಿಂಗ್ ಪವರ್ ಬರುವುದು ತಾಯಿ ಬುದ್ಧಿಯಿಂದ.  ಮಕ್ಕಳಿಗಿದು ಅಮ್ಮನ ಗಿಫ್ಟ್. 
  • ಪ್ರೈಮರಿ ಶಾಲೆಯಲ್ಲಿ ಹೆಚ್ಚು ಅಂಕ ಮತ್ತು ಜ್ಞಾನ ಹೊಂದುವವರು ತಮ್ಮ ಡಿಗ್ರಿ ಮುಗಿಯುವವರೆಗೂ ಅದೇ ರೀತಿ ಕಾಪಾಡಿಕೊಳ್ಳುತ್ತಾರೆ. ಕೆಲವೊಮ್ಮ ಪೋಷಕರು ತಾವು ಬಯಸಿದಂತೆಯೇ ಮಕ್ಕಳು ಓದಬೇಕೆಂದು ಬಯಸುತ್ತಾರೆ. ಆದರೆ ಅದು ಅಷ್ಟು ಸುಲಭದ ಮಾತಲ್ಲ. ಮಕ್ಕಳು ಪೋಷಕರ ಬುದ್ಧಿಮತ್ತೆಗೆ ತಕ್ಕಂತೆ ತಮ್ಮ ಶೈಕ್ಷಣಿಕ ಪ್ರಗತಿ ತೋರುತ್ತಾರೆ. ಅಲ್ಲದೇ ತಮ್ಮ ಚಿಂತನೆಗಳಿಗನುಗುಣವಾಗಿ ಓದುತ್ತಾರೆ. 
  • ಅವಳಿ-ಜವಳಿಗಳು ಶೇ. 25 ಪೋಷಕರ ಜ್ಞಾನ ಪಡೆದರೆ, ಉಳಿದಿದ್ದನ್ನು ತಮ್ಮ ವೈಯಕ್ತಿಕ ಬುದ್ಧಿಗೆ ಅನುಗುಣವಾಗಿ ಶೈಕ್ಷಣಿಕ ಪ್ರಗತಿ ತೋರುತ್ತಾರೆ. ಉಳಿದದ್ದು ಶಿಕ್ಷಕರು ಹಾಗೂ ಸಹಪಾಠಿಗಳ ಮೇಲೆ ಡಿಪೆಂಡ್ ಆಗಿರುತ್ತದೆ. 
click me!