
ಅಪ್ಪ-ಅಮ್ಮ ಇಬ್ಬರೂ ಉದ್ಯೋಗಕ್ಕೆ ಹೋಗುವಂಥ ಈ ಸಂದರ್ಭದಲ್ಲಿ ಹೆಚ್ಚಿನವರು ಮಕ್ಕಳನ್ನು ಬೇಬಿಸಿಟ್ಟಿಂಗ್‌ನಲ್ಲೋ, ಪ್ಲೇಹೋಂನಲ್ಲೋ ಬಿಟ್ಟು ಹೋಗುತ್ತಾರೆ. ಕೆಲಸದ ಅವಧಿ ಮುಗಿದ ಬಳಿಕ ಮಕ್ಕಳನ್ನು ಅಲ್ಲಿಂದ ಕರೆದೊಯ್ಯುತ್ತಾರೆ. ಆದರೆ, ನಿಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸುವ ಮೊದಲು ಅವರ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.
ಗಮನಿಸಿ: ಬೇಬಿ ಸಿಟ್ಟಿಂಗ್ ಸಿಬ್ಬಂದಿಯ ವರ್ತನೆ ಹೇಗಿದೆ ಎಂಬುದನ್ನು ಗಮನಿಸಿ. ಮಕ್ಕಳ ಮೇಲೆ ರೇಗುವುದು, ಕಿರುಚಾಡುವುದು, ಅಸಹನೆ ತೋರಿಸುವಂಥ ಸಿಬ್ಬಂದಿಯಾದರೆ ಅಲ್ಲಿಂದ ದೂರವಿರುವುದೇ ಉತ್ತಮ.
ಮೇಲೆ ಗಮನ: ಪ್ಲೇ ಹೋಂ ಇರುವಂಥ ಸ್ಥಳ, ಅಲ್ಲಿನ ಭದ್ರತೆ, ಸುರಕ್ಷೆ ಮತ್ತಿತರ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ಕೊಡಿ. ಅಲ್ಲಿಯ ಸಿಬ್ಬಂದಿಯ ಕುರಿತೂ ಒಂದಿಬ್ಬರಲ್ಲಿ ಕೇಳಿ, ಮಾಹಿತಿ ಸಂಗ್ರಹಿಸಿ. ಎಲ್ಲವೂ ಓಕೆ ಎಂದಾದರೆ ಮಾತ್ರ ಮಕ್ಕಳನ್ನು ಅಲ್ಲಿಗೆ ಸೇರಿಸಿ.
ಬಗ್ಗೆ ತಿಳಿಸಿ: ಪ್ಲೇ ಹೋಂನಲ್ಲಿರುವ ಸಿಬ್ಬಂದಿಗೆ ನಿಮ್ಮ ಮಗುವಿನ ಚಟುವಟಿಕೆಗಳ ಬಗ್ಗೆ ತಿಳಿಸಿ. ಮಗು ನಿದ್ದೆ ಮಾಡುವ ಹೊತ್ತು, ಆಹಾರದ ಅಭ್ಯಾಸ, ಇಷ್ಟಪಡುವ ಆಟಿಕೆಗಳು, ಡಯಾಪರ್ ಬದಲಿಸುವ ಸಮಯ... ಹೀಗೆ ಎಲ್ಲ ವಿಚಾರಗಳನ್ನೂ ಅವರಿಗೆ ತಿಳಿಸಿದರೆ ಸೂಕ್ತ.
ತಿಳಿಸಿ: ಮಕ್ಕಳ ಬ್ಯಾಗ್‌ನಲ್ಲೂ ನಿಮ್ಮ ಸಂಪರ್ಕ ಸಂಖ್ಯೆಯನ್ನು ಇಟ್ಟು, ಅದನ್ನು ಅವರಿಗೆ ತೋರಿಸಿಬಿಡಿ. ಮಗು ದೊಡ್ಡದಾಗಿದ್ದರೆ, ಮನೆಯ ದೂರವಾಣಿ ಸಂಖ್ಯೆ, ವಿಳಾಸವನ್ನು ಹೇಳಿಕೊಡಿ.
ಸಂಖ್ಯೆ: ಪ್ಲೇ ಹೋಂಗಳಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನಷ್ಟೇ ನೀಡಿದರೆ ಸಾಲದು. ನಿಮ್ಮಿಬ್ಬರ ಮನೆಯ, ಕಚೇರಿಯ ದೂರವಾಣಿ ಸಂಖ್ಯೆ, ಪ್ಲೇ ಹೋಂ ಹತ್ತಿರ ವಾಸವಿರುವ ನಿಮ್ಮ ನಂಬಿಕಸ್ಥ ಸ್ನೇಹಿತರು ಅಥವಾ ಸಂಬಂಧಿಕರ ಸಂಖ್ಯೆಯನ್ನೂ ನೀಡಿ. ಇದು ಕಷ್ಟಕಾಲದಲ್ಲಿ ಸಹಾಯಕ್ಕೆ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.