ಬಾಯಿಗೂ ರುಚಿ, ದೇಹಕ್ಕೂ ಹಿತ ಆಮ್ಲೇಟ್ ಕರಿ

First Published Jun 7, 2018, 4:31 PM IST
Highlights

ಮೊಟ್ಟೆಯಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುವುದರಿಂದ ಗಟ್ಟಿಯಾಗುತ್ತೇವೆ. ದುಬಾರಿಯಲ್ಲದ ಮೊಟ್ಟೆಯೊಂದನ್ನು ತಿನ್ನುವುದರಿಂದ ಅನೇಕ ಲಾಭಗಳಿವೆ. ಆದರೆ, ಒಂದೇ ತರ ತಿನ್ನೊ ಬದಲು ಇದನ್ನು ವಿಧವಿಧವಾಗಿ ಸೇವಿಸಿದರೆ ಬಾಯಿಗೂ ರುಚಿ ಎನಿಸುತ್ತದೆ.

ಬೇಕಾಗುವ ಸಾಮಗ್ರಿಗಳು: 

  • ಮೊಟ್ಟೆ- ಅಗತ್ಯವಿದ್ದಷ್ಟು
  • ಕೊತ್ತಂಬರಿ ಸೊಪ್ಪು
  • 2 ಈರುಳ್ಳಿ 
  • 2 ಟೊಮೆಟೊ 
  • 1 ಚಮಚ ಜೀರಿಗೆ 
  • ಶುಂಠಿ- ಬೆಳ್ಳುಳ್ಳಿ ಪೇಸ್ಟ್ 
  • ಖಾರದಪುಡಿ
  • ಅರಿಶಿಣ
  • ಗರಂ ಮಸಾಲ ಪುಡಿ
  • ರುಚಿಗೆ ತಕ್ಕಷ್ಟು ಉಪ್ಪು
  • ಎಣ್ಣೆ

ಮಾಡುವ ವಿಧಾನ

ಮೊದಲು ದೊಡ್ಡ ಪ್ಯಾನ್ ತೆಗೆದುಕೊಂಡು, ಎಣ್ಣೆ ಹಾಕಿ. ಕಾದ ಬಳಿಕ ಮೊಟ್ಟೆ ಒಡೆದು ಹಾಕಿ, ಮೇಲಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ, ಕೆಲವೇ ಕ್ಷಣಗಳ ಕಾಲ ಬೇಯಿಸಿ. ಆಮ್ಲೆಟ್ ತಯಾರಾದ ಮೇಲೆ ಅದನ್ನು ಕತ್ತರಿಸಿಟ್ಟು ಕೊಳ್ಳಿ (ಚೌಕಾಕಾರದಲ್ಲಿ). ಈಗ ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ, ಜೀರಿಗೆ ಸೇರಿಸಿ. ಸಣ್ಣದಾಗಿ ಹೆಚ್ಚಿಟ್ಟ ಈರುಳ್ಳಿ ಸೇರಿಸಿ, ಕಡುಗಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಅದಕ್ಕೆ ಟೊಮೆಟೊ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಸರಿಯಾಗಿ ಫ್ರೈ ಆದ ಬಳಿಕ ಆ ಮಿಶ್ರಣಕ್ಕೆ ಖಾರದಪುಡಿ, ಅರಿಶಿಣ, ಗರಂ ಮಸಾಲ ಪುಡಿ ಸೇರಿಸಿ. ಒಂದೂವರೆ ಲೋಟ ನೀರನ್ನು ಹಾಕಿ ಬೇಯಲು ಬಿಡಿ. ಚೆನ್ನಾಗಿ ಬೆಂದ ಬಳಿಕ ಅದಕ್ಕೆ ನೀವು ಮೊದಲೇ ಪೀಸ್ ಮಾಡಿಟ್ಟ ಆಮ್ಲೆಟ್‌ನ ತುಣುಕುಗಳನ್ನು ಸೇರಿಸಿ. ಇನ್ನೂ 5 ನಿಮಿಷ ಹಾಗೇ ಬೇಯಲಿ. ಈಗ ಇದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ. ಆಮ್ಲೆಟ್ ಕರಿ ರೆಡಿ.

ನೆನಪಿಡಿ: ಆಮ್ಲೆಟ್ ಅನ್ನು ಅತ್ಯಂತ ಚಿಕ್ಕದಾಗಿ ಅಥವಾ ಅತಿ ದೊಡ್ಡದಾಗಿ ಕತ್ತರಿಸಬೇಡಿ. ಮಧ್ಯಮ ಗಾತ್ರವಿದ್ದರೆ, ತಿನ್ನುವಾಗ ತನ್ನದೇ ಆದ ಸ್ವಾದ ನೀಡುತ್ತದೆ.

click me!