ಶೇಂಗಾ- ತೆಂಗಿನಕಾಯಿ ಚಟ್ನಿ

Published : Jun 07, 2018, 11:28 AM IST
ಶೇಂಗಾ- ತೆಂಗಿನಕಾಯಿ ಚಟ್ನಿ

ಸಾರಾಂಶ

ತೆಂಗಿನಕಾಯಿ ಚಟ್ನಿ ಗೊತ್ತು. ಅದಕ್ಕೆ ಶೇಂಗಾ ಹಾಕಿದರೆ ಮತ್ತೂ ರುಚು ಹೆಚ್ಚುತ್ತದೆ. ಇದನ್ನು ಮಾಡುವ ವಿಧಾನ ಹೇಗೆ?

ಬೇಕಾಗುವ ಸಾಮಾಗ್ರಿಗಳು:

  •  1  ಚಮಚ ಎಣ್ಣೆ
  •  4 ಹಸಿ ಮೆಣಸಿನಕಾಯಿ
  •  ಕಾಲು ಚಮಚ ಜೀರಿಗೆ
  •  4 ಬೆಳ್ಳುಳ್ಳಿ
  •  ಉಪ್ಪು
  • ಸ್ವಲ್ಪ ಕಡ್ಲಕಾಯಿ ಬೀಜ
  •  ಹುಣಸೆ ರಸ
  •  1 ಚಮಚ ತೆಂಗಿನಕಾಯಿ ಚೊರು
  •  ಹಾಲು
  •  ಸಾಸಿವೆ
  • ಉದ್ದಿನ ಬೇಳೆ
  • ಕರಿಬೇವಿನ ಸೊಪ್ಪು

ಮಾಡುವ ವಿಧಾನ:

ಮೊದಲು ಒಂದು ಪ್ಯಾನ್‌ಗೆ ಒಂದು ಚಮಚ ಎಣ್ಣೆ ಹಾಕಿ 4 ಹಸಿ ಮೆಣಸಿನ ಕಾಯಿಯನ್ನು ಹುರಿದು ಮಿಕ್ಸಿಗೆ ಹಾಕಿ. ಮಿಕ್ಸಿಗೆ 1/4 ಚಮಚ ಜೀರಿಗೆ, 3 ರಿಂದ 4 ಬೆಳ್ಳುಳ್ಳಿ ಎಸಳು, ರುಚಿಗೆ ತಕ್ಕಷ್ಟು ಉಪ್ಪು, 1/2 ಚಮಚ ಹುರಿದು ಸಿಪ್ಪೆ ತೆಗೆದ ಕಡ್ಲೆ ಬೀಜ, ಒಂದು ಸಣ್ಣ ಚೂರು ಹುಣಸೆ ಹಣ್ಣು, 1 ಚಮಚ ತುರಿದ ತೆಂಗಿನಕಾಯಿ ಹಾಕಿ ಸ್ವಲ್ಪ ರುಬ್ಬಿ. ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪಿನ ಒಗ್ಗರಣೆ ಕೊಟ್ಟರೆ ಪೀ ನಟ್ ಕೋಕೋನಟ್ ಚಟ್ನಿ ರೆಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏನಿದು Tai Chi Walking? ಫಿಟ್ ಆಗಲು ನಿಜವಾಗಿಯೂ ಈ ವೈರಲ್ ಟ್ರೆಂಡ್ ಕೆಲಸ ಮಾಡುತ್ತಾ?
ವಿಜಯನಗರ ರಾಜಮನೆತನದ 100 ವರ್ಷ ಹಳೆಯ ಚಿನ್ನದ ಸೀರೆ ಖರೀದಿಸುವ ಭಾಗ್ಯ? ಏನಿದರ ವಿಶೇಷತೆ