ಸೋಮಾರಿಗಳಿಗೊಂದು ಸಿಹಿ ಸುದ್ದಿ, ಹಾಗಂತ ಶುದ್ಧ ಸೋಮಾರಿಗಳಾಗಬೇಡಿ!

First Published Jun 7, 2018, 4:18 PM IST
Highlights

ಅಬ್ಬಾ, ಒಮ್ಮೊಮ್ಮೆ ಸುಖಾ ಸುಮ್ಮನೆ ಕೂತು ಬಿಡಬೇಕು ಎನಿಸುತ್ತದೆ. ಬಿದ್ದುಕೊಂಡೇ ಇರೋಣವೆಂದು ಯೋಚಿಸುತ್ತೇವೆ. ಯಾವುದೇ ಕೆಲಸ ಮಾಡಲೂ ಮನಸ್ಸೇ ಬರುವುದಿಲ್ಲ. ಈ ರೀತಿ ಒಮ್ಮೊಮ್ಮೆ ಸೋಂಬೇರಿಗಳಾಗುವುದು ಒಳ್ಳೆಯದು, ಎಂದು ಸಂಶೋಧನೆಗಳು ದೃಢಪಟ್ಟಿವೆ.

ಫ್ಲೋರಿಡಾ ಗಲ್ಫ್ ಕೋಸ್ಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದು, ಯಾರು ಹೆಚ್ಚು ಸೋಮಾರಿಗಳಾಗಿರುತ್ತಾರೋ, ಅವರು ಹೆಚ್ಚು ಹೆಚ್ಚು ಸಮಯವನ್ನು ಗಂಭೀರ ಚಿಂತನೆಯಲ್ಲಿ ಕಳೆಯುತ್ತಾರೆಂಬುದಾಗಿ ಹೇಳಿದೆ.  ಅವರ ಬುದ್ಧಿ ಶಕ್ತಿ ಸಾಮರ್ಥ್ಯ ಹೆಚ್ಚಿನ ಮಟ್ಟದಲ್ಲಿರುತ್ತದೆ. ಈ ವರದಿ ಹೇಳುವಂತೆ ದೈಹಿಕವಾಗಿ ಚಟುವಟಿಕೆಯಿಂದ ಇರುವವರು ಬುದ್ಧಿವಂತಿಕೆಯಲ್ಲಿ ಹಿಂದುಳಿದಿರುತ್ತಾರೆ. ಅವರು ಬಹು ಬೇಗನೇ ಬೇಸರಕ್ಕೆ ತುತ್ತಾಗುತ್ತಾರೆನ್ನಲಾಗಿದೆ.

ಸೋಮಾರಿಗಳಾಗಿ, ಟೆನ್ಷನ್ ಬಿಟ್ಹಾಕಿ...!

-ಸೋಮಾರಿಯಾಗಿರುವುದರಿಂದ ಆತಂಕ ದೂರವಾಗುತ್ತದೆ, ಸುಖಾಸುಮ್ಮನೆ ಕಾಡುವ ಚಿಂತೆ ದೂರವಾಗುತ್ತದೆ.

- ದೊಡ್ಡ ಕೆಲಸಗಳು ನಮ್ಮನ್ನು ಸೋಮಾರಿಗಳನ್ನಾಗಿ ಮಾಡುತ್ತದೆ. ಹಾಗಂತೆ ಕೆಲಸ ಮಾಡದೇ ಇರುವುದಿಲ್ಲ. ಅದೇ ಸಮಯದಲ್ಲಿ ಸಣ್ಣಪುಟ್ಟ ಕೆಲಸಗಳೂ ಆಗಿರುತ್ತವೆ.

-ಕೆಲ ಸಮಯಗಳಲ್ಲಿ ನಮ್ಮನ್ನು ನಾವು  ಆಳವಾದ ಸಮಸ್ಯೆಗಳ ಬಗ್ಗೆ ಚಿಂತಿಸುವಂತೆ ಈ ಸೋಮಾರಿತನ ಪ್ರೇರೆಪಿಸುತ್ತದೆ.

- ಕಡೇ ಕ್ಷಣದಲ್ಲಿ ಕೆಲಸ ಪೂರೈಸಲು ಮುಂದಾಗುವುದರಿಂದ, ಕೆಲವೊಮ್ಮೆ ಈಸಿ ಪರಿಹಾರವೂ ಹೊಳೆಯುವ ಸಾಧ್ಯತೆ ಇರುತ್ತದೆ.

- ಸೋಮಾರಿಗಳಿಗೆ ತಾಳ್ಮೆ ಹೆಚ್ಚು. 

- ತಲೆ ಬಿಸಿ ಇಲ್ಲದೆ ಸೋಮಾರಿಗಳು ಕೂಲ್ ಆಗಿರುವುದರಿಂದ ರಕ್ತದೊತ್ತಡದ ಸಮಸ್ಯೆ ಕಾಡುವುದಿಲ್ಲ. ಮಧುಮೇಹದಿಂದಲೂ ದೂರವಿರುತ್ತಾರೆ.

- ತಮ್ಮ ಕೆಲಸದಿಂದ ತಪ್ಪಿಸಿಕೊಳ್ಳಲು ಸದಾ ಕಾರಣಗಳನ್ನು ಹುಡುಕುತ್ತಿರುತ್ತಾರೆ. ಒಮ್ಮೊಮ್ಮೆ ರಚನಾತ್ಮಕ ಕಾರಣಗಳು ಅವರಿಗೆ ಹೊಳೆಯುತ್ತದೆ. ಇದರಿಂದ ಬೇಸರವೆಂದೂ ಸೋಂಬೇರಿಗಳಿಗೆ ಕಾಡುವುದಿಲ್ಲ.

ಹಾಗಂತ ಇದು ಆಗೊಮ್ಮೆ, ಈಗೊಮ್ಮೆ ಸೋಮಾರಿತನ ತೋರುವವರಿಗೆ ಮಾತ್ರ. ಸದಾ ಸೋಂಬೇರಿಗಳಾದವರಿಗೆ ಜೀವನದಲ್ಲಿ ಯಾವುದೇ ಯಶಸ್ಸೂ ಸಿಗುವುದಿಲ್ಲವೆಂಬುವುದು ನೆನಪಿರಲಿ.

click me!