ನಂಗೂ ಫ್ರೀ, ನಿಂಗೂ ಫ್ರೀ ಅನ್ನೋರ ಮಧ್ಯೆ ಈ ಅಜ್ಜಿ ಮಾಡಿದ್ದೇನು ನೋಡಿ! ಲಕ್ಷಲಕ್ಷ ಮಂದಿ ಮನಗೆದ್ದ ವಯೋವೃದ್ಧೆ

Published : Mar 29, 2026, 05:17 PM IST
Granny Video

ಸಾರಾಂಶ

ವಯಸ್ಸಿನ ಹಂಗಿಲ್ಲದೆ ಕಾರು ತೊಳೆದು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ವೃದ್ಧೆಯೊಬ್ಬರ ವಿಡಿಯೋ ವೈರಲ್ ಆಗಿದೆ. ಈ ಅಜ್ಜಿಯ ಸ್ವಾಭಿಮಾನದ ಬದುಕಿಗೆ ವ್ಯಕ್ತಿಯೊಬ್ಬರು ಅನಿರೀಕ್ಷಿತವಾಗಿ ದೊಡ್ಡ ಮೊತ್ತದ ಹಣ ನೀಡಿ ಸಹಾಯ ಮಾಡಿದ್ದು, ಇದು ನೆಟ್ಟಿಗರ ಮನಗೆದ್ದಿದೆ.

ಬಹುತೇಕ ಮಂದಿಗೆ ಎಲ್ಲವೂ ಫ್ರೀ ಬೇಕು. ಎಷ್ಟು ಉಚಿತ ಕೊಟ್ಟರೂ ಸಾಕಾಗಲ್ಲ. ಸರ್ಕಾರಗಳು ಏನು ಫ್ರೀ ಕೊಡುತ್ತೆ ಎಂದು ಕಾಯುತ್ತಿರುವವರೇ ಒಂದಿಷ್ಟು ಮಂದಿ ಇದ್ದಾರೆ. ದುಡಿದು ತಿನ್ನಿ ಅಂದರೆ ಆಗಲ್ಲ. ಸರ್ಕಾರ ಇರುವುದೇ ನಮಗೆ ಉಚಿತ ಕೊಡಲು, ಏಕೆಂದ್ರೆ ನಾವೇ ಅವರಿಗೆ ವೋಟ್​ಬ್ಯಾಂಕ್​ಗಳು, ಅವ್ರು ಫ್ರೀ ಕೊಡ್ತಾರೆ, ನಾವು ಫ್ರೀ ತಿಂತೇವೆ, ವೋಟ್​ ಹಾಕ್ತೇವೆ ಎನ್ನುವ ವರ್ಗಕ್ಕೇನೂ ಕಡಿಮೆ ಇಲ್ಲ. ಅದರಲ್ಲಿಯೂ ಚುನಾವಣೆ ಬಂತೆಂದರೆ ಸಾಕು, ಪಕ್ಷ ಬೇಧವಿಲ್ಲದೇ ಉಚಿತಗಳ ಸರಮಾಲೆಯೇ ಶುರುವಾಗಿಬಿಡುತ್ತದೆ. ಏಕೆಂದ್ರೆ ಮತದಾರರಿಗೆ ಬೇಕಿರುವುದೂ ಇದೇ ಅಲ್ಲವೆ?

ನೆಟ್ಟಿಗರ ಮನ ಗೆದ್ದ ಅಜ್ಜಿ

ಆದರೆ, ಹೀಗೆ ಬಿಟ್ಟಿಗಾಗಿ ಕೈಚಾಚಿ ಕುಳಿತುಕೊಳ್ಳುವವರ ನಡುವೆ ವಯಸ್ಸಿನ ಹಂಗೂ ಇಲ್ಲದೇ, ಸ್ವಾಭಿಮಾನಿಗಳಾಗಿ ತಮ್ಮ ಕಾಲ ಮೇಲೆ ನಿಲ್ಲುವ ಅದೆಷ್ಟೋ ಜನರಿದ್ದಾರೆ. ದುಡಿದು ತಿಂದರೇನೇ ನಮಗೆ ಸುಖ ಎನ್ನುವ ಛಾತಿ ಇರುವ ವೃದ್ಧೆಯೊಬ್ಬರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಸ್ವಾಭಿಮಾನ ಎಂದರೆ ಇದು ಎನ್ನುತ್ತಲೇ ಈ ಅಜ್ಜಿಯ ವಿಡಿಯೋ ಶೇರ್​ ಮಾಡಿಕೊಳ್ಳುತ್ತಿದ್ದಾರೆ ನೆಟ್ಟಿಗರು. ದುಬಾರಿ ಬೈಕು, ಕಾರು ತಂದು ಬಡವರಾಗಿ ಸರ್ಕಾರ ನೀಡುವ ಅಂಗಡಿಗಳ ಮುಂದೆ ಕ್ಯೂ ನಿಲ್ಲುವ 'ಬಡವರಿಗೆ' ಮಾದರಿ ಈ ಅಜ್ಜಿ ಎನ್ನುವ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

ಕಾರು ತೊಳೆದು ಹಣ ಸಂಪಾದನೆ

ಅಷ್ಟಕ್ಕೂ ಇದು ಎಲ್ಲಿಯ ವಿಡಿಯೋ ಎನ್ನುವ ಮಾಹಿತಿ ಇಲ್ಲ. ಆದರೆ ಇದರಲ್ಲಿ ವಯೋವೃದ್ಧೆಯೊಬ್ಬರು ಕಾರುಗಳನ್ನು ತೊಳೆದು ಹಣ ಸಂಪಾದನೆ ಮಾಡುತ್ತಿದ್ದಾರೆ. ಕಾರಿನ ಗ್ಲಾಸ್​ಗಳನ್ನು ಅದರ ಷೀಟ್​ಗಳನ್ನು ತೊಳೆದು ಜನರು ನೀಡುವ ಹಣವನ್ನು ತೆಗೆದುಕೊಂಡು ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ಆದರೆ ಈ ಅಜ್ಜಿ ಇಷ್ಟೆಲ್ಲಾ ಸದ್ದು ಮಾಡಲು ಕಾರಣ, ಅಜ್ಜಿಯನ್ನು ಗಮನಿಸಿದ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ಉದ್ದೇಶಪೂರ್ವಕವಾಗಿ ಗಲೀಜು ಮಾಡಿಕೊಂಡು ಅಜ್ಜಿಯನ್ನು ಕರೆದು ಕ್ಲೀನ್ ಮಾಡಿಸಿದರು.

ಅಜ್ಜಿಗೆ ಭಾರಿ ಮೊತ್ತ

ಅದಕ್ಕೆ ಕಾರಣವೂ ಇತ್ತು. ಅದೇನೆಂದರೆ, ಹೀಗೆ ಕ್ಲೀನ್​ ಮಾಡಿಸಿದ ಬಳಿಕ, ಆಕೆಯ ಕೈಗೆ ಭಾರಿ ಮೊತ್ತವನ್ನು ನೀಡಿದಾಗ ಅಜ್ಜಿ ಶಾಕ್​ ಆಗಿ ಹೋದರು. ತಾವೇನು ಕನಸು ಕಾಣುತ್ತಿದ್ದೆವೆಯೋ ಎಂದು ಆಕೆಗೆ ಅನ್ನಿಸಿತೋ ಏನೊ. ಕೊನೆಗೆ ವಾಸ್ತವಕ್ಕೆ ಮರಳಿ, ದುಡ್ಡು ನೀಡಿದ ವ್ಯಕ್ತಿಗೆ ಮನಃಪೂರ್ವಕವಾಗಿ ಆಶೀರ್ವದಿಸಿದರು. ಇದು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಆಗಿರುವ ಕಾರಣ, ಅಜ್ಜಿಯ ಸ್ವಾಭಿಮಾನದ ಬದುಕು ಕೂಡ ರಿವೀಲ್​ ಆಗಿದೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಾಣಕ್ಯನ ಪ್ರಕಾರ ಇಂತಹ ಗುಣವಿರುವ ಹೆಂಡತಿ ಸಿಕ್ಕರೆ ಆ ಪುರುಷನೇ ಅದೃಷ್ಟವಂತ!
Vastu Tips: ಬೆಳಗ್ಗಿನ ಈ 4 ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿಸುತ್ತಿವೆ! ಎಚ್ಚರ