
ಮಕ್ಕಳಿಗೆ ಅಭ್ಯಂಜನ ಸ್ನಾನ ಮಾಡಿಸುವುದು ಉತ್ತಮ ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗಿದೆ. ಇದು ಮಕ್ಕಳ ಬೆಳವಣಿಗೆಗೂ ತ್ವಚೆ ಮತ್ತು ಅರೋಗ್ಯ ಸುಧಾರಿಸಲು ಒಳಿತು. ಹಾಗಾದರೆ ಯಾವೆಲ್ಲಾ ಎಣ್ಣೆಯಿಂದ ಮಸಾಜ್ ಮಾಡಬಹುದು. ಇದರಿಂದೇನು ಪ್ರಯೋಜನಗಳಿವೆ?
ಕೊಬ್ಬರಿ ಎಣ್ಣೆ
ಶುದ್ಧ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮಕ್ಕಳಿಗೆ ಮಸಾಜ್ ಮಾಡಿದರೆ ಮಗುವಿನ ಅರೋಗ್ಯ ವೃದ್ಧಿಸುತ್ತದೆ.
ಹಿರಿಯರೊಂದಿಗಿನ ಬಾಂಧವ್ಯ ವೃದ್ಧಿಗೂ ಮಸಾಜ್ ಬೆಸ್ಟ್
ಎಳ್ಳೆಣ್ಣೆ
ಈ ಎಣ್ಣೆಯಲ್ಲಿರುವ ಪೋಷಕಾಂಶಗಳು ಮಗುವಿನ ತ್ವಚೆ ಕಾಂತಿಯುಕ್ತವಾಗಲು ನೆರವಾಗುತ್ತದೆ.
ಆಲಿವ್ ಎಣ್ಣೆ
ಮಗುವಿನ ಚರ್ಮದಲ್ಲಿ ಮಾಯಿಶ್ಚಸೈರ್ ಉಳಿಯಲು ಈ ಎಣ್ಣೆ ಬಳಸಿದರೆ ಒಳಿತು. ಜೊತೆಗೆ ಹೆಚ್ಚು ಡ್ರೈ ಆಗಿರದೆ ತುರಿಕೆ ಮೊದಲಾದ ಸಮಸ್ಯೆಗಳಿದೂ ಇದು ಬೆಸ್ಟ್.
ಸಾಸಿವೆ ಎಣ್ಣೆ
ಚಳಿಗಾಲದಲ್ಲಿ ಈ ಎಣ್ಣೆ ಬಳಸುವುದು ಒಳಿತು. ಮೈಗೆ ಹಚ್ಚಿದಾಗ ತುಸು ಉರಿಯುವುದರಿಂದ ಬೇಸಿಗೆಯಲ್ಲಿ ಇದರಿಂದ ಮಸಾಜ್ ಮಾಡುವುದು ಬೇಡ.
ಟ್ಯಾನ್‌ಗೂ ಎಳ್ಳೆಣ್ಣೆ ಎಂಬ ದಿವ್ಯೌಷಧಿ
ಬಾದಾಮಿ ಎಣ್ಣೆ
ಚರ್ಮಕ್ಕೆ ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಇ ಬಾದಾಮಿ ಎಣ್ಣೆಯಲ್ಲಿ ಹೇರಳವಾಗಿರುವುದರಿಂದ ಮಗುವಿನ ಚರ್ಮಕ್ಕೆ ಸೂಕ್ತ. ಇದು ಮಗುವಿನ ಚರ್ಮವನ್ನು ಸಾಫ್ಟ್ ಆಗಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.