
ಗಾಂಧಿ ಜಯಂತಿಯಂದು ಶಾಲೆಯಲ್ಲಿ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಗಾಂಧೀಜಿ ಕುರಿತಾದ ಯಾವುದಾದರೂ ಪ್ರಾಜೆಕ್ಟ್ ಮಾಡಿ ಕೊಂಡು ಬನ್ನಿ ಎಂದು ಶಿಕ್ಷಕರು ಮಕ್ಕಳಿಗೆ ಹೋಮ್ ವರ್ಕ್ ನೀಡುತ್ತಾರೆ. ಆದರೆ, ಅ.2ರಂದು ಬಾಲಕಿ ಯೊಬ್ಬಳು 2೦೦೦ ರು. ಮತ್ತು 5೦೦ ರು. ನೋಟು ಗಳಲ್ಲಿನ ಗಾಂಧೀಜಿ ‘ಭಾವಚಿತ್ರ ಕತ್ತರಿಸಿ ಪ್ರಾಜೆಕ್ಟ್ ವೊಂದನ್ನು ಸಿದ್ಧಪಡಿಸಿದ್ದಾಳೆ! ಇದನ್ನು ನೋಡಿದ ಆಕೆಯ ತಾಯಿ ತಲೆ ತಿರುಗಿ ಬಿದ್ದಿದ್ದಾಳಂತೆ. ಬಾಲಕಿ ನೋಟುಗಳನ್ನು ಕತ್ತರಿಸಿ ಪ್ರಾಜೆಕ್ಟ್ ಸಿದ್ಧಪಡಿಸುತ್ತಿರುವ ಅನಾಮ‘ಧೇಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ‘ಭಾರೀ ಸಂಚಲನ ಸೃಷ್ಟಿಸಿದೆ.
ಇದಕ್ಕೆ ಜನರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಇದು ನಿಜವಾದ ಫೋಟೋವೇ? ಹಾಗಿದ್ದರೆ ಆ ಬಾಲಕಿ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಚಿತ್ರದಲ್ಲಿ ಬಾಲಕಿಯ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಜೊತೆಗೆ ಆ ಬಾಲಕಿ ನೋಟಿನ ಮೌಲ್ಯವನ್ನು ತಿಳಿಯದಷ್ಟು ಚಿಕ್ಕ ವಯಸ್ಸಿನವಳೇನೂ ಇದ್ದಂತೆ ಇಲ್ಲ. ಅಲ್ಲದೇ ಅಷ್ಟೊಂದು ಹಣ ಆಕೆಯ ಬಳಿ ಎಲ್ಲಿಂದ ಬಂತು ಎಂಬ ಅನುಮಾನ ಮೂಡುತ್ತದೆ. ಬಾಲಕಿಯ ತಂದೆ ಅಥವಾ ತಾಯಿ ನೋಟಿನ ಕಲರ್ ಜೆರಾಕ್ಸ್ ಪ್ರತಿಗಳನ್ನು ನೀಡಿರುವ ಸಾಧ್ಯತೆಯನ್ನು ಇಲ್ಲಿ ಸುಲಭವಾಗಿ ಊಹಿಸಬಹುದು. ಫೋಟೋವನ್ನು ಸೂಕ್ಷ್ಮವಾಗಿ ನೋಡಿದರೆ 385975ಸಂಖ್ಯೆಯ ಎರಡು 2೦೦೦ ರು. ನೋಟುಗಳು ಕಾಣಸಿಗುತ್ತವೆ. ಹೀಗಾಗಿ ಇದು ಅಸಲಿ ನೋಟು ಆಗಿರುವುದು ಸಾಧ್ಯವಿಲ್ಲ. ಜನರಲ್ಲಿ ಕುತೂಹಲ ಕೆರಳಿಸುವ ಸಲುವಾಗಿ ಈ ಪೋಟೋವನ್ನು ಬಾಲಕಿಯ ಪೋಷ ಕರು ಇಲ್ಲವೇ ಸಂಬಂಧಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಸಂಚಲನಕ್ಕೆ ಕಾರಣವಾಗಿದೆ.
(ಕನ್ನಡಪ್ರಭ ವೈರಲ್ ಚೆಕ್ ಅಂಕಣ)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.