ಲೋಕ ಮೆಚ್ಚುವ ಕೆಲಸ ಮಾಡಿದ ಬಸ್ ಕಂಡಕ್ಟರ್

Published : Oct 04, 2017, 07:48 PM ISTUpdated : Apr 11, 2018, 12:50 PM IST
ಲೋಕ ಮೆಚ್ಚುವ ಕೆಲಸ ಮಾಡಿದ ಬಸ್ ಕಂಡಕ್ಟರ್

ಸಾರಾಂಶ

ಅದು 1980ರ ದಶಕ. ತಮಿಳುನಾಡಿನಲ್ಲಿ ನೀಲ್‌ಗಿರಿ ಕಾಡುಗಳಲ್ಲಿ ವ್ಯಾಪಕವಾಗಿ ಮರ ಕಡಿಯುವ ಕಾರ್ಯ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಪರಿಸರವಾದಿಗಳು ಇದನ್ನು ತೀವ್ರವಾಗಿ ವಿರೋಧಿಸಿ ಆಂದೋಲನಗಳನ್ನು ಮಾಡುತ್ತಿರುತ್ತಾರೆ. ಆ ವೇಳೆ ಯೋಗನಾಥನ್ ಅವರಿಗೂ ಆಂದೋಲನಗಳಲ್ಲಿ ತೊಡಗಿಕೊಳ್ಳಬೇಕು ಎನ್ನಿಸುತ್ತದೆ.

ಹೆಸರು ಯೋಗನಾಥನ್. ವಯಸ್ಸು 49. ಕೊಯಂಬತ್ತೂರಿನಲ್ಲಿ ಖಾಸಗಿ ಬಸ್ ಕಂಡಕ್ಟರ್. ಇದು ಬದುಕಿನ ಬಂಡಿ ಸಾಗಿಸಲು ಸಾಕಾಗುತ್ತಿದೆ. ಆದರೆ ಸಮಾಜಕ್ಕಾಗಿ ಏನಾದರೂ ಕೈಲಾದ ಸೇವೆ ಮಾಡಬೇಕು ಎನ್ನುವ ಬಯಕೆ ಮೊಳಕೆಯೊಡೆದದ್ದೇ ತಡ ತಮ್ಮ 19ನೇ ವಯಸ್ಸಿನಲ್ಲಿಯೇ ತಮ್ಮ ಸುತ್ತಮುತ್ತ ಗಿಡಗಳನ್ನು ಬೆಳೆಸಲು ಶುರು ಮಾಡುತ್ತಾರೆ. ಇದುವರೆವಿಗೂ ತಮಿಳುನಾಡಿನಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮರಗಳನ್ನು ನೆಟ್ಟು ಪೋಷಿಸಿರುವುದು ಇವರ ವಿಶೇಷ. ಅಂದಹಾಗೆ ಇವರಲ್ಲಿ ಪರಿಸರ ಪ್ರೀತಿ ಹುಟ್ಟಿಕೊಳ್ಳುವುದರ ಹಿಂದೆ ರೋಚಕವಾದ ಕಥೆಯೊಂದಿದೆ.

ಅದು 1980ರ ದಶಕ. ತಮಿಳುನಾಡಿನಲ್ಲಿ ನೀಲ್‌ಗಿರಿ ಕಾಡುಗಳಲ್ಲಿ ವ್ಯಾಪಕವಾಗಿ ಮರ ಕಡಿಯುವ ಕಾರ್ಯ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಪರಿಸರವಾದಿಗಳು ಇದನ್ನು ತೀವ್ರವಾಗಿ ವಿರೋಧಿಸಿ ಆಂದೋಲನಗಳನ್ನು ಮಾಡುತ್ತಿರುತ್ತಾರೆ. ಆ ವೇಳೆ ಯೋಗನಾಥನ್ ಅವರಿಗೂ ಆಂದೋಲನಗಳಲ್ಲಿ ತೊಡಗಿಕೊಳ್ಳಬೇಕು ಎನ್ನಿಸುತ್ತದೆ. ಆದರೆ ಇದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಆಂದೋಲನ ಮಾಡುವವರ ಸಂಖ್ಯೆ ಅಪಾರವಾಗಿದೆ. ನಾನೇನಿದ್ದರೂ ಕ್ರಿಯಾರಂಗಕ್ಕೇ ಇಳಿಯಬೇಕು

ಎಂದು ನಿರ್ಧಾರ ಮಾಡುತ್ತಾರೆ. ಅದರ ಫಲವೇ ಇಂದು ಅವರು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟಿರುವುದು. ‘ನನಗೆ ಪ್ರತಿ ಸೋಮವಾರ ವಾರದ ರಜೆ ಇರುತ್ತಿತ್ತು. ಆ ದಿನ ಸುಮ್ಮನೆ ಕೂರುವ ಬದಲಿಗೆ ನನ್ನ ಕೈಲಾದಷ್ಟು ಗಿಡಗಳನ್ನು ನೆಡಬೇಕು ಎನ್ನಿಸಿದ್ದೇ ತಡ ಕಾರ್ಯಪ್ರವೃತ್ತನಾದೆ. ನನಗೆ ಮೊದಮೊದಲಿಗೆ ವಿದ್ಯಾರ್ಥಿಗಳಿಂದ ಬಹಳಷ್ಟು ಸಹಕಾರ ದೊರೆಯಿತು. ಈ ಕಾರಣದಿಂದಲೇ ಇಂದು ನನ್ನ ಕಾರ್ಯ ಹೆಚ್ಚು ವೇಗವಾಗಿ ಸಾಗಿ ಬರಲು ಸಹಾಯವಾಯಿತು’ ಎನ್ನುತ್ತಾರೆ ಯೋಗನಾಥನ್.

ಇನ್ನೂ ಇವರು ಮಾಡಿರುವ ವಿಶೇಷವಾದ ಪ್ರಯತ್ನವನ್ನು ನಾವೆಲ್ಲರೂ ಕೇಳಲೇಬೇಕು. ಅದೇನಪ್ಪಾ ಎಂದರೆ ಯಾರಾದರೂ ಒಂದು ಗಿಡ ನೆಟ್ಟರೆ ಅದಕ್ಕೆ ನೆಟ್ಟವರ ಹೆಸರನ್ನೇ ಇಟ್ಟು ಬೆಳೆಸುವುದು. ಉದಾಹರಣೆಗೆ ರಾಮು ಹೆಸರಿನ ವ್ಯಕ್ತಿ ಪುಂಗೈ ಎನ್ನುವ ಗಿಡವನ್ನು ನೆಟ್ಟರೆ, ಅದಕ್ಕೆ ‘ರಾಮು ಪುಂಗೈ’ ಎನ್ನುವ ಹೆಸರಿಡುವುದು. ಮುಂದೆ ಇದು ಎಷ್ಟರ ಮಟ್ಟಿಗೆ ಹೆಸರು ಪಡೆಯಿತು ಎಂದರೆ ತಮಿಳುನಾಡಿನ ಪೂರ್ತಿ ಈ ಪ್ರಯತ್ನಕ್ಕೆ ಮೆಚ್ಚುಗೆ ದೊರೆಯಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!
ತಾಳಿ ಕಟ್ಟು ಮೊದಲು ಬಿಗ್ ಟ್ವಿಸ್ಟ್ ಕೊಟ್ಟ ವರ, 8ನೇ ವಚನದೊಂದಿದೆ ಮದುವೆ ವಿಡಿಯೋ