ಉಜ್ಜುವ ಕಷ್ಟ ಬೇಡ.. ಟಾಯ್ಲೆಟ್ ರೂಂನಲ್ಲಿ ಈ ಪುಡಿ ಹಾಕಿದ್ರೆ ಸಾಕು, 25-30 ವರ್ಷದ ಪಾಚಿ-ಕಲೆಯೂ ಕರಗುತ್ತೆ

Published : Oct 21, 2026, 05:38 PM IST
How to clean dirty toilet without acid

ಸಾರಾಂಶ

How to clean dirty toilet without acid: ಉಜ್ಜುವ ಕಷ್ಟವೇ ಬೇಡ! ಟಾಯ್ಲೆಟ್ ರೂಂನಲ್ಲಿ ಈ ಒಂದು ಪುಡಿ ಹಾಕಿದ್ರೆ ಸಾಕು, 25-30 ವರ್ಷಗಳ ಹಳೆಯ ಪಾಚಿ ಮತ್ತು ಉಪ್ಪಿನ ಕಲೆ ಕೇವಲ 10 ನಿಮಿಷದಲ್ಲಿ ಕರಗಿ ಮಾಯವಾಗುತ್ತೆ. ಆಸಿಡ್ ಬಳಸದೆ ಬಾತ್‌ರೂಮ್ ಹೊಸದರಂತೆ ಹೊಳೆಯುವ ಸೂಪರ್ ಟ್ರಿಕ್ ಇಲ್ಲಿದೆ ನೋಡಿ.

ಬೋರ್‌ವೆಲ್ ನೀರು ಅಥವಾ ಉಪ್ಪು ನೀರಿನಿಂದಾಗಿ ಬಾತ್‌ರೂಮ್ ಟೈಲ್ಸ್ ಮತ್ತು ಟಾಯ್ಲೆಟ್ ಕಮೋಡ್ ಮೇಲೆ ಹಳದಿ, ಕಪ್ಪು ಹಾಗೂ ಬಿಳಿ ಬಣ್ಣದ ಉಪ್ಪಿನ ಕಲೆಗಳು ಕುಳಿತುಬಿಡುತ್ತವೆ. ಎಷ್ಟೇ ದುಬಾರಿ ಹಾರ್ಪಿಕ್ ಅಥವಾ ಆಸಿಡ್ ಹಾಕಿ ತಿಕ್ಕಿದರೂ ಈ ಹಠಮಾರಿ ಕಲೆಗಳು ಹೋಗುವುದಿಲ್ಲ. ಆದರೆ, ಮನೆಯಲ್ಲೇ ತಯಾರಿಸುವ ಒಂದು ಸೀಕ್ರೆಟ್ ಪುಡಿ ಹಾಗೂ ಲಿಕ್ವಿಡ್ ಬಳಸಿದರೆ 25-30 ವರ್ಷಗಳ ಹಳೆಯ ಪಾಚಿಯೂ ಕೂಡ ಕೇವಲ 10 ನಿಮಿಷಗಳಲ್ಲಿ ಮಾಯವಾಗುತ್ತದೆ.

ಬೇಕಾಗುವ ಸಾಮಗ್ರಿಗಳು

ಲಿಂಬೆ ಪುಡಿ (ಸಿಟ್ರಿಕ್ ಆಸಿಡ್ / Citric Acid): 1 ರಿಂದ 2 ಚಮಚ (ಇದು ಅಂಗಡಿಗಳಲ್ಲಿ ಸಣ್ಣ ಕ್ರಿಸ್ಟಲ್ ರೂಪದಲ್ಲಿ ಸಿಗುತ್ತದೆ, ಕಲೆ ಕರಗಿಸಲು ಇದು ಮೇನ್ ಇಂಗ್ರಿಡಿಯಂಟ್).
ಅಡುಗೆ ಸೋಡಾ (ಬೇಕಿಂಗ್ ಸೋಡಾ): 1 ಚಮಚ
ಅಡುಗೆ ಉಪ್ಪು: 2 ಚಮಚ
ಅರಿಶಿನ ಪುಡಿ: ಅರ್ಧ ಚಮಚ (ಕ್ರಿಮಿಕೀಟ, ಬ್ಯಾಕ್ಟೀರಿಯಾ ಮತ್ತು ಇನ್‌ಫೆಕ್ಷನ್ ತಡೆಯಲು)
ಡಾಂಬರ್ ಗುಳಿಗೆ (ನುಸಿಗುಳಿಗೆ / Naphthalene Ball): 1 (ಪುಡಿ ಮಾಡಿದ್ದು - ದುರ್ವಾಸನೆ, ಜಿರಳೆ ಹಾಗೂ ಹಲ್ಲಿಗಳನ್ನು ಓಡಿಸಲು)

ಫೋಮಿಂಗ್ ಲಿಕ್ವಿಡ್ ತಯಾರಿಸಲು

ಟೂತ್ ಪೇಸ್ಟ್: 1 ಚಮಚ
ನೀರು: ಅರ್ಧ ಬಾಟಲ್ (ಸುಮಾರು 250 ml)

ಬಳಸುವ ಸುಲಭ ವಿಧಾನ

ಲಿಕ್ವಿಡ್ ರೆಡಿ ಮಾಡಿ
ಅರ್ಧ ಬಾಟಲ್ ನೀರಿಗೆ 1 ಚಮಚ ಟೂತ್ ಪೇಸ್ಟ್ ಹಾಕಿ, ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಿ (Shake ಮಾಡಿ). ಪೇಸ್ಟ್ ಕರಗಿ ಚೆನ್ನಾಗಿ ನೊರೆ (Foam) ಬರುವಂತೆ ಲಿಕ್ವಿಡ್ ಸಿದ್ಧಪಡಿಸಿ.

ಪುಡಿಯನ್ನು ಸಿಂಪಡಿಸಿ
ಪಾಚಿ ಕಟ್ಟಿರುವ ಕಮೋಡ್, ವಾಶ್ ಬೇಸಿನ್ ಅಥವಾ ಬಾತ್‌ರೂಮ್‌ನ ಉಪ್ಪಿನ ಕಲೆ ಇರುವ ಟೈಲ್ಸ್ ಮೇಲೆ ತಯಾರಿಸಿಟ್ಟುಕೊಂಡಿರುವ ಪುಡಿಯ ಮಿಶ್ರಣವನ್ನು (ಲಿಂಬೆ ಪುಡಿ, ಸೋಡಾ, ಉಪ್ಪು, ಅರಿಶಿನ, ಡಾಂಬರ್ ಪುಡಿ) ಸಮನಾಗಿ ಉದುರಿಸಿ.

ಲಿಕ್ವಿಡ್ ಸುರಿದು 10-15 ನಿಮಿಷ ಬಿಡಿ
ಪುಡಿ ಹಾಕಿದ ಜಾಗದ ಮೇಲೆ ನೀವು ತಯಾರಿಸಿದ ಟೂತ್ ಪೇಸ್ಟ್ ಲಿಕ್ವಿಡ್ ಅನ್ನು ಸುರಿಯಿರಿ. ಇದು ಲಿಂಬೆ ಪುಡಿ ಮತ್ತು ಸೋಡಾದೊಂದಿಗೆ ವರ್ತಿಸಿ ಭಾರಿ ನೊರೆ ಉಂಟುಮಾಡುತ್ತದೆ. ಇದನ್ನು ಹಾಗೇ 10 ರಿಂದ 15 ನಿಮಿಷ ಬಿಡಿ.

ತೊಳೆಯಿರಿ (ಉಜ್ಜುವ ಕಷ್ಟವೇ ಇಲ್ಲ)
15 ನಿಮಿಷಗಳ ನಂತರ ಬ್ರಷ್‌ನಿಂದ ಹಗುರವಾಗಿ ಸವರಿ ನೀರು ಹಾಕಿದರೆ ಸಾಕು. ಯಾವುದೇ ಆಸಿಡ್ ಇಲ್ಲದೆ, ಜಾಸ್ತಿ ಶ್ರಮವಿಲ್ಲದೆ ಕಲೆಗಳು ಸಂಪೂರ್ಣ ಕರಗಿ ಟಾಯ್ಲೆಟ್-ಬಾತ್‌ರೂಮ್ ಪಳಪಳನೆ ಹೊಳೆಯುತ್ತದೆ.

ಇದರಿಂದಾಗುವ ಲಾಭಗಳು

ಏರ್ ಬ್ಲಾಕ್ ಕ್ಲಿಯರ್ ಆಗುತ್ತೆ: ಕಮೋಡ್ ಅಥವಾ ಸಿಂಕ್‌ನಲ್ಲಿ ನೀರು ಸರಾಗವಾಗಿ ಹೋಗದೆ ಏರ್ ಹಿಡಿದಿದ್ದರೆ, ಲಿಂಬೆ ಪುಡಿ (ಸಿಟ್ರಿಕ್ ಆಸಿಡ್) ಹಾಕುವುದರಿಂದ ಪೈಪ್‌ನಲ್ಲಿರುವ ಕಲ್ಮಶ ಕರಗಿ ನೀರು ಸರಾಗವಾಗಿ ಹರಿಯುತ್ತದೆ.

ದುರ್ವಾಸನೆ ಮಾಯ: ಡಾಂಬರ್ ಗುಳಿಗೆ ಮತ್ತು ಕೋಲ್ಗೇಟ್ ಪರಿಮಳದಿಂದ ಬಾತ್‌ರೂಮ್‌ನಲ್ಲಿ ಯಾವುದೇ ಕೆಟ್ಟ ವಾಸನೆ ಬರುವುದಿಲ್ಲ.

ಎಷ್ಟು ದಿನಕ್ಕೊಮ್ಮೆ ಮಾಡಬೇಕು?

ನಿಮ್ಮ ಮನೆಯಲ್ಲಿ ಉಪ್ಪುನೀರಿನ ಸಮಸ್ಯೆ ಹೆಚ್ಚಿದ್ದರೆ, ವಾರಕ್ಕೆ ಒಮ್ಮೆ ಈ ವಿಧಾನ ಅನುಸರಿಸಿ. ನಂತರದ ದಿನಗಳಲ್ಲಿ ತಿಂಗಳಿಗೆ ಒಮ್ಮೆ ಮಾಡಿದರೆ ಸಾಕು, ಟಾಯ್ಲೆಟ್ ಸದಾ ಹೊಸದರಂತೆ ಇರುತ್ತದೆ. ಈ ಮಿಶ್ರಣದಲ್ಲಿ ಬಳಸುವ ಡಾಂಬರ್ ಗುಳಿಗೆಯ (Naphthalene Ball) ವಾಸನೆಗೆ ಬಾತ್‌ರೂಮ್‌ನ ಡ್ರೈನೇಜ್ ಪೈಪ್ ಮೂಲಕ ಒಳಗೆ ನುಗ್ಗುವ ಜಿರಳೆಗಳು, ಹಲ್ಲಿಗಳು ಹಾಗೂ ಕಣ್ಣಿಗೆ ಕಾಣದ ಸಣ್ಣ ಕ್ರಿಮಿಕೀಟಗಳು ಸಂಪೂರ್ಣವಾಗಿ ದೂರವಾಗುತ್ತವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕುಂಡದಲ್ಲೇ ಸುಲಭವಾಗಿ ಬೆಳೆಯಿರಿ ಭರಪೂರ ಬಟಾಣಿ: ಸಸಿ ನೆಡುವ ಹಂತ ಹಂತದ ಮಾಹಿತಿ ಇಲ್ಲಿದೆ
ಬಿಸಿ ತರಂಗಗಳಾಚೆಗೂ ಋತುಬಂಧ: ದೇಹ ಮತ್ತು ಮನಸ್ಸಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳೋಣ