
ಮೊಟ್ಟೆ ಪೋಷಕಾಂಶಗಳನ್ನು ಒಳಗೊಂಡ ಉತ್ತಮ ಪದಾರ್ಥ ಎನ್ನುವುದು ಸಾಮಾನ್ಯ ನಂಬಿಕೆ. ಹಾಗಾಗಿಯೇ ದೇಹ ದಂಡಿಸುವವರು ಮೊಟ್ಟೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ದಿನಕ್ಕೆ 10 ಮೊಟ್ಟೆಸೇವಿಸುವವರೂ ಇದ್ದಾರೆ. ಇನ್ನು ತಾಯಂದಿರು ತಮ್ಮ ಮಕ್ಕಳು ಆರೋಗ್ಯವಂತರಾಗಿರಲಿ ಎಂಬ ಕಾರಣಕ್ಕಾಗಿ ಕಷ್ಟಪಟ್ಟಾದರೂ ಮಕ್ಕಳಿಗೆ ಮೊಟ್ಟೆ ತಿನ್ನಿಸುತ್ತಾರೆ.
ಇನ್ನು ಕೆಲವರಿಗೆ ಮೊಟ್ಟೆಯೇ ಬೆಳಗಿನ ತಿಂಡಿ. ಆದರೆ ಇಂಥವರಿಗೆಲ್ಲ ಆಘಾತವಾಗುವ ವಿಷಯವೊಂದು ಸಮೀಕ್ಷೆ ವೇಳೆ ಬಯಲಾಗಿದೆಯಂತೆ. ಹೌದು ಹೆಚ್ಚೆಚ್ಚು ಮೊಟ್ಟೆಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬಂದು ಹೃದಯ ದುರ್ಬಲವಾಗುತ್ತದಂತೆ. ಜೆಎಎಂಎನಲ್ಲಿ ಪ್ರಕಟವಾದ ಸಂಶೋಧನೆಯೊಂದರಲ್ಲಿ ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಅಂಶವು ಹೃದಯವನ್ನು ದೌರ್ಬಲ್ಯಗೊಳಿಸುತ್ತದೆ ಎಂದಿದೆ.
ಕಿಡ್ನಿಯಲ್ಲಿ ಕಲ್ಲುಗಳಿಗೇನು ಕೆಲಸ?
ಇದು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಡೈಯಟ್ ಮಾಡುವವರು ಅತಿಯಾಗಿ ಮೊಟ್ಟೆಸೇವಿಸುತ್ತಾರೆ. ದಿನಕ್ಕೆ ಇಂತಿಷ್ಟುಮೊಟ್ಟೆಸೇವಿಸಲೇಬೇಕೆಂದು ಸಲಹೆ ಕೂಡ ನೀಡುತ್ತಾರೆ. ಆದರೆ ಹೀಗೆ ದಿನಕ್ಕೆ 3ಕ್ಕಿಂತ ಹೆಚ್ಚು ಮೊಟ್ಟೆಸೇವಿಸುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ.
ಇದು ಹೃದಯ ದೌರ್ಬಲ್ಯಕ್ಕೆ ಕಾರಣವಾಗುತ್ತದಂತೆ. ಆದರೆ ಈ ಸಮೀಕ್ಷೆಯೇ ಅಂತಿಮವಲ್ಲ. ಮೊಟ್ಟೆಪೋಷಕಾಂಶಗಳನ್ನು ಒಳಗೊಂಡ ಉತ್ತಮ ಆಹಾರ ಪದಾರ್ಥ ಎಂಥಲೂ ಹಲವಾರು ಸಮೀಕ್ಷೆಗಳು ಅಭಿಪ್ರಾಯ ಪಟ್ಟಿವೆ. ಹಾಗಾಗಿ ಮೊಟ್ಟೆಸೇವಿಸುವವರು ಆತಂಕ ಪಡಬೇಕಾಗಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳಾಗಬೇಕು ಎನ್ನುತ್ತಾರೆ ಸಂಶೋಧಕರು.
ದಿನನಿತ್ಯದ ಈ ಆಹಾರವನ್ನು ಫ್ರಿಡ್ಜ್‌ನಲ್ಲಿಡೋದು ಬೇಡ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.