ಸೆಕೆಂಡ್‌ಗಳಲ್ಲಿ ಅಚ್ಚುಕಟ್ಟಾಗಿ ಹಾಕುತ್ತೆ ಮೆಹಂದಿ, ಬಂದಿದೆ ಹೊಸ ಎಐ ಟೆಕ್ ಮದರಂಗಿ ಮಶಿನ್

Published : Sep 10, 2026, 04:35 PM IST
New AI Mehendi Machine

ಸಾರಾಂಶ

ಎಂಜಿನೀಯರ್, ಸಾಫ್ಟ್‌ವೇರ್ ಸೇರಿದಂತೆ ಎಐ ಟೆಕ್‌ನಿಂದ ಕಂಪ್ಯೂಟರೈಸ್ಡ್ ಕೆಲಸಗಳು ಆತಂಕದಲ್ಲಿದೆ. ಆದರೆ ಫಿಸಿಕಲ್ ಕೆಲಸಗಳು ಒಂದಷ್ಟು ವರ್ಷ ಸಮಸ್ಯೆ ಇಲ್ಲ ಎಂದುಕೊಂಡರೆ ತಪ್ಪು, ಇದೀಗ ಮಹೆಂದಿ ಹಾಕಲು ಎಐ ಟೆಕ್ ಮಶಿನ್ ಬಂದಿದೆ.

ಮುಂಬೈ (ಸೆ.10) ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದಿಂದ ಹಲವು ಕಂಪನಿಗಳಲ್ಲಿ ಉದ್ಯೋಗ ಕಡಿತ ನಡೆಯುತ್ತಿದೆ. ಈ ವೇಳೆ ಹಲವು ದಿಗ್ಗಜರು ಭಾರತದಲ್ಲಿ ಒಂದಿಷ್ಟು ಕೆಲಸಗಳು ಯಾವುದೇ ಆತಂಕವಿಲ್ಲದೆ ಇರಲಿದೆ ಎಂದು ಪಟ್ಟಿ ಮಾಡಿದೆ. ಮೆಕಾನಿಕ್, ಪ್ಲಂಬರ್, ಕೂಲಿ ಕೆಲಸಗಾರರು ಸೇರಿದಂತೆ ಹಲವು ಕೆಲಸಗಳಿಗೆ ಸಮಸ್ಯೆ ಇಲ್ಲ ಎಂದಿತ್ತು. ಆದರೆ ಇದೀಗ ಯಾವ ಕೆಲಸಕ್ಕೂ ಭದ್ರತೆ ಇಲ್ಲ ಅನ್ನೋದು ಬಯಲಾಗಿದೆ. ಸುಂದರವಾಗಿ ಮೆಹಂದಿ ಹಾಕಲು ಇನ್ನು ದುಬಾರಿ ಬೆಲೆ ನೀಡಿ ಪರಿಣಿತರನ್ನು ಕರೆಸಬೇಕಿಲ್ಲ. ಎಐ ಟೆಕ್ ಮಶಿನ್ ಲಭ್ಯವಿದೆ. ಕೈಮೇಲೆ ನಿಮಗೆ ಇಷ್ಟದ ಡಿಸೈನ್ ಮೆಹಂದಿ ಹಾಕಿ ಕೊಡಲಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉದ್ಯಮಿ ಹರ್ಷ್ ಗೋಯೆಂಕಾ ಮತ್ತೆ ಒಂದಷ್ಟು ಮಂದಿಯ ಕೆಲಸ ಹೊಯಿತು ಎಂದಿದ್ದಾರೆ.

ಗೊಯೆಂಕಾ ಹಂಚಿಕೊಂಡ ಮೆಹಂದಿ

ಉದ್ಯಮಿ ಹರ್ಷಾ ಗೊಯೆಂಕಾ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ತಮ್ಮ ಕೈಗಳನ್ನು ಮಶಿನ್ ಕೆಳಗಿಟ್ಟಿದ್ದಾರೆ. ಮಶಿನ್ ಸೆಕೆಂಡ್‌ಗಳ ಅಂತರದಲ್ಲಿ ಅತ್ಯಂತ ಸುಂದರ ಡಿಸೈನ್ ಮೂಲಕ ಮಹೆಂದಿ ಹಾಕಿದೆ. ಈ ಮಶಿನ್‌ಗೆ ನಿಮ್ಮ ಇಷ್ಟದ ಮೆಹಂದಿ ಡಿಸೈನ್ ಹೇಳಿದರೆ, ಅಥವಾ ಆಯ್ಕೆ ಮಾಡಿದರೆ ಸಾಕು, ಸೆಕೆಂಡ್‌ಗಳಲ್ಲಿ ಹಾಕಿಕೊಡಲಿದೆ. ಇಲ್ಲಿ ಹೂವಿನ ಡಿಸೈನ್ ಇರುವ ಮೆಹಂದಿ ಹಾಕಲಾಗಿದೆ. ಸರಿಸುಮಾರು 10 ರಿಂದ 20 ಸೆಕೆಂಡ್‌ಗಳಲ್ಲಿ ಕೈಗೆ ಸಂಪೂರ್ಣ ಮೆಹಂದಿ ಹಾಕಿ ಕೊಟ್ಟಿದೆ.

ವಿಡಿಯೋ ಹಂಚಿಕೊಂಡಿರುವ ಸಂಜೀವ್ ಗೊಯೆಂಕಾ, ಮತ್ತಷ್ಟು ಮಂದಿಯ ಕೆಲಸ ಹೋಗಿದೆ ಎಂದಿದ್ದಾರೆ. ಇದೇ ವೇಳೆ ಹಲವರು ಇದೀಗ ಎಲ್ಲಾ ಕೆಲಸಗಳಿಗೂ ಮಶಿನ್ ಇದೆ. ಹೀಗಾಗಿ ಎಲ್ಲರ ಕೆಲಸಕ್ಕೂ ಆಪತ್ತು ಇದ್ದೇ ಇದೆ ಎಂದಿದ್ದಾರೆ. ಮತ್ತೆ ಕೆಲವರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವೆಡೆ ಮೆಹಂದಿ ಮಶಿನ್‌ಗಳಿವೆ. ಆದರೆ ಬಹುತೇಕ ಕಡೆಗಳಲ್ಲಿ ಮಶಿನ್ ಬಳಸುತ್ತಿಲ್ಲ. ಮೆಹಂದಿ ಹಾಕುವವರಿಂದಲೇ ಹಾಕಿಸಿಕೊಳ್ಳಲಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋದಿಂದ ಹೊಸ ಚರ್ಚೆ ಶುರುವಾಗಿದೆ. ಹಲವರು ಮಶಿನ್ ಮೆಹಂದಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ ಎಂದರೆ ಮತ್ತೆ ಕೆಲವರು ಸೂಪರ್ ಎಂದಿದ್ದಾರೆ. ಕಾರ್ಮಿಕರ ಜಾಗದಲ್ಲೂ ಇದೀಗ ಮಶಿನ್ ಬಳಸಲಾಗುತ್ತಿದೆ. ಇದರಿಂದ ಕೆಲಸ ವೇಗವಾಗಿ, ನಿಖರವಾಗಿ ನಡೆಯುತ್ತಿದೆ. ಜೊತೆಗೆ ಒಂದು ವಾರ, 10 ದಿನಗಳ ಕೆಲಸ ಕೇವಲ ನಾಲ್ಕು ದಿನಗಳಲ್ಲಿ ಮುಗಿಯುತ್ತಿದೆ. ಕಾರ್ಮಿಕರು ಸಿಗುತ್ತಿಲ್ಲ ಅನ್ನೋ ಕೂಗಿಗೆ ಇದು ಉತ್ತರ ಎಂದು ಹಲವರು ಹೇಳಿದ್ದಾರೆ.

ಒಂದಷ್ಟು ಮಂದಿ ಇದೂ ಎಐ ವಿಡಿಯೋ ಎಂದು ಆರೋಪಿಸಿದ್ದಾರೆ. ಈ ವಿಡಿಯೋ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಹರ್ಷಾ ಗೊಯೆಂಕಾ ಈ ವಿಡಿಯೋ ಹಂಚಿಕೊಂಡು ಇದೀಗ ಭಾರಿ ಚರ್ಚೆ ಹುಟ್ಟು ಹಾಕಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Idli: ಬಿಡದಿ ಮಾತ್ರವಲ್ಲ, ಬೆಂಗಳೂರಿನ ಈ 8 ಕಡೆಯೂ ಸಿಗುತ್ತೆ ಮಲ್ಲಿಗೆಯಂತಹ ಮೃದು ಇಡ್ಲಿ
ವಾಷಿಂಗ್ ಮಷಿನ್‌ನಲ್ಲಿ ಅಲ್ಯೂಮಿನಿಯಂ ಫಾಯಿಲ್ ಚೆಂಡು ಹಾಕ್ತಿದ್ದೀರಾ? ಹಾಗಾದ್ರೆ ಬಳಸುವ ಮುನ್ನ ಈ ತಪ್ಪು ಮಾಡ್ಬೇಡಿ