
ಹೊಳೆಯುವ, ತಾರುಣ್ಯಯುಕ್ತ ಚರ್ಮವನ್ನು ಪಡೆಯಲು ಎಲ್ಲರೂ ಇಷ್ಟಪಡುತ್ತಾರೆ. ಇದಕ್ಕಾಗಿ ಕಂಡ ಕಂಡ ಕ್ರೀಮುಗಳನ್ನು ಹಚ್ಚುವುದು, ಬ್ಯುಟಿ ಪಾರ್ಲರ್’ಗೆ ಹೋಗುವುದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಇದರಿಂದ ಚೆನ್ನಾಗೆನೋ ಕಾಣುತ್ತೇವೆ. ಆದರೆ ವಯಸ್ಸಾದಂತೆಲ್ಲಾ ಚರ್ಮ ಬಹುಬೇಗ ಸುಕ್ಕಾಗುತ್ತದೆ. ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಮನೆಯಲ್ಲಿಯೇ ಕುಳಿತು ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ನಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
ಹೆಚ್ಚು ಹೆಚ್ಚು ನೀರು ಕುಡಿಯಿರಿ
ಅಂದವಾದ ಮುಖಕ್ಕೆ ಕೇವಲ ಹೊರಗಿನಿಂದ ಆರೈಕೆ ಮಾಡಿದರೆ ಸಾಲದು. ದೇಹಕ್ಕೂ ಪೌಷ್ಟಿಕಾಂಶಯುಕ್ತ ಆಹಾರವನ್ನು ತೆಗೆದುಕೊಳ್ಳಬೇಕು. ಚೆನ್ನಾಗಿ ನೀರು ಕುಡಿಯಿರಿ. ನೀರು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ. ಟಾಕ್ಸಿನ್’ಗಳನ್ನು ತಡೆಗಟ್ಟುತ್ತದೆ.
ಟೋಮೋಟೊ ರಸ ಹಚ್ಚಿ
ಟೋಮೋಟೊ ರಸವನ್ನು ಮುಖಕ್ಕೆ ಹಚ್ಚಿದರೆ ಚರ್ಮಕ್ಕೆ ಗ್ಲೋ ಬರುತ್ತದೆ. ಟೋಮೊಟೋ ಸ್ಲೈಸ್’ಗಳನ್ನು ಮುಖದ ಮೇಲೆ ಇಟ್ಟುಕೊಳ್ಳಬಹುದು. ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಚರ್ಮಕ್ಕೆ ಹೊಳಪು ಬರುತ್ತದೆ.
ಪೊಟ್ಯಾಟೋ ರಸ ಹಚ್ಚಿ
ಕಣ್ಣಿನ ಕೆಳಗಿನ ಬ್ಲಾಕ್ ಸರ್ಕಲ್ ತೆಗೆಯಲು ಆಲೂಗಡ್ಡೆ ಉತ್ತಮ ಪರಿಹಾರ. ಆಲೂಗಡ್ಡೆ ರಸವನ್ನು ಕಣ್ಣಿನ ಕೆಳಕ್ಕೆ ಹಚ್ಚಿ. ಅಥವಾ ಸ್ಲೈಸ್ ಅನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಬಹುದು.
ಕಡಲೇ ಹಿಟ್ಟು ಬಳಸಿ
ಕಡಲೇ ಹಿಟ್ಟು ಬಳಸಿದರೆ ಚರ್ಮ ಬಿಳಿದಾಗುತ್ತದೆ. ನೀರಿಗೆ ಕಡಲೇ ಹಿಟ್ಟನ್ನು ಹಾಕಿ ಮುಖಕ್ಕೆ ಹಚ್ಚಿ. ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಸೋಪು/ಫೇಸ್’ವಾಶ್ ಬದಲು ಕಡಲೇ ಹಿಟ್ಟನ್ನೇ ಬಳಸಬಹುದು.
ನಿಂಬೆಹಣ್ಣು
ಅಡುಗೆಗೆ ಬಳಸಿದ ಲಿಂಬೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ. ಅದನ್ನು ಮುಖಕ್ಕೆ ಹಚ್ಚಿದರೆ ಮುಖದಲ್ಲಿರುವ ಜಿಡ್ಡಿನಂಶ, ಬ್ಲಾಕ್’ಹೆಡ್ ಕಡಿಮೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.