
ಕಡಿಮೆ ಆಹಾರ ಸೇವನೆ ನಿಮ್ಮ ದೇಹದ ಆರೋಗ್ಯಕ್ಕೆ ಒಳಿತನ್ನು ಉಂಟು ಮಾಡುತ್ತದೆ ಎಂಬ ಗಾದೆಯೇ ಇದೆ. ವೈದ್ಯರು ಸಹ ಸಾಧ್ಯವಾದಷ್ಟು ಕಡಿಮೆ ಅಥವಾ ನಿಗದಿತ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿ ಹಸಿವಾಗುತ್ತದೆಂದು ಸಿಕ್ಕಸಿಕ್ಕ ಸಮಯದಲ್ಲಿ ಏನೇನನ್ನೋ ತಿನ್ನಲು ಹೋಗಬೇಡಿ ಎಂದು ಸಲಹೆ ನೀಡುತ್ತಾರೆ.
ಆದರೆ ಇತ್ತೀಚಿನ ವೈದ್ಯಕೀಯ ಸಂಶೋಧನೆಯ ಅನ್ವಯ ಕೆಲವು ಪದಾರ್ಥಗಳನ್ನು ಅತೀ ಹೆಚ್ಚು ತಿಂದರೂ ನಿಮ್ಮ ದೇಹಕ್ಕೆ ಯಾವುದೇ ತೊಂದರೆಯುಂಟಾಗುವುದಿಲ್ಲ ಎಂದು ತಿಳಿಸಿದೆ. ಈ ಪದಾರ್ಥಗಳನ್ನು ಹೆಚ್ಚು ತಿಂದರೂ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಡುವ ಸಾಧ್ಯತೆ ಹೆಚ್ಚಿರುತ್ತದೆ' ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.
ಈ ತಿನಿಸುಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿ ನಿಯಂತ್ರಿಸುತ್ತದೆ. ದೇಹವು ಸರಾಗವಾಗಿ ಕೆಲಸ ಮಾಡಲು ಸಹಾಯಕವಾಗಿರುತ್ತದೆ. ಮೆದುಳು ಕೂಡ ಚೆನ್ನಾಗಿ ಕೆಲಸ ಮಾಡುತ್ತದೆ. ಬೊಜ್ಜನ್ನು ಕರಗಿಸುತ್ತದೆ ಜೊತೆಗೆ ತೂಕವನ್ನು ಕಡಿಮೆ ಮಾಡುವುದರ ಜೊತೆ ಹಲವು ಉಪಯೋಗಗಳಾಗುತ್ತದೆ' ಎಂದು ಇಂಗ್ಲೆಂಡಿನ ವಾರ್ವಿಕ್ ವಿವಿಯ ಆಹಾರ ತಜ್ಞರ ಅಭಿಪ್ರಾಯ.
ಪದಾರ್ಥಗಳು
ಕೋಳಿ ಮಾಂಸ, ಮೀನು, ದ್ರವ ಪದಾರ್ಥ ಹಾಗೂ ಕಾಳು ರೂಪದ ತರಕಾರಿಗಳು,ಬಾದಾಮಿ, ಎಳನೀರು ಇವುಗಳಲ್ಲಿ ಕಾಯಿಲೆಗಳನ್ನು ತಡೆಗಟ್ಟುವ ಮತ್ತು ರೋಗನಿರೋಧಕ ಶಕ್ತಿಗಳನ್ನು ಹೆಚ್ಚು ಮಾಡುವ ಗುಣಗಳಿರುತ್ತವೆ. ಕೋಳಿ ಹಾಗೂ ಮೀನು ಇವುಗಳನ್ನು ಬೇಯಿಸುವುದಕ್ಕಿಂತ ಸುಟ್ಟ ರೂಪದಲ್ಲಿ ಸೇವಿಸಿದರೆ ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.