ಮುಕೇಶ್ ಅಂಬಾನಿ ನಂಬಿಕಸ್ಥ ರಿಲಯನ್ಸ್ ಗ್ರೂಪ್‌ನ ಹೈಯೆಸ್ಟ್ ಪೇಯ್ಡ್‌ ಉದ್ಯೋಗಿ, ಸ್ಯಾಲರಿ ಎಷ್ಟ್‌ ಗೊತ್ತಾ?

By Vinutha Perla  |  First Published Jul 18, 2023, 12:25 PM IST

ಉದ್ಯಮವೊಂದು ಯಶಸ್ವೀಯಾಗಿ ಬೆಳೆಯೋಕೆ ನಂಬಿಕಸ್ಥ ಉದ್ಯೋಗಿಗಳು ಬೇಕು. ರಿಲಯನ್ಸ್ ಗ್ರೂಪ್‌ನಲ್ಲಿ ಹೀಗೆ ಆರಂಭದಿಂದಲೂ ಬೆನ್ನೆಲುಬಾಗಿ ನಿಂತ ಒಬ್ಬ ಹಿರಿಯ ಉದ್ಯೋಗಿಯಿದ್ದಾರೆ. ಹಲವಾರು ವರ್ಷಗಳಿಂದ ಅವರು ಅಂಬಾನಿ ಗ್ರೂಪ್‌ಗಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಇವರ ಸ್ಯಾಲರಿ ಎಷ್ಟೂಂತ ತಿಳಿದುಕೊಂಡ್ರೆ ನೀವು ಬೆರಗಾಗೋದು ಖಂಡಿತ. 


ಪ್ರಪಂಚದಲ್ಲಿ ಬಿಲಿಯನೇರ್‌ ಎಂದು ಗುರುತಿಸಿಕೊಂಡಿರುವ ವ್ಯಕ್ತಿಗಳ ಹಿಂದೆ ಕೇವಲ ಅವರ ಪರಿಶ್ರಮವಷ್ಟೇ ಅಲ್ಲ ಕುಟುಂಬ ಸದಸ್ಯರು, ಸ್ನೇಹಿತರು, ಕಂಪೆನಿಗಳ ನಿಷ್ಢಾವಂತ ಉದ್ಯೋಗಿಗಳ ಪರಿಶ್ರಮವಿರುತ್ತದೆ. ಹಾಗೆಯೇ ಬಿಲಿಯನೇರ್‌ ಮುಕೇಶ್ ಅಂಬಾನಿಯವರ ಉದ್ಯಮದಲ್ಲೂ ಅತೀ ನಿಷ್ಠಾವಂತ ಉದ್ಯೋಗಿಯೊಬ್ಬರಿದ್ದಾರೆ. ಹಲವಾರು ವರ್ಷಗಳಿಂದ ಅವರು ಅಂಬಾನಿ ಗ್ರೂಪ್‌ಗಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಇವರ ಸ್ಯಾಲರಿ ಎಷ್ಟೂಂತ ತಿಳಿದುಕೊಂಡ್ರೆ ನೀವು ಬೆರಗಾಗೋದು ಖಂಡಿತ. ಅತಿ ಹೆಚ್ಚು ಸಂಭಾವನೆ ಪಡೆಯುವ ರಿಲಯನ್ಸ್ ಉದ್ಯೋಗಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ನಿಷ್ಠಾವಂತ ಉದ್ಯೋಗಿಯ ಕುರಿತಾದ ಮಾಹಿತಿ ಇಲ್ಲಿದೆ.

ರಿಲಯನ್ಸ್ ಗ್ರೂಪ್‌ನ ಅತೀ ಹಿರಿಯ ಉದ್ಯೋಗಿ ಪ್ರಸಾದ್‌
ದೊಡ್ಡ ಉದ್ಯಮಗಳು (Bussiness) ಕೇವಲ ವ್ಯವಹಾರದ ಜ್ಞಾನ ಮಾತ್ರವಲ್ಲದೆ ನಿಷ್ಠೆ ಮತ್ತು ನಂಬಿಕೆಯ ಹಿನ್ನೆಲೆಯಲ್ಲಿ ನಿರ್ಮಿಸಲ್ಪಟ್ಟಿವೆ. ಸಂಸ್ಥಾಪಕ ಕುಟುಂಬದ ಹೊರಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದು ಕರೆಯಲ್ಪಡುವ PMS ಪ್ರಸಾದ್ ಅವರು ರಿಲಯನ್ಸ್ ಗ್ರೂಪ್‌ನ ಅತ್ಯಂತ ಹಳೆಯ ಉದ್ಯೋಗಿಗಳಲ್ಲಿ (Employee) ಒಬ್ಬರು. ಮುಖೇಶ್ ಅಂಬಾನಿಯವರ ಅತ್ಯಂತ ವಿಶ್ವಾಸಾರ್ಹ ಪ್ರತಿನಿಧಿ. PMS ಪ್ರಸಾದ್ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (RIL)ಲ್ಲಿ ಅತ್ಯಂತ ಹಿರಿಯರು ಎಂದು ತಿಳಿದುಬಂದಿದೆ.

Tap to resize

Latest Videos

ಅಬ್ಬಬ್ಬಾ..ಅಂಟಿಲಿಯಾ ಮಾತ್ರವಲ್ಲ ದುಬೈನಲ್ಲೂ ಅಂಬಾನಿಗಿದೆ ರಾಜವೈಭೋಗದ ಐಷಾರಾಮಿ ಬಂಗಲೆ

ರಿಲಯನ್ಸ್ ಪೆಟ್ರೋಲಿಯಂ ಲಿಮಿಟೆಡ್‌ನ ಸಿಇಒ
PMS ಪ್ರಸಾದ್‌, ಪೂರ್ತಿ ಹೆಸರು ಪಾಂಡಾ ಮಧುಸೂದನ ಶಿವ ಪ್ರಸಾದ್. ಆರ್‌ಐಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಏಷ್ಯಾದ ಶ್ರೀಮಂತ ವ್ಯಕ್ತಿಯ ಉದ್ಯಮವನ್ನು ಸಂಭಾಳಿಸುವ ಪ್ರಮುಖ ಉದ್ಯೋಗಿಯಲ್ಲಿ ಒಬ್ಬರು. ಶೈಕ್ಷಣಿಕ ಅರ್ಹತೆಯ (Educational qualification) ಮೂಲಕ ಇಂಜಿನಿಯರ್ ಆಗಿರುವ ಪಿಎಂಎಸ್ ಪ್ರಸಾದ್ ಅವರು ರಿಲಯನ್ಸ್ ಸಂಸ್ಥಾಪಕ ಮತ್ತು ಪ್ರಸಿದ್ಧ ಉದ್ಯಮಿ ಧೀರೂಭಾಯಿ ಅಂಬಾನಿ ಉದ್ಯಮ ನಡೆಸುತ್ತಿದ್ದಾಗ ಸೇರಿಕೊಂಡರು. ಆಂಧ್ರಪ್ರದೇಶದ ಗುಂಟೂರಿನವರಾದ ಪ್ರಸಾದ್ ಅವರು ರಿಲಯನ್ಸ್ ಪೆಟ್ರೋಲಿಯಂ ಲಿಮಿಟೆಡ್‌ನ ಸಿಇಒ ಸೇರಿದಂತೆ ಸಂಸ್ಥೆಯಲ್ಲಿ ತಮ್ಮ 4 ದಶಕಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

ಪ್ರಸಾದ್ ಅವರಿಗೆ ಸಿಇಒ ಆಗಿ ಬಡ್ತಿ ನೀಡಿದವರು ಮುಕೇಶ್ ಅಂಬಾನಿ. ಗುಜರಾತ್‌ನ ಜಾಮ್‌ನಗರದಲ್ಲಿ ಉದ್ಯಮದ ಪ್ರಮುಖ ಪೆಟ್ರೋಲಿಯಂ ಸಂಸ್ಕರಣಾಗಾರವನ್ನು ಸ್ಥಾಪಿಸುವ ಕಾರ್ಯವನ್ನು ಅವರು ವಹಿಸಿಕೊಂಡರು. ಪ್ರಸಾದ್ ಅವರು ವಿಶ್ವದ ಅತಿದೊಡ್ಡ ಸಂಸ್ಕರಣಾಗಾರವನ್ನು ಸ್ಥಾಪಿಸಿದ ತಂಡವನ್ನು ಮುನ್ನಡೆಸಿದರು. ರಿಲಯನ್ಸ್ ಜಿಯೊದ ಯಶಸ್ವಿ ಮತ್ತು ಮಾರುಕಟ್ಟೆ ಪ್ರಾಬಲ್ಯದ ರೋಲ್‌ಔಟ್‌ಗೆ ಅವರು ಪ್ರಮುಖರಾಗಿದ್ದರು.

ಅಂಬಾನಿಯ 15000 ಕೋಟಿ ಬೆಲೆಯ ಬಂಗಲೆ ಅಂಟಿಲಿಯಾ ಮಳೆಗೆ ಸೋರ್ತಿದ್ಯಾ?

RIL ವೆಬ್‌ಸೈಟ್‌ನಲ್ಲಿನ ನಿರ್ದೇಶಕರ ಮಂಡಳಿಯ ಪಟ್ಟಿಯಲ್ಲಿ, ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಮತ್ತು ಸೋದರಳಿಯರಾದ ಹಿತಾಲ್ ಮತ್ತು ನಿಖಿಲ್ ಮೆಸ್ವಾನಿ ನಂತರ ಪಿಎಂಎಸ್ ಪ್ರಸಾದ್ ಐದನೇ ಹೆಸರಾಗಿದೆ. ಅವರು 2009 ರಿಂದ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.  Network18 Media & Investments Limited, TV 18 Broadcast Limited, Reliance BP Mobility Limited, Viacom 18 Media Private Limited ಮತ್ತು Reliance Commercial Dealers Limited ಸೇರಿದಂತೆ ವಿವಿಧ ಅಂಬಾನಿ ವ್ಯವಹಾರಗಳ ನಿರ್ದೇಶಕರಾಗಿ ಪ್ರಸಾದ್ ಸೇವೆ ಸಲ್ಲಿಸುತ್ತಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (RIL) ವಾರ್ಷಿಕ ವರದಿ 2021-22ರ ಪ್ರಕಾರ, ಪ್ರಸಾದ್ ಅವರು ಒಟ್ಟು ರೂ 11.89 ಕೋಟಿ ಸಂಭಾವನೆಯೊಂದಿಗೆ ಕಂಪನಿಯ ಮೂರನೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ನಿಖಿಲ್ ಮತ್ತು ಹಿತಾಲ್ ಮೆಸ್ವಾನಿ ತಲಾ 24 ಕೋಟಿ ಪಡೆಯುತ್ತಾರೆ. 

click me!