ಐದು ತಿಂಗಳ ಮಗುವೊಂದು ತಾಯಿಯೊಂದಿಗೆ ಪ್ಲ್ಯಾಂಕ್ ವ್ಯಾಯಾಮ ಮಾಡುವ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಕ್ಕಳು ಹಸಿಮಣ್ಣಿದ್ದಂತೆ ಅವರ ಮುಂದೆ ನಾವು, ಪೋಷಕರು ಏನು ಮಾಡುತ್ತೇವೆಯೋ ಅದನ್ನೇ ಅವರು ಕಲಿಯುತ್ತಾರೆ. ಬಾಲ್ಯದಲ್ಲಿ ಮಕ್ಕಳನ್ನು ಬೆಳೆಸಿದ ರೀತಿಯೇ ಅವರ ಮುಂದಿನ ಬದುಕಿಗೆ ಅಡಿಪಾಯ ಹಾಕುವುದು. ಸಾಮಾನ್ಯವಾಗಿ ಮಕ್ಕಳು ನಾವು ಹೇಳಿದ್ದನ್ನು ಮಾಡುವುದಕ್ಕಿಂತ ನಾವು ಮಾಡುವುದನ್ನೇ ಮಾಡಲು ಯತ್ನಿಸುವುದು ಹೆಚ್ಚು, ಹೀಗಾಗಿ ಮಕ್ಕಳ ಮುಂದೆ ಒಳ್ಳೆಯದ್ದನ್ನೇ ಮಾಡಿ ಎಂದು ಹಿರಿಯರು ಹೇಳುತ್ತಾರೆ. ಅದೇ ರೀತಿ ಇಲ್ಲೊಂದು ಪುಟ್ಟ ಮಗು ಅಮ್ಮನ ಜೊತೆ ಕೂಡಿಕೊಂಡು ವರ್ಕೌಟ್ ಮಾಡುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮಕ್ಕಳು ದೊಡ್ಡವರನ್ನು ಅನುಕರಣೆ ಮಾಡುವುದರಲ್ಲಿ ಎತ್ತಿದ ಕೈ, ದೊಡ್ಡವರು ಮಾಡಿದ್ದೆಲ್ಲವನ್ನು ಮಕ್ಕಳು ತಾವು ಮಾಡಲು ಬಯಸುತ್ತಾರೆ. ಅದೇ ರೀತಿ ಇಲ್ಲೊಂದು ಮಗು ತನ್ನ ತಾಯಿ ಮಾಡಿದಂತೆ ವ್ಯಾಯಾಮ ಮಾಡಲು ಪ್ರಯತ್ನಿಸುತ್ತಿದೆ. ಸಾಮಾನ್ಯವಾಗಿ ಐದು ತಿಂಗಳ ಮಕ್ಕಳಿಗೆ ಎದ್ದು ನಿಲ್ಲುವುದಿರಲಿ, ಕುಳಿತುಕೊಳ್ಳುವುದಕ್ಕೂ ಬರುವುದಿಲ್ಲ, ಆದರೆ ಈ ಮಗು, ಅಮ್ಮನ ಜೊತೆಗೂಡಿ ಪ್ಲಾಂಕ್ ವ್ಯಾಯಾಮ ಮಾಡುತ್ತಿದ್ದು, ಈ ಮಗುವಿನ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಈ ಮುದ್ದಾದ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಮೆರಿಕಾದ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಮಿಚೆಲ್ ಎಂಬುವವರು ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ ಅಮ್ಮ ಪ್ರೋತ್ಸಾಹಿಸುತ್ತಿದ್ದರೆ, ಇವರ ಐದು ತಿಂಗಳ ಮಗು ಆಸ್ಟಿನ್, 'ಪ್ಲಾಂಕ್ ಪೊಸಿಷನ್'ನಲ್ಲಿ ನಿಲ್ಲಲು ಪ್ರಯತ್ನಿಸುವುದನ್ನು ಕಾಣಬಹುದಾಗಿದೆ.
undefined
ಅಪಘಾತದಲ್ಲಿ ಪೋಷಕರು ಬಿದ್ದರೂ ಬೈಕ್‌ನಲ್ಲೇ ಅರ್ಧ ಕಿ.ಮಿ ಸಾಗಿದ ಪುಟ್ಟ ಕಂದ, ಮುಂದೇನಾಯ್ತು?
ತಾಯಿ ಎಲ್ಬೋ ಪ್ಲಾಂಕ್ ಮಾಡುತ್ತಿದ್ದರೆ ಮಗು ಆಸ್ಟಿನ್ ಬೊರಲಾಗಿ ಮಲಗಿಕೊಂಡು ಅಮ್ಮ ಮಾಡಿದಂತೆ ಮಾಡಲು ಪ್ರಯತ್ನಿಸುವುದನ್ನು ಕಾಣಬಹುದು. ಈ ವೀಡಿಯೋವನ್ನು ಪೋಸ್ಟ್ ಮಾಡಿದ ತಾಯಿ ನನ್ನ ಐದು ತಿಂಗಳ ಮಗು ಹೊಸ ಕೆಲಸಗಳನ್ನು ಕಲಿಯುತ್ತಿದ್ದಾನೆ ಎಂದು ಪೋಸ್ಟ್ ಮಾಡಿದ್ದಾರೆ. ಅಮ್ಮನಿಂದ ಪ್ರೇರಣೆ ಪಡೆದ ಈ ಕಂದ ತನ್ನೆಲ್ಲಾ ಶಕ್ತಿ ಬಳಸಿ ಪ್ಲಾಂಕ್ ಪೊಸಿಷನ್‌ನಲ್ಲಿ ನಿಲ್ಲುತ್ತಾನೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಈ ವೀಡಿಯೋ ಶೇರ್ ಮಾಡಿಕೊಂಡಿರುವ ತಾಯಿ ಅಮ್ಮನಂತೆ ಸ್ಟ್ರಾಂಗ್ ಎಂದು ಬರೆದುಕೊಂಡಿದ್ದಾರೆ. ಈ ಮುದ್ದಾದ ವೀಡಿಯೋವನ್ನು 24 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಮಿಚೆಲ್ ಅವರಿಗೆ ಇನ್ಸ್ಟಾಗ್ರಾಮ್‌ನಲ್ಲ 42,500 ಜನ ಫಾಲೋವರ್ಸ್‌ಗಳಿದ್ದಾರೆ. ವೀಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದು, ಹೊಸತನು ಕಲಿಯುತ್ತಿರುವ ಮಗುವಿನ ಸಾಹಸಕ್ಕೆ ಹಾಗೂ ತಾಯಿಯ ಮಾರ್ಗದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.