ಉದ್ಯಾನ ನಗರಿ ಬೆಂಗಳೂರಿಗೆ ನಾನಾ ಬಿರುದುಗಳಿವೆ. ಪೆನ್ಷನರ್ಸ್ ಹಬ್, ಸಿಲಿಕಾನ್ ಸಿಟಿ ಎಂದು ಕಲೆಯಲ್ಪಡುವ ಈ ಕರ್ನಾಟಕದ ರಾಜಧಾನಿಯ ಕೆಲವು ಸ್ಥಳಗಳಲ್ಲಿ ದೆವ್ವ ಭೂತವಿದೆ ಎಂಬ ಪ್ರತೀತಿಯೂ ಇದೆ. ಎಲ್ಲಿ ಅವು?
ಗಗನಚುಂಬಿ ಕಟ್ಟಡಗಳು, ಜನನಿಬಿಡ ಮಾಲ್‌ಗಳು, ಚಿತ್ರಮಂದಿರಗಳು, ಪಾಶ್ ಆಗಿ ಡ್ರೆಸ್ ಮಾಡಿಕೊಂಡು ಹೋಗೋ ಯುವಕ-ಯುವತಿಯರು, ಎಲ್ಲಿ ನೋಡಿದರಲ್ಲಿ ಹಸಿರು ಮರಗಳು, ಬಣ್ಣ, ಬಣ್ಣದ ಗೋಡೆಗಳು...ಈ ಎಲ್ಲದರ ನಡುವೆ ಕೆಲವೊಂದು ಕಟ್ಟಡ, ರಸ್ತೆಗಳಲ್ಲಿ ದೆವ್ವ, ಭೂತವೂ ಉಂಟೆಂಬ 'ಮೂಢ' ನಂಬಿಕೆ ಬೆಂಗಳೂರಿಗರಲ್ಲಿದೆ. ಕೆಲವರಿಗೆ ತರ್ಕಕ್ಕೆ ಸಿಗದ ಘಟನೆಗಳು ಅನುಭವಕ್ಕೆ ಬಂದ ಕಾರಣ, ಆಯಾ ಸ್ಥಳಗಳಲ್ಲಿ ದೆವ್ವ, ಭೂತಗಳಿರಬಹುದೆಂಬುವುದು ಬೆಂಗಳೂರಿಗರ ಅಂಬೋಣ. ಯಾವ್ಯಾವ ಸ್ಥಳಗಳಲ್ಲಿ ಇಂಥ ಅನುಭವಗಳಾಗಿವೆ...?
- ಬೆಂಗಳೂರು ಅಂತರಾಪ್ಟ್ರೀಯ ವಿಮಾನ
ಜನರು ತಮ್ಮ ಆತ್ಮೀಯರನ್ನು ಪ್ರೀತಿಯಿಂದ ಸ್ವಾಗತಿಸಿ ಅಥವಾ ಗುಡ್ ಬೈ ಹೇಳಿ, ಕಳುಹಿಸುವ, ಬರ ಮಾಡಿಕೊಳ್ಳುವ ಈ ಜನನಿಬಿಡ ಸ್ಥಳದಲ್ಲಿಯೂ ದೆವ್ವವಿದೆಯಂತೆ. ಒಮ್ಮೆ ಬಿಳಿ ಸೀರೆ ಧರಿಸಿದ ಮಹಿಳೆ ಕಾಣೆಸಿಕೊಂಡಿದ್ದು, ಅಲ್ಲಿನ ಸಿಬ್ಬಂದಿ ವಿಚಾರಿಸಲು ಹೋದಾಗ ಅದು ಇದ್ದಕ್ಕಿದ್ದಂತೆ ಮಾಯವಾಯಿತಂತೆ. ಇಂತ ಅನುಭವ ಮತ್ಯಾರಿಗೂ ಆಗಿರುವ ವರದಿಗಳು ಇಲ್ಲದಿದ್ದರೂ, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಯೂ ದೆವ್ವದ ಕಾಟವಿದೆ ಎಂದೇ ಜನರು ಭಾವಿಸುತ್ತಾರೆ.
ಮಧ್ಯರಾತ್ರಿ ಪ್ರತ್ಯಕ್ಷವಾಗುತ್ತಿದ್ದ ದೆವ್ವ ಪೊಲೀಸರ ಬಲೆಗೆ!
undefined
- ಕಲ್ಪಳ್ಳಿ ಸಮಾಧಿ
ಓಲ್ಡ್ ಮದ್ರಾಸ್ ರಸ್ತೆಯಲ್ಲಿರುವ ಈ ಸಮಾಧಿ ಬಳಿ ತಲೆ ಕೂದಲು ನಿಮಿರಿಸಿ ನಿಲ್ಲೋ, ತರ್ಕಕ್ಕೆ ನಿಲುಕದ ಮನುಷ್ಯಾಕೃತಿಯನ್ನು ನೋಡಿರುವುದಾಗಿ ಹಲವರು ಹೇಳಿದ್ದಾರೆ.
- ವಿಕ್ಟೋರಿಯಾ ಆಸ್ಪತ್ರೆ
ಅಸಹಜ ಸಾವುಗಳ ಬಹುತೇಕ ಶವ ಪರೀಕ್ಷೆ ನಡೆಯುವುದು ಬೆಂಗಳೂರಿನ ಇದೇ ಆಸ್ಪತ್ರೆಯಲ್ಲಿ. ಆತ್ಮಹತ್ಯೆ, ಕೊಲೆ ಪ್ರಕರಣಗಳ ಮರಣೋತ್ತರ ಪರೀಕ್ಷೆ ನಡೆಯುವ ಈ ಸ್ಥಳದಲ್ಲಿ ದೆವ್ವ, ಪಿಶಾಚಿಗಳು ಓಡಾಡುತ್ತವೆಂದು ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಇದುವರೆಗೂ ಎಂಥ ತೊಂದರೆಯನ್ನೂ ನೀಡಿದ ಉದಾಹರಣೆಗಳಿಲ್ಲ. ಕೆಲವೊಮ್ಮೆ ಆಹಾರದ ಡಬ್ಬಿಗಳು ಕಾಣೆಯಾದ ಬಗ್ಗೆ ವರದಿಗಳಿವೆ.
- ಟೆರ್ರಾವೆರಾ
ನಗರದ ಮಧ್ಯ ಭಾಗದಲ್ಲಿರುವ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರೋ ಮನೆ ಇದು. ಈ ಮನೆಯಲ್ಲಿದ್ದ ಇಬ್ಬರು ಸಹೋದರಿಯರಲ್ಲಿ ಒಬ್ಬಳು ನಿಗೂಢವಾಗಿ ಕೊಲೆಯಾಗಿದ್ದಳಂತೆ. ಈ ಘಟನೆ ನಂತರ ಮತ್ತೊಬ್ಬಳು ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಇನ್ನೂ ಈ ಕೊಲೆಗೆ ಕಾರಣ ಯಾರೆಂಬುದು ಪತ್ತೆಯಾಗಿಲ್ಲ. ಪಾಳು ಬಿದ್ದಿರುವ ಈ ಮನೆ ಬಳಿ ಹೋದರೆ, ಯಾರೋ ಕಿರುಚಿದಂತೆ ಕೇಳುತ್ತದೆ ಎಂಬುವುದು ಹಲವರ ಅಭಿಪ್ರಾಯ. ಜೋರಾಗಿ ಗಾಳಿ ಬೀಸಿ, ಅಳುವ ಸದ್ದೂ ಕೇಳುತ್ತಂತೆ.
ಡ್ರಾಪ್ ಕೇಳಲು ರಸ್ತೆ ಬದಿ ನಿಂತಿದ್ದ ದೆವ್ವ
- ರಾಷ್ಟ್ರೀಯ ಹೆದ್ದಾರಿ 4
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂದರವಾದ ಹೆಣ್ಣೊಂದು ಲಿಫ್ಟ್ ಕೇಳಿವಂತೆ ವಾಹನವನ್ನು ಅಡ್ಡ ಹಾಕುತ್ತಾಳಂತೆ. ಏನೆಂದು ವಿಚಾರಿಸಲು ಗಾಡಿಯನ್ನು ನಿಲ್ಲಿಸಿದರೆ ಆ ಹೆಣ್ಣು ಮಾಯವಾಗುತ್ತಂತೆ! ತುಸು ಸಮಯದ ನಂತರ ವಿಚಿತ್ರವಾದ ನಗುವಿನ ಸದ್ದು ಕೇಳುತ್ತಂತೆ. ಇದರ ಅನುಭವವಾದವರು ಮಾರನೇ ದಿನ ಚಳಿ, ಜ್ವರ ಬಂದು ಮಲಗಿದ್ದಿದೆ.
- ಎಂಜಿ ರೋಡ್
ಎಂಜಿ ರೋಡ್ ಎಂದರೆ ಮನದಲ್ಲಿ ಏನು ಮೂಡುತ್ತೆ ಹೇಳಿ? ಎಲ್ಲಿಯೋ ವಿದೇಶಕ್ಕೆ ಹೋದಂತೆ ಇಲ್ಲಿ ಭಾಸವಾಗುವುದು ಸುಳ್ಳಲ್ಲ. ಆಧುನೀಕತೆಯೇ ಮೈ ತಳೆದಂತೆ ಕಾಣುವ ರಾಷ್ಟ್ರಪಿತನ ಹೆಸರಿರುವ ಈ ರೆಸ್ತೆಯಲ್ಲಿಯೂ ಭೂತದ ಕಾಟವಿದೆಯಂತೆ! ಕಾಲ್ ಸೆಂಟರ್‌ವೊಂದರಲ್ಲಿ ರಾತ್ರಿ ಪಾಳಿ ಮುಗಿಸಿ, ಮನೆಗೆ ತೆರಳುತ್ತಿದ್ದ ಮಹಿಳೆಯೊಬ್ಬಳಿಗೆ ಅಪಘಾತವಾಗಿತ್ತಂತೆ. ಸಹಾಯಕ್ಕೆ ಅಂಗಲಾಚಿದರೂ, ಯಾರೂ ಮುಂದಾಗಿಲಿಲ್ಲವಂತೆ. ನಂತರ ಆ ಹೆಣ್ಣು ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಈ ಸ್ಥಳದಲ್ಲಿ ಆಗಾಗ ಕಿರುಚುವ ಶಬ್ಧ ಕೇಳಿಸಿದ್ದು ಹಲವರ ಅನುಭವಕ್ಕೆ ಬಂದಿದೆ. ಅಷ್ಟೇ ಅಲ್ಲ, ಆಕೆ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ಅಳುವ ಸದ್ದು ಕೇಳುತ್ತಿರುತ್ತಂತೆ!
ಭಾರತದ ಈ ಸುಂದರ ತಾಣಗಳೀಗೆ ದೆವ್ವ ನಗರಿ