Instagram Reels 2022: ಈ ವರ್ಷ ಟ್ರೆಂಡ್ ಕ್ರಿಯೆಟ್ ಮಾಡಿದ ಇನ್ಸ್ಟಾ ರೀಲ್ಸ್‌

Published : Nov 28, 2022, 04:22 PM IST
Instagram Reels 2022: ಈ ವರ್ಷ ಟ್ರೆಂಡ್ ಕ್ರಿಯೆಟ್ ಮಾಡಿದ ಇನ್ಸ್ಟಾ ರೀಲ್ಸ್‌

ಸಾರಾಂಶ

ಇನ್ಸ್ಟಾಗ್ರಾಮ್ ಯಾರಿಗೆ ಗೊತ್ತಿಲ್ಲ ಈಗ. ಮಕ್ಕಳಿಂದ ಹಿಡಿದು ಎಲ್ಲರೂ ಸಮಯ ಕಳೆಯೋದು ರೀಲ್ಸ್ ನೋಡ್ತಾ. ಈ ರೀಲ್ಸ್ ನಲ್ಲಿ ಒಂದಿಷ್ಟು ಹಾಡುಗಳು ಈ ವರ್ಷ ಸಾಕಷ್ಟು ಸುದ್ದಿ ಮಾಡಿವೆ.   

ಮೊಬೈಲ್ ಕೈಗೆ ಬಂತೆಂದ್ರೆ ಜನರು ಮೊದಲು ನೋಡೋದು ಇನ್ಸ್ಟಾಗ್ರಾಮನ್ನು. ಮನರಂಜನೆಯ ಮಹಾಪೂರವೇ ಇಲ್ಲಿದೆ. ಇನ್ಸ್ಟಾಗ್ರಾಮ್ ರೀಲ್ಸ್, ಟಿಕ್ ಟಾಕ್ ಗೆ ಸ್ಪರ್ಧೆ ನೀಡ್ತಿದೆ. ಭಾರತೀಯರಿಗೆ ಇನ್ಸ್ಟಾಗ್ರಾಮ್ ರೀಲ್ಸ್, ಟಿಕ್ ಟಾಕ್ ಆಗಿದೆ. ರೀಲ್ಸ್ ನೋಡ್ತಾ ಹೋದ್ರೆ ಸಮಯ ಸರಿದಿದ್ದು ತಿಳಿಯೋದಿಲ್ಲ. ಅನೇಕ ಮನರಂಜನೆ ಜೊತೆ ಆಸಕ್ತಿದಾಯಕ ವಿಷ್ಯಗಳನ್ನು ರೀಲ್ಸ್ ನಲ್ಲಿ ಹಂಚಿಕೊಳ್ಳಲಾಗುತ್ತದೆ. 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಇನ್ಸ್ಟಾಗ್ರಾಮ್ ನಲ್ಲಿ  ಪ್ರತಿದಿನ ಹಲವಾರು ಗಂಟೆಗಳನ್ನು ಕಳೆಯುತ್ತಾರೆ. ಇತರ ಸಾಮಾಜಿಕ ಜಾಲತಾಣಗಳನ್ನು ಇನ್ಸ್ಟಾಗ್ರಾಮ್ ಹಿಂದಿಕ್ಕುತ್ತಿದೆ.  

ಇನ್ಸ್ಟಾಗ್ರಾಮ್ (Instagram)  ರೀಲ್ಸ್ ನಲ್ಲಿ ಪ್ರತಿ ದಿನ ಒಂದೊಂದು ಸಾಂಗ್ ಪ್ರಸಿದ್ಧಿ ಪಡೆಯುತ್ತದೆ. ಒಬ್ಬರು ಮಾಡಿದ ಹಾಡನ್ನು ಇನ್ನೊಬ್ಬರು ಕಾಪಿ ಮಾಡ್ತಾರೆ. ಹೀಗೆ ಆ ಹಾಡು ಇಡೀ ರೀಲ್ಸ್ (Reels ) ಆವರಿಸುತ್ತದೆ. ಅನೇಕ ಬಾರಿ ಆ ಹಾಡನ್ನು ಅಥವಾ ಡೈಲಾಗನ್ನು ಸ್ವಲ್ಪ ಬದಲಿಸಿ ಅಪ್ಲೋಡ್ ಮಾಡೋರು ಇದ್ದಾರೆ. ನಾವಿಂದು ಈ ವರ್ಷ ಹೆಚ್ಚು ಪ್ರಸಿದ್ಧಿ ಪಡೆದ ರೀಲ್ಸ್ ಸಾಂಗ್ಸ್ ಯಾವುದು ಎಂಬುದನ್ನು ನಿಮಗೆ ಹೇಳ್ತೆವೆ.  

ಕಾಂತಾರಾ (Kantara) : ನಾವು ಮೊದಲು ಕನ್ನಡದ ವಿಷ್ಯಕ್ಕೆ ಬಂದ್ರೆ ಸದ್ಯ ಇನ್ಸ್ಟಾದಲ್ಲಿ ಪ್ರಸಿದ್ಧಿ ಪಡೆದಿರೋದು ಕಾಂತಾರಾ ಚಿತ್ರದ ಹಾಡು. ಕಾಂತಾರಾ ಚಿತ್ರದ ಹಾಡಿಗೆ ಕನ್ನಡಿಗರು ಮಾತ್ರವಲ್ಲ ಬೇರೆ ಭಾಷಿಕರು ಕೂಡ ರೀಲ್ಸ್ ಹರಿಬಿಡ್ತಿದ್ದಾರೆ. 

Haripriya Marriage: ಹರಿಪ್ರಿಯಾ ಕೈ ಹಿಡಿಯಲಿರುವ ವಸಿಷ್ಠ ಸಿಂಹ?

ಬೆಳಕಿನ ಕವಿತೆ ( ಚಿತ್ರ ಬನಾರಸ್ ) : ಇತ್ತೀಚಿಗೆ ಬಿಡುಗಡೆಯಾದ ಬನಾರಸ್ ಚಿತ್ರದ ಬೆಳಕಿನ ಕವಿತೆ ಹಾಡು ಕೂಡ ರೀಲ್ಸ್ ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಅನೇಕರು ಈ ಸಾಂಗ್ ಗೆ ರೀಲ್ಸ್ ಮಾಡ್ತಿದ್ದಾರೆ.

ಝಲಿಮಾ ( ರಯೀಸ್ ಸಿನಿಮಾ) : ಶಾರುಖ್ ಖಾನ್ ಮತ್ತು ಮಹಿರಾ ಖಾನ್ ಅಭಿನಯದ  ರಯೀಸ್  ಚಿತ್ರದ ಝಲಿಮಾ ಹಾಡು ಈ ವರ್ಷ ಟ್ರೆಂಡಿಗ್ ಆಗಿದೆ. ಈ ಹಾಡಿನ ಅನೇಕ ಆವೃತ್ತಿಗಳನ್ನು ನಾವು ನೋಡಬಹುದು. ಈ ಹಾಡಿನ ಕೆಲವು ರೀಲ್‌ಗಳಲ್ಲಿ ವಾಯ್ಸ್ ಮಾಡ್ಯುಲೇಶನ್  ಸಹ ಮಾಡಲಾಗಿದೆ.  

ನೈಟ್ ಚೇಂಜ್ ( ಒನ್ ಡೈರೆಕ್ಷನ್ ) : ಈ ಬಾರಿ ಟ್ರೆಂಡ್ ರೀಲ್ಸ್ ನಲ್ಲಿ ಇದು ಸೇರಿದೆ. ಪ್ರತಿ ಮೂರನೇ ಒಂದು ರೀಲ್ಸ್ ನಲ್ಲಿ ಈ ಹಾಡನ್ನು ನಾವು ಕೇಳಬಹುದು. ಯುಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ಎರಡರಲ್ಲೂ ನೀವು ಇದನ್ನು ನೋಡಬಹುದು.   

ಮನಿಕಿ (Manike) ( ಚಿತ್ರ – ಥ್ಯಾಂಕ್ಸ್ ಗಾಡ್ ) : ಈ ಹಾಡಿನ ತಮಿಳು ಅವತರಣಿಕೆ ಎಷ್ಟು ವೈರಲ್ ಆಗಿದೆಯೋ ಅಷ್ಟೇ ಹಿಂದಿ  ಅವತರಣಿಕೆ ಕೂಡ ವೈರಲ್ ಆಗಿದೆ. ಈ ಹಿಂದಿ ಹಾಡಿನಲ್ಲಿ ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಈ ಹಾಡಿನ ರೀಲ್ಸ್ ಸಿಕ್ಕಾಪಟ್ಟೆ ಸಿಗ್ತಿದೆ.  

ಯೇ ಜೋ ಹಲ್ತಾ ಹಲ್ತಾ ಸುರೂರ್ ಹೈ  :  ಈ ಹಾಡಿಗೆ 4-5 ಲಕ್ಷಕ್ಕೂ ಹೆಚ್ಚು ರೀಲ್ಸ್ ಮಾಡಲಾಗಿದೆ.  ಇದು ಟ್ರೆಂಡ್ ರೀಲ್ಸ್ ಆಗಿದ್ದು, ಇದ್ರಲ್ಲಿ ಅನೇಕ ಆವೃತ್ತಿಗಳನ್ನು ನಾವು ನೋಡಬಹುದಾಗಿದೆ.  

Kantara: ಕಾಂತಾರ-2 ಬರುವುದು ಫಿಕ್ಸ್?: ರಿಷಬ್‌ಗೆ ಜೊತೆಯಾಗ್ತಾರಾ ರಕ್ಷಿತ್?

ಕೇಸರಿಯಾ (ಚಿತ್ರ ಬ್ರಹ್ಮಾಸ್ತ್ರ) : ಕೇಸರಿಯಾ ನಾರ್ಮಲ್ ಸಾಂಗ್ ಜೊತೆಗೆ ಈಗ ಅದರ ಡ್ಯಾನ್ಸ್ ಮಿಕ್ಸ್ ಕೂಡ ವೈರಲ್ ಆಗುತ್ತಿದೆ. ಇದ್ರಲ್ಲಿ ಸಾಕಷ್ಟು ಬದಲಾವಣೆ ತರುವ ಪ್ರಯತ್ನ ನಡೆಯುತ್ತಿದೆ. ನೀವೂ ರೀಲ್ಸ್ ಪ್ರಿಯರಾಗಿದ್ದರೆ ಕೇಸರಿಯಾ ಸಾಂಗ್ ಬಿಡಬೇಡಿ.   

ವಿತ್ ಔಟ್ ಇಡ್ಲಿ : ಇಡ್ಲಿ –ಚಟ್ನಿ ಸಾಂಗ್ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಯಾರು ನೋಡಿದ್ರೂ ಈ ಸಾಂಗ್ ಗೆ ಸ್ಟೆಪ್ಸ್ ಹಾಕ್ತಿದ್ದಾರೆ.  ಇಷ್ಟೇ ಅಲ್ಲದೆ ಈ ವರ್ಷ ಪ್ರಸಿದ್ಧಿ ಪಡೆದ ರೀಲ್ಸ್ ನಲ್ಲಿ ಕೆಜಿಎಫ್ ಸೇರಿದಂತೆ ಅನೇಕ ಸಿನಿಮಾ ಹಾಡುಗಳಿವೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Toilet Cleaning Shocking Tips: ಕೇವಲ 5 ರೂಪಾಯಿಗೆ ಟಾಯ್ಲೆಟ್ ಹೊಚ್ಚಹೊಸದರಂತೆ ಆಗುತ್ತೆ; ಇಂದೇ ಟ್ರೈ ಮಾಡಿ!
Salman Khan-Aishwarya Rai Secret: ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್ ಸೀಕ್ರೆಟ್ ಬಿಚ್ಚಿಟ್ಟ ಸಾದಿಯಾ ಸಿದ್ದಿಕಿ; ಇಲ್ಲಿರೋದು ಹೊಸ ವಿಷಯ!