ಆಶ್ಚರ್ಯವಾದರೂ ಆರೋಗ್ಯಕಾರಿ ಜಿರಲೆ ಹಾಲು!

First Published Jun 25, 2018, 3:53 PM IST
Highlights

ಅಬ್ಬಾ ಜಿರಲೆ ನೋಡಿದರೆ ಹಿಂಸೆ ಆಗುತ್ತೆ. ಮನೆ ಮನೆ ಮೂಲೆಗಳಲ್ಲಿ ಕಾಣಿಸಿಕೊಳ್ಳೋ ಈ ಜಿರಲೆ ಹಾಲು ದೇಹಕ್ಕೆ ಒಳ್ಳೆಯದಂತೆ!

ನಂಬ್ಲಿಕ್ಕೆ ಕಷ್ಟವಾದರೂ ಇಂಥದ್ದೊಂದು ಸತ್ಯವನ್ನು ಅಧ್ಯಯನಗಳಿಂದ ಕಂಡು ಹಿಡಿದಿದ್ದಾರೆ. ಹಸು ಹಾಲು, ಬಾದಾಮಿ ಹಾಲು ಮತ್ತು ಸೊಯಾ ಹಾಲು ಈ ರೀತಿಯಲ್ಲಿ ಹಲವಾರು ಹಾಲುಗಳನ್ನು ಸೇವಿಸಿದ್ದೇವೆ. ಆರೋಗ್ಯಕ್ಕೆ ಒಳ್ಳೆಯದು ಗೊತ್ತು. ಆದರೆ, ಈ ಜಿರಲೆ ಹಾಲೂ ಒಳ್ಳೆಯದಂತೆ!

ಅದರಲ್ಲಿಯೂ ಜಿರಲೆ ಹಾಲಿನ ಫೋಷಣೆಯನ್ನು ಮನುಷ್ಯರು ಹೆಚ್ಚು ಆನಂದಿಸುತ್ತಾರೆಂದು ಸಂಶೋಧನೆಯೊಂದು ದೃಢಪಡಿಸಿದೆ. ಈ ಹಾಲಿನಲ್ಲಿ ಪ್ರೊಟೀನ್, ಸಕ್ಕರೆ ಮತ್ತು ಕೊಬ್ಬು ಹಾಗೂ ಅಮಿನೊ ಆಮ್ಲವಿರುತ್ತದೆ. ಸಾವಿರ ಜಿರಲೆಯಿಂದ ಅಬ್ಬಬ್ಬಾ ಎಂದರೆ 100 ಗ್ರಾಮ್ ಹಾಲು ಸಿಗಬಹುದಷ್ಟೆ!

ಇಲ್ಲವಾದಲ್ಲಿ ಜಿರಲೆ ಹಾಲನ್ನು ಫಿಲ್ಟರ್ ಪೇಪರ್, ಮೊಸರು ಮತ್ತು ಜಿರಲೆ  ಜೀನ್ ಸೇರಿಸಿಯೂ ಸೃಷ್ಟಿಸಬಹುದು. ಹಸುವಿನ ಹಾಲಿನ ರುಚಿಯೇ ಇರುವ, ಇದರ ಒಂದು ಲೋಟ ತಯಾರಿಸಲು ಸಿಕ್ಕಾಪಟ್ಟೆ ಜಿರಲೆ ಬೇಕು. 

ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯೊಂದರ ಪ್ರಕಾರ, ಈಗಾಗಲೇ ಜಿರಲೆ ಹಾಲಿನ ಮಾರುಕಟ್ಟೆಯೂ ಶುರುವಾಗಿದೆ. ಆನ್‌ಲೈನ್‌ನಲ್ಲಿ ಜಿರಲೆ ಹಾಲು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ತೆಂಗಿನಕಾಯಿ ಹಾಲು ಮತ್ತು ಹಸುವಿನ ಹಾಲಿನಂತೆ ಮಾರಾಟವಾದರೂ ಆಶ್ಚರ್ಯವಿಲ್ಲ. 

ಇನ್ನು ಮುಂದೆ ಮನೆ ತುಂಬಾ ಜಿರಲೆ ಇದ್ದರೆ ಆತಂಕಗೊಳ್ಳುವುದು. ಹೈನುಗಾರಿಕೆಯಂತೆ, ಜಿರಲೆ ಸಾಕಿ ಹಾಲು ಮಾರುವುದೂ ಒಳ್ಳೆಯ ಉದ್ಯೋಗವಾಗಬಹುದು.

click me!