ಗಡ್ಡ ವಿರೋಧಿಗಳಿಗೊಂದು ಸಂತಸದ ಸುದ್ದಿ, ಗಡ್ಡಧಾರಿಗಳಿಗೋ ಆತಂಕ

By Web DeskFirst Published Jun 14, 2019, 1:00 PM IST
Highlights

ಇತ್ತೀಚಿನ ದಿನಗಳಲ್ಲಿ ಗಡ್ಡ ಬಿಡೋದು ಟ್ರೆಂಡ್ ಆಗಿದೆ. ಗಡ್ಡ ಬಿಟ್ರೇನೇ ನಾವು ಸ್ಟೈಲ್ ಆಗಿ ಕಾಣಿಸೋದು ಎಂದು ಪುರುಷರು ಅಂದುಕೊಂಡಿದ್ದಾರೆ. ಆದರೆ ನಿಮ್ಗೊತ್ತಾ? ಗಡ್ಡದಲ್ಲಿ ವಿಪರೀತ ಕೀಟಾಣುಗಳು ಇರುತ್ತವೆ. ಮುಂದೆ ಓದಿ... 

ಹೌದು.... ಪುರುಷರ ಗಡ್ಡದಲ್ಲಿ ನಾಯಿ ಮೈಮೇಲೆ ಇರೋದಕ್ಕಿಂತ ಹೆಚ್ಚು ಕೀಟಾಣುಗಳು ಇರುತ್ತಂತೆ! ಇದನ್ನು ನಾವು ಹೇಳ್ತಾ ಇಲ್ಲ. ಹೊಸದಾದ ಸ್ವಿಸ್ ಸ್ಟಡಿ ಹೇಳಿದೆ. ಈ ರಸರ್ಚ್ ಮಾಡಿರುವ  ಪ್ರೊಫೆಸರ್ ಅಡ್ರೆಯಾಸ್ ಗುಟ್ಜ್ ಯೇಟ್ ಗಡ್ಡ ದ್ವೇಷಿಯೋ ಏನೋ ನಮಗೆ ಗೊತ್ತಿಲ್ಲ. ಆದರೆ, ಸುದೀರ್ಘ ಸಂಶೋಧನೆಯೊಂದನ್ನು ಕೈಗೊಂಡು, ಇಂಥದ್ದೊಂದು ವಿಷ್ಯವನ್ನು ಬಹಿರಂಗಗೊಳಿಸಿದ್ದಾರೆ.

ಇದಕ್ಕಾಗಿ ಸ್ವಿಡ್ಜರ್ ಲ್ಯಾಂಡ್ ನ ಕ್ಲಿನಿಕ್  18 ಗಡ್ಡ ಬಿಟ್ಟ ಪುರುಷರು ಮತ್ತು ನಾಯಿಗಳನ್ನು ಪರೀಶೀಲಿಸಿದೆ. ನಾಯಿಯ ಕುತ್ತಿಗೆಯವರೆಗೂ ಟೆಸ್ಟ್ ಮಾಡಲಾಗಿದೆ. ಎರಡನ್ನೂ ಹೋಲಿಸಿದಾಗ ಏಳು ಪುರುಷರ ಗಡ್ಡದಲ್ಲಿ ನಾಯಿಕ್ಕಿಂತ ಹೆಚ್ಚು ಕೀಟಾಣು ಇರುವುದು ಪತ್ತೆಯಾಗಿದೆ. ಇದು ಮನುಷ್ಯನ ಆರೋಗ್ಯಕ್ಕೆ ಮಾರಕವಾಗಲಿದೆ ಎನ್ನುವುದು ಈ ಸಂಶೋಧನೆಯ ಸಾರ. 

ಶೇವಿಂಗ್ ಬಳಿಕ ತ್ವಚೆ ತುರಿಸುತ್ತದೆಯೇ? ಹೀಗ್ ಮಾಡಿ

ಇದನ್ನು ಕೇಳಿ ಶಾಕ್ ಆಯ್ತಾ? ಹಾಗಾದರೆ ಇದನ್ನು ತಡೆಯಲು, ಗಡ್ಡವನ್ನು ಕ್ಲೀನ್ ಆಗಿಟ್ಟುಕೊಳ್ಳಲು ಏನು ಮಾಡಬೇಕು? 

- ಗಡ್ಡ ಬಿಡಲು ಆರಂಭಿಸಿದಾಗ ತುರಿಕೆ ಆರಂಭವಾಗುತ್ತದೆ. ಆದುದರಿಂದ ಮೊದಲಿನಿಂದಲೇ ಗಡ್ಡವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಆರಂಭಿಸಿ.

- ಗಡ್ಡ ಸಣ್ಣದಿರುವಾಗ  ಕತ್ತರಿಸಬೇಡಿ. ಸ್ವಲ್ಪ ಉದ್ದ ಬಿಡಿ. ಎರಡು ಮೂರು ತಿಂಗಳು ಕಳೆದ ಮೇಲೆ ಕತ್ತರಿಸಿ. 

ಶೇವ್ ಮಾಡಿದ್ಮೇಲೆ ಹೀಗ್ ಮಾಡಬೇಕಾ?

- ಗಡ್ಡವನ್ನು ಸ್ವಚ್ಛಗೊಳಿಸಲು ಶ್ಯಾ೦ಪೂ ಬಳಸಿ. ನಿಮ್ಮಕೂದಲನ್ನು ನಿಯಮಿತವಾಗಿ ತೊಳೆದು ಸ್ವಚ್ಛಗೊಳಿಸಿಕೊಳ್ಳುವ೦ತೆ, ನಿಮ್ಮ ಮುಖದ ಮೇಲಿನ ಕೂದಲನ್ನೂ ನಿಯಮಿತವಾಗಿಸ್ವಚ್ಛಗೊಳಿಸಿ. 

- ಗಡ್ಡ ತೊಳೆಯಲು ಸಾಬೂನನ್ನು ಎ೦ದಿಗೂ ಬಳಸಿಕೊಳ್ಳಬೇಡಿ. ಇದರಿಂದ ತ್ವಚೆ ಶುಷ್ಕವಾಗುತ್ತದೆ 

- ಗಡ್ಡದ ಮೇಲೆ ಕ೦ಡೀಶನರ್ ಬಳಸಿಕೊಳ್ಳುವ ವಿಚಾರ ಶ್ಯಾ೦ಪೂ ಬಳಸಿಕೊಳ್ಳುವಷ್ಟೇ ಮುಖ್ಯ.

click me!