
ಉದ್ಯಮಿಗಳು ಐಷಾರಾಮಿ ಲೈಫ್‌ಸ್ಟೈಲ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಸುಸಜ್ಜಿತ ಬಂಗಲೆ ಆವರಣೆ, ಕೋಟಿ ಕೋಟಿ ವ್ಯಯಿಸಿದ ಇಂಟೀರಿಯರ್, ರೂಮಗಳು, ಫರ್ನೀಚರ್‌ಗಳು ಎಲ್ಲರ ಗಮನ ಸೆಳೆಯುವಂತೆ ಇರುತ್ತದೆ. ಸಾಲದ್ದಕ್ಕೆ ಐಷಾರಾಮಿ ವಾಹನಗಳು, ಪಾರ್ಟಿಗಳು ಸಹ ಎಲ್ಲರನ್ನು ದಂಗುಗೊಳಿಸುತ್ತವೆ. ಹಾಗೆಯೇ ಇಲ್ಲೊಂದು ವೈಭವೋಪೇತ ಅರಮನೆಯಿದೆ. 124771 ಚದರ ಅಡಿ ವಿಸ್ತಾರದಲ್ಲಿರುವ ಈ ಬಂಗಲೆ ಎಲ್ಲರ ಕಣ್ಮನ ಸೆಳೆಯುತ್ತದೆ. ಬರೋಬ್ಬರಿ 4000 ಕೋಟಿ ರೂ. ಬೆಲೆಬಾಳುವ ಈ ಮನೆಯಲ್ಲಿ 400 ಬೆಡ್‌ರೂಮ್ ಇದೆ. ಆದರೆ ಇಷ್ಟು ದೊಡ್ಡ ಬಂಗಲೆ ದೇಶದ ಹೆಸರಾಂತ ಉದ್ಯಮಿಗಳದ್ದಲ್ಲ. ಮತ್ಯಾರದ್ದು.
ಹೀಗೆ ಕೋಟಿ ಕೋಟಿ ಬೆಲೆ ಬಾಳುವ ಬಂಗಲೆ (Luxurious villa) ಅಂಬಾನಿ, ಟಾಟಾ ಕುಟುಂಬದ್ದು ಅಂತ ನೀವಂದುಕೊಂಡಿದ್ರೆ ತಪ್ಪು. ಯಾಕಂದ್ರೆ ಇದು ಗ್ವಾಲಿಯರ್‌ನ ಯುವರಾಜ್ ಮಹಾನಾರಾಯಣ ಸಿಂಧಿಯಾ ಅವರದ್ದು. ಕೇಂದ್ರ ನಾಗರಿಕ ವಿಮಾನಯಾನ ಸಚಿವ, ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರನ ಬಂಗಲೆಯಿದು. ಮಹಾನಾರಾಯಣ ಸಿಂಧಿಯಾರನ್ನು ಸ್ನೇಹಿತರು (Friends) ಮತ್ತು ಕುಟುಂಬದವರು ಆರ್ಯಮಾನ್ ಎಂದು ಕರೆಯುತ್ತಾರೆ. ಅವರು ಹೆಚ್ಚಾಗಿ ಗ್ವಾಲಿಯರ್ ಮತ್ತು ದೆಹಲಿ ನಗರಗಳ ಮಧ್ಯೆ ಓಡಾಡಿಕೊಂಡಿರುತ್ತಾರೆ. ಹೆಚ್ಚು ಯಶಸ್ವಿಯಾಗಿರುವ ಎರಡು ಸ್ಟಾರ್ಟ್ಅಪ್‌ಗಳನ್ನು ನಡೆಸುತ್ತಿದ್ದಾರೆ.
ಇಲ್ಲಿವೇ ನೋಡಿ ವಿಶ್ವದ 10 ಐಷಾರಾಮಿ ಮನೆಗಳು, ಅಂಬಾನಿಯ Antilia ಸ್ಥಾನವೆಷ್ಟು?
ಮಹಾನಾರಾಯಣ ಸಿಂಧಿಯಾ ಐಷಾರಾಮಿ ಜೀವನಶೈಲಿ
27 ವರ್ಷದ ಮಹಾನಾರಾಯಣ ಸಿಂಧಿಯಾ, ಯೇಲ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದಾರೆ (Graduate). ಮಹಾನಾರಾಯಣ ಸಿಂಧಿಯಾ 2019ರಲ್ಲಿ US ಕಾಲೇಜಿನಿಂದ ಉತ್ತೀರ್ಣರಾದರು. ಅವರು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನೊಂದಿಗೆ ಕೆಲಸ ಮಾಡಿದರು. ಸಂಗೀತ ಪ್ರಿಯರಾಗಿರುವ ಕಾರಣ ಸಿಂಬಲ್ ಎಂಬ ಸಂಗೀತ ಉತ್ಸವವನ್ನು ತೆರೆದರು. ಆಹಾರ, ಸಂಗೀತ, ಪರಂಪರೆ ಮತ್ತು ಸಂಸ್ಕೃತಿಯನ್ನು ಒಳಗೊಂಡಿರುವ ಪ್ರವಾಸ್ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ನಡೆಸಿದ್ದರು.
2021ರಲ್ಲಿ, ಪೂರ್ವಾಸ್ ಜೈ ವಿಲಾಸ್ ಅರಮನೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಅವರ ತಾಯಿ ಮಹಾರಾಣಿ ಪ್ರಿಯದರ್ಶಿನಿ ರಾಜೇ ಸಿಂಧಿಯಾ ಅವರು ಕಾರ್ಯಕ್ರಮಕ್ಕೆ ಪಾತ್ರೆಗಳನ್ನು ಒದಗಿಸಿದ್ದರು. ಮಹಾನಾರಾಯಣ ಸಿಂಧಿಯಾ ಆ ನಂತರ, ಮೈಮಂಡಿ ಎಂಬ ಕಂಪನಿಯನ್ನೂ ಆರಂಭಿಸಿದರು. ಕಂಪನಿಯು ಆನ್‌ಲೈನ್ ಸಂಗ್ರಾಹಕವಾಗಿದ್ದು ಅದು ಪುಶ್-ಕಾರ್ಟರ್ ಸಮುದಾಯದಿಂದ ಪಡೆದ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ವಿತರಿಸುತ್ತದೆ.
ಭೂಕಂಪ, ಬಾಂಬ್ ಅಟ್ಯಾಕ್‌ಗೂ ಜಗ್ಗಲ್ಲ..ಅಂಬಾನಿ ಮನೆ ಅಂಟಿಲಿಯಾದ ಡೋರ್ ಸೇಫ್ಟಿ ಹೇಗಿದೆ ನೋಡಿ
ಕಂಪೆನಿಯ ಆದಾಯ ತಿಂಗಳಿಗೆ 1 ಕೋಟಿ ರೂ.
ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸಲಾಗುತ್ತದೆ. ಟನ್ ಗಟ್ಟಲೆ ತರಕಾರಿ ಖರೀದಿಸಿ ಪ್ಯಾಕ್ ಮಾಡಿ ತಳ್ಳುವ ಕಾರ್ಟ್ ಮಾಲೀಕರಿಗೆ ಕಳುಹಿಸುತ್ತಾರೆ. ಈ ಉದ್ಯಮ ಜೈಪುರ, ನಾಗ್ಪುರ, ಗ್ವಾಲಿಯರ್ ಮತ್ತು ಆಗ್ರಾದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅವರ ಕಂಪನಿಯ ಆದಾಯ (Income) ಈಗ ತಿಂಗಳಿಗೆ 1 ಕೋಟಿ ರೂ. ವರ್ಷಾಂತ್ಯಕ್ಕೆ ತಿಂಗಳಿಗೆ 5 ಕೋಟಿ ಆದಾಯ ಗಳಿಸುವ ಗುರಿ ಹೊಂದಲಾಗಿದೆ.
ಮಹಾನಾರಾಯಣ ಸಿಂಧಿಯಾ, 400 ಕೊಠಡಿಗಳನ್ನು ಹೊಂದಿರುವ ಅರಮನೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಇದರ ಅಂದಾಜು ಮೌಲ್ಯ ಸುಮಾರು 4,000 ಕೋಟಿ ರೂ. ಮನೆಯ ದರ್ಬಾರ್ ಕೊಠಡಿಯು ವಿಶ್ವದ ಅತಿದೊಡ್ಡ ಕಾರ್ಪೆಟ್ ಅನ್ನು ಹೊಂದಿದೆ. ಮಹಾನಾರಾಯಣ ಸಿಂಧಿಯಾ ಅವರು ರಾಜ್ಯದ ಕ್ರಿಕೆಟ್ ಮಂಡಳಿಯ ಸದಸ್ಯರೂ ಆಗಿದ್ದಾರೆ. ಅರಮನೆಯು ಗ್ವಾಲಿಯರ್‌ನಲ್ಲಿದೆ. ಇದು ಸಿಂಧಿಯಾ ಕುಟುಂಬದ ನಿವಾಸವಾಗಿದೆ. ಇದು 124771 ಚದರ ಅಡಿ ವಿಸ್ತಾರವಾಗಿದೆ. ಮೂರು ಮಹಡಿಗಳನ್ನು ಹೊಂದಿದೆ.
ಅವರ ಚುನಾವಣಾ ಅಫಿಡವಿಟ್ ಪ್ರಕಾರ, ಜ್ಯೋತಿರಾದಿತ್ಯ ಸಿಂಧಿಯಾ ಅವರ ನಿವ್ವಳ ಮೌಲ್ಯ 379 ಕೋಟಿ ರೂ. ಜೈ ವಿಲಾಸ್ ಮಹಲ್‌ನ್ನು ಜಯಜಿರಾವ್ ಸಿಂಧಿಯಾ ಅವರು 1874 ರಲ್ಲಿ ನಿರ್ಮಿಸಿದರು. ಅವರು ಗ್ವಾಲಿಯರ್ ಆಡಳಿತಗಾರರಾಗಿದ್ದರು. ಇದು ಈಗ ಜಿವಾಜಿರಾವ್ ಸಿಂಧಿಯಾ ಮ್ಯೂಸಿಯಂ ಆಗಿ ಮಾರ್ಪಟ್ಟಿದೆ. ಇದನ್ನು ಸರ್ ಮೈಕೆಲ್ ಫಿಲೋಸ್ ವಿನ್ಯಾಸಗೊಳಿಸಿದ್ದಾರೆ. ಇದನ್ನು 1.1 ಕೋಟಿ ರೂ. ಉದ್ಯಾನದ ವಿಸ್ತೀರ್ಣ ಒಂದು ಚದರ ಮೈಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.