ಅನಂತ್‌ ಅಂಬಾನಿ ವಾಚ್‌ ನೋಡಿ ದಂಗಾದ ಮಾರ್ಕ್ ಜುಕರ್‌ಬರ್ಗ್ ದಂಪತಿ, ಯಪ್ಪಾ..ಇದರ ಬೆಲೆ 10 ಕೋಟಿನಾ!

By Vinutha Perla  |  First Published Mar 4, 2024, 2:28 PM IST

ಅಂಬಾನಿ ಕುಟುಂಬ ತನ್ನ ಲಕ್ಸುರಿಯಸ್ ಲೈಫ್‌ಸ್ಟೈಲ್‌ನಿಂದಾನೇ ಆಗಾಗ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಅನಂತ್‌ ಅಂಬಾನಿ, ಅಪರೂಪದ ವಾಚ್‌ ಮತ್ತು ಕಾರ್‌ಗಳ ಬಗ್ಗೆ ಹೆಚ್ಚಿನ ಕ್ರೇಜ್‌ ಹೊಂದಿದ್ದಾರೆ. ಹಾಗೆಯೇ ತಮ್ಮ ಮದುವೆಯಲ್ಲಿ ಅನಂತ್ ಅಂಬಾನಿ ಧರಿಸಿರೋ ಕಾಸ್ಟ್ಲೀ ವಾಚ್‌ ಮೆಟಾ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ದಂಪತಿಯ ಗಮನ ಸೆಳೆದಿದೆ.


ಅಂಬಾನಿ ಕುಟುಂಬ ತನ್ನ ಲಕ್ಸುರಿಯಸ್ ಲೈಫ್‌ಸ್ಟೈಲ್‌ನಿಂದಾನೇ ಆಗಾಗ ಸುದ್ದಿಯಲ್ಲಿರುತ್ತದೆ. ಕುಟುಂಬದ ಸದಸ್ಯರು ಧರಿಸೋ ಲಕ್ಷ, ಕೋಟಿ ಬೆಲೆ ಬಾಳುವ  ಆಸೆಸ್ಸರೀಸ್ ಕೂಡಾ ಎಲ್ಲರ ಹುಬ್ಬೇರುವಂತೆ ಮಾಡುತ್ತೆ. ಹಾಗೆಯೇ ಸದ್ಯ ಅನಂತ್‌ ಅಂಬಾನಿ ಕಾಸ್ಟ್ಲೀ ವಾಚ್ ಎಲ್ಲರ ಗಮನ ಸೆಳೀತಿದೆ. ರಿಲಯನ್ಸ್ ಸಮೂಹದ ಇಂಧನ ವಲಯವನ್ನು ಮುನ್ನಡೆಸುತ್ತಿರುವ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ, ದುಬಾರಿ ಅಭಿರುಚಿಯನ್ನು ಹೊಂದಿದ್ದಾರೆ. ಅಪರೂಪದ ವಾಚ್‌ಗಳ ಬಗ್ಗೆ ಮತ್ತು ಕಾರ್‌ಗಳ ಬಗ್ಗೆ ಅನಂತ್‌ ಅಂಬಾನಿ ಹೆಚ್ಚಿನ ಕ್ರೇಜ್‌ ಹೊಂದಿದ್ದಾರೆ. ಹಾಗೆಯೇ ತಮ್ಮ ಮದುವೆಯಲ್ಲಿ ಅನಂತ್ ಅಂಬಾನಿ ಧರಿಸಿರೋ ಕಾಸ್ಟ್ಲೀ ರಿಚರ್ಡ್ ಮಿಲ್ಲೆ ವಾಚ್‌ ಎಲ್ಲರ ಗಮನ ಸೆಳೆದಿದೆ.

ಜಗತ್ತೇ ನಿಬ್ಬೆರಗಾಗುವಂತೆ ಅಂಬಾನಿ ಕುಟುಂಬದ ಅದ್ಧೂರಿ ಸಮಾರಂಭಗಳು ನಡೆಯುತ್ತಿದೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ದೇಶ-ವಿದೇಶದಿಂದ ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕೀಯ ನಾಯಕರು ಆಗಮಿಸಿದ್ದಾರೆ. ಟೆಕ್​ ದೈತ್ಯ ಮೆಟಾ ಕಂಪನಿಯ ಸಿಇಒ ಮಾರ್ಕ್​ ಜುಕರ್​ಬರ್ಗ್ ಸಹ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

Tap to resize

Latest Videos

ಅಬ್ಬಬ್ಬಾ..ಚಿನ್ನವನ್ನೇ ಹೊದಿಸಿ ಮಾಡಿದ್ರಾ, ಕಣ್ಣು ಕೋರೈಸೋ ಗೋಲ್ಡನ್ ಲೆಹಂಗಾದಲ್ಲಿ ಮಿಂಚಿದ ಅಂಬಾನಿ ಹಿರಿ ಸೊಸೆ!

ಅನಂತ್ ಅಂಬಾನಿ ವಾಚ್‌ನ್ನು ಕುತೂಹಲದಿಂದ ನೋಡಿದ ಜುಕರ್‌ಬರ್ಗ್ ದಂಪತಿ
14.58 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಸಂಪತ್ತನ್ನು ಹೊಂದಿರುವ ಮಾರ್ಕ್ ಜುಕರ್‌ಬರ್ಗ್, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಬಿಲಿಯನೇರ್ ಇತ್ತೀಚೆಗೆ ಭಾರತದ ಜಾಮ್‌ನಗರದಲ್ಲಿ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಯವರ ವಿವಾಹಪೂರ್ವ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು. 

ಭವ್ಯ ಸಮಾರಂಭದಲ್ಲಿ, ಮೆಟಾ ಸಂಸ್ಥಾಪಕ ಮತ್ತು CEO ಭಾರತೀಯ ಸಂಸ್ಕೃತಿ ಮತ್ತು ವಂತರಾ ಪ್ರಾಣಿಗಳ ಪುನರ್ವಸತಿ ಸೌಲಭ್ಯವನ್ನು ಆನಂದಿಸಿದರು. ಸರಳ ಜೀವನಶೈಲಿಗೆ ಹೆಸರುವಾಸಿಯಾದ ಮಾರ್ಕ್ ಜುಕರ್‌ಬರ್ಗ್ ಸಾಮಾನ್ಯವಾಗಿ ಸರಳ ಟೀ ಶರ್ಟ್ ಮತ್ತು ಜೀನ್ಸ್ ಧರಿಸುತ್ತಾರೆ. ಆದರೆ, ಅನಂತ್ ಅಂಬಾನಿ ಅವರ ಮದುವೆಯ ಪೂರ್ವ ಸಮಾರಂಭದಲ್ಲಿ, ಜುಕರ್‌ಬರ್ಗ್ ಅವರು ಡಿಸೈನರ್ ಉಡುಪನ್ನು ಧರಿಸಿದ್ದರು. ಸದ್ಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪ್ರಿಸ್ಸಿಲ್ಲಾ ಚಾನ್ ಅನಂತ್ ಅಂಬಾನಿ ಅವರ ಐಷಾರಾಮಿ ಗಡಿಯಾರವನ್ನು ಹೊಗಳುವುದನ್ನು ಕಾಣಬಹುದು.

ಪಚ್ಚೆ ಹರಳಿನ ದೊಡ್ಡ ವಜ್ರದ ಹಾರ ಧರಿಸಿದ ನೀತಾ ಅಂಬಾನಿ, ಕೊಹಿನೂರ್ ವಜ್ರಕ್ಕಿಂತಲೂ ಬೆಲೆ ಬಾಳುತ್ತಾ?

ಬರೋಬ್ಬರಿ 10 ಕೋಟಿ ಬೆಲೆ ಬಾಳುತ್ತೆ ಅಂಬಾನಿ ಕಿರಿಮಗ ಧರಿಸಿದ ವಾಚ್‌
ವೀಡಿಯೊದಲ್ಲಿ, ಅನಂತ್‌ ಅಂಬಾನಿಯ ವಾಚ್‌ನ್ನು ಮಾರ್ಕ್‌ ಜುಕರ್‌ಬರ್ಗ್‌ ಪತ್ನಿ ಪ್ರಿಸ್ಸಿಲ್ಲಾ ಚಾನ್ ಗಮನಿಸಿ ಈ ಬಗ್ಗೆ ಮಾತನಾಡುತ್ತಾರೆ. 'ಈ ಗಡಿಯಾರ ಅದ್ಭುತವಾಗಿದೆ, ತುಂಬಾ ಕೂಲ್‌ ಲುಕ್ ನೀಡುತ್ತಿದೆ' ಎಂದು ಪ್ರಿಸ್ಸಿಲ್ಲಾ ಚಾನ್ ಅಂಬಾನಿಗೆ ಹೇಳುತ್ತಾರೆ. ಜುಕರ್‌ಬರ್ಗ್‌ ಮಾತನಾಡಿ, 'ಈ ವಾಚ್ ನೋಡಿದ ಬಳಿಕ ನನಗೆ ಗಡಿಯಾರ ಕೊಳ್ಳಬೇಕೆಂಬ ಮನಸಾಗುತ್ತಿದೆ' ಎನ್ನುತ್ತಾರೆ.

ಅನಂತ್ ಅಂಬಾನಿ ತಮ್ಮ ವಾಚ್ ರಿಚರ್ಡ್ ಮಿಲ್ಲೆಯದ್ದು ಎಂದು ಬಹಿರಂಗಪಡಿಸಿದರು. ರಿಚರ್ಡ್ ಮಿಲ್ಲೆ 80000 ಡಾಲರ್‌ಗಳಿಂದ 1 ಮಿಲಿಯನ್ ಡಾಲರ್‌ಗಳವರೆಗೆ ವೆಚ್ಚವಾಗಬಹುದಾದ ಅತಿ ದುಬಾರಿ ಐಷಾರಾಮಿ ಕೈಗಡಿಯಾರಗಳಿಗೆ ಹೆಸರುವಾಸಿಯಾಗಿದೆ. ಅಂದರೆ ಅನಂತ್ ಅಂಬಾನಿ ಧರಿಸಿರುವ ವಾಚ್‌ ಸುಮಾರು 10 ಕೋಟಿ ಬೆಲೆ ಬಾಳುತ್ತದೆ.

Mark Zuckerberg reaction on anant Ambanis watch 🔥😂 pic.twitter.com/A7F9p5VyxV

— Ajay 🇮🇳 (@coruptajxy)
click me!