ವಿಶ್ವಸುಂದರಿಯ ಸೌಂದರ್ಯ ರಹಸ್ಯಕ್ಕೆ ಕಾರಣವೇನು ಗೊತ್ತೆ ? ಸುಂದರಿಯಾಗಲು ಚಿಲ್ಲರ್ ಕೊಡೋ ಟಿಪ್ಸ್ ಇವು

Published : Nov 27, 2017, 02:05 PM ISTUpdated : Apr 11, 2018, 12:43 PM IST
ವಿಶ್ವಸುಂದರಿಯ ಸೌಂದರ್ಯ ರಹಸ್ಯಕ್ಕೆ ಕಾರಣವೇನು ಗೊತ್ತೆ ? ಸುಂದರಿಯಾಗಲು ಚಿಲ್ಲರ್ ಕೊಡೋ ಟಿಪ್ಸ್ ಇವು

ಸಾರಾಂಶ

ಸಮುದ್ರ ಅಂದ್ರೆ ಜೀವ ಬಿಡೋ ಹುಡುಗಿಯ ಅಲೆ ಅಲೆ ನಗುವಿಗೆ ಮನಸೋತವರು ಬಹಳ ಮಂದಿ. ನೀಳ ಕಾಲುಗಳ ವಿಶ್ವ ಸುಂದರಿಯ ಸೌಂದರ್ಯ ರಹಸ್ಯ ಇಲ್ಲಿದೆ.

ಯಾವ ಕಾರಣಕ್ಕೂ ಬೆಳಗಿನ ಉಪಹಾರ ತಪ್ಪಿಸಬೇಡಿ. ತಿನ್ನುವಾಗ ಚಿಕ್ಕ ಪ್ಲೇಟ್ ತಗೊಳ್ಳಿ. ಆಗ ಜಾಸ್ತಿ ತಿನ್ನೋದು ತಪ್ಪುತ್ತೆ.  ಸಕ್ಕರೆ ಜಾಸ್ತಿ ತಿನ್ಬೇಡಿ, ಅದರಲ್ಲೂ ರಿಫೈನ್ಡ್ ಸಕ್ಕರೆ ಬೇಡ್ವೇ ಬೇಡ. ಹೀಗಿರುತ್ತೆ ಡಯೆಟ್, ಫಿಟ್‌ನೆಸ್.

ಬೆಳ್ಳಂಬೆಳಗ್ಗೇ ಹಣ್ಣು ತಿನ್ನೋ ಖಯಾಲಿ. ಖಾಲಿ ಹೊಟ್ಟೆಗೆ ನಿಂಬೆ ಬೆರೆಸಿದ ಬಿಸಿನೀರು ಕುಡಿಯೋದನ್ನು ಕಷ್ಟವಾದ್ರೂ ರೂಢಿಸಿಕೊಂಡಿದ್ದಾರೆ. ಬೆಳಗ್ಗೆ ಓಟ್ ಮೀಲ್, ನಡುವೆ ಎಳನೀರು, ಮಧ್ಯಾಹ್ನ ಚಪಾತಿ, ತರಕಾರಿ, ಅನ್ನ, ಚಿಕನ್ ತಿಂತಾರೆ. ಬಾಳೆ ಹಣ್ಣು ಸ್ಮೂಧಿ ಜೊತೆ ಉಪ್ಪು ಹಾಕದ ನಟ್ಸ್ ಜಗಿಯೋದಿಷ್ಟ. ರಾತ್ರಿಯೂಟಕ್ಕೆ ಗ್ರಿಲ್ಡ್ ಚಿಕನ್ ಜೊತೆಗೆ ತರಕಾರಿ. ದಿನಚರಿಯಲ್ಲಿ ಯೋಗ ಇದ್ದೇ ಇರುತ್ತೆ. ಅಪರಾತ್ರಿಯಲ್ಲಿ ಎದ್ದು ಜಿಮ್‌ಗೆ ಹೋಗೋ ಕ್ರೇಜ್ ಇದೆ. ಉಳಿದಂತೆ ಪಿಲಾಟೆಸ್ ಮಾಡ್ತಾರೆ. ಟ್ವಿಸ್ಟಿಂಗ್, ಕಿಕ್ ಬಾಕ್ಸಿಂಗ್ ತಪ್ಪಿಸಲ್ಲ. ಪ್ಲಾಂಕ್ಸ್ ಎಕ್ಸರ್‌ಸೈಸ್ ಇವರ ಫೇವರೆಟ್.

ಹೈಟ್: 5 ಅಡಿ 9 ಇಂಚು ತೂಕ: 55 ಕೆಜಿ, ಸುತ್ತಳತೆ: 34-26-34

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು