ಅಬ್ಬಬ್ಬಾ..3 ಇಂಚು ಎತ್ತರವಾಗಲು ಭರ್ತಿ 60 ಲಕ್ಷ ರೂ. ಖರ್ಚು ಮಾಡಿದ ಭೂಪ !

By Suvarna NewsFirst Published Sep 22, 2022, 10:15 AM IST
Highlights

ಎತ್ತರವಾಗಿರಬೇಕು ಅಂತ ಹೆಚ್ಚಿನವರು ಬಯಸ್ತಾರೆ. ಹೀಗಾಗಿಯೇ ಹೈಟ್‌ ಹೆಚ್ಚಿಸಿಕೊಳ್ಳೋಕೆ ಒಂದಲ್ಲ ಒಂದು ರೀತಿಯಲ್ಲಿ ಕಸರತ್ತು ಮಾಡ್ತಾನೇ ಇರ್ತಾರೆ. ಎಕ್ಸರ್‌ಸೈಸ್, ಪೌಷ್ಟಿಕಾಂಶವುಳ್ಳ ಆಹಾರವನ್ನೆಲ್ಲಾ ಸೇವಿಸ್ತಾರೆ. ಆದ್ರೆ ಇಲ್ಲೊಬ್ಬಾತ ಎತ್ತರ ಆಗೋಕೆ ಅಂತ ಮಾಡಿರೋ ಕೆಲ್ಸ ನೋಡಿದ್ರೆ ನೀವು ದಂಗಾಗ್ತೀರಾ ? ಅದೇನು ಅನ್ನೋ ಮಾಹಿತಿ ಇಲ್ಲಿದೆ. 

ಹೈಟ್ ಆಗಿರುವುದು ಪರ್ಸನಾಲಿಟಿಯನ್ನು ಇನ್ನಷ್ಟು ಸುಂದರವಾಗಿ ತೋರಿಸುತ್ತದೆ. ಹೀಗಾಗಿಯೇ ಹೆಚ್ಚಿನವರು ಹೈಟ್ ಆಗಿರಬೇಕೆಂದು ಬಯಸುತ್ತಾರೆ. ಎತ್ತರದ 60-80% ರಷ್ಟು ಜೆನೆಟಿಕ್ಸ್‌ನಿಂದ ನಿರ್ಧರಿಸಲ್ಪಟ್ಟರೆ, ಉಳಿದ 20-40% ರಷ್ಟು ಪೋಷಣೆ ಮತ್ತು ಜೀವನಶೈಲಿ ಅಂಶಗಳಿಂದಾಗಿದೆ. ಉತ್ತಮ ಪೌಷ್ಠಿಕಾಂಶ ಅಥವಾ ವಿಶೇಷ ವ್ಯಾಯಾಮವು ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ. ಸುಧಾರಿತ ಪೌಷ್ಠಿಕಾಂಶದ ಸೇವನೆಯು ಈ ಬದಲಾವಣೆಗೆ ಕಾರಣವೆಂದು ನಂಬಲಾಗಿದೆ. ಉದ್ದನೆಯ ಎಲುಬುಗಳಿಂದಾಗಿ ಎತ್ತರವು ಹೆಚ್ಚಾಗುತ್ತದೆ, ಇದು ಪ್ರೌಢಾವಸ್ಥೆಯ ಕೊನೆಯಲ್ಲಿ ನಿಲ್ಲುತ್ತದೆ. 18ರ ನಂತರ ಭಂಗಿಯನ್ನು ಸರಿಪಡಿಸಲು ಮತ್ತು ಎತ್ತರವನ್ನು ಹೆಚ್ಚಿಸಲು ವ್ಯಾಯಾಮವು ಒಂದು ಉತ್ತಮ ವಿಧಾನ ಎಂದು ಹೇಳುತ್ತಾರೆ. ಆದರೆ ಇದು ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬುದು ತಿಳಿದುಬಂದಿಲ್ಲ. ಹೀಗಾಗಿಯೇ ಹೆಚ್ಚಿನವರು ಇತರ ಮಾರ್ಗಗಳ ಮೊರೆ ಹೋಗುತ್ತಾರೆ. 

ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಉದ್ದ (Height)ವಾಗಲು ಶಸ್ತ್ರಚಿಕಿತ್ಸೆಯ (Operation) ಮೊರೆ ಹೋಗಿದ್ದಾನೆ. ಅದು ಅಂತಿಂಥಾ ಆಪರೇಷನ್ ಅಲ್ಲ, ಭರ್ತಿ 60 ಲಕ್ಷ ಪಾವತಿಸಿ ಮಾಡಿರೋ ಸರ್ಜರಿ. ತನ್ನ ಎತ್ತರವನ್ನು ಹೆಚ್ಚಿಸಲು ಶಸ್ತ್ರಚಿಕಿತ್ಸಾ ವಿಧಾನಕ್ಕಾಗಿ ಹಣವನ್ನು ಎರವಲು ಪಡೆದ ವ್ಯಕ್ತಿ ಈಗ ಮುಂದಿನ ಐದು ವರ್ಷಗಳವರೆಗೆ ಮಾಸಿಕ ಸುಮಾರು ಒಂದು ಲಕ್ಷ ಮರುಪಾವತಿ (Repay)ಯನ್ನು ಎದುರಿಸುತ್ತಿದ್ದಾನೆ. ಜಾನ್ ಲವ್‌ಡೇಲ್ ಅವರು ತಿಂಗಳ ಕಾಲದ ಕಾಲನ್ನು ಉದ್ದ ಮಾಡುವ ಶಸ್ತ್ರಚಿಕಿತ್ಸೆಗಾಗಿ ಹಣವನ್ನು ಎರವಲು ಪಡೆದರು. ವರದಿಯ ಪ್ರಕಾರ, ಕಾರ್ಯವಿಧಾನಕ್ಕಾಗಿ ಅವರ ಸಾಲವು ಆನ್‌ಲೈನ್ ಬ್ಯಾಂಕ್ SoFiನಿಂದ ದೊರಕಿದೆ. 

ಹೈಟ್ ಇರೋರು v/s ಕುಳ್ಳಗೆ ಇರೋರು, ಆರೋಗ್ಯ ಸಮಸ್ಯೆ ಯಾರಿಗೆ ಹೆಚ್ಚು ?

ಶಸ್ತ್ರಚಿಕಿತ್ಸೆಯ ಮೂಲಕ ಎತ್ತರವನ್ನು ಪಡೆಯುವುದು ಹೇಗೆ ?
ಇಷ್ಟೆಲ್ಲಾ ದುಡ್ಡು ವೆಚ್ಚ ಮಾಡಿ ಯಾಕಾಗಿ ಎತ್ತರವನ್ನು ಹೆಚ್ಚಿಸಬೇಕು ಎಂಬುದನ್ನು ಪ್ರಶ್ನಿಸಿದಾಗ ಜಾನ್ 'ಎತ್ತರವಾಗಿರುವ ಜನರು ಆಕರ್ಷಕವಾಗಿರುತ್ತಾರೆ. ಜಗತ್ತು ಅವರಿಗೆ ತಲೆ ಬಾಗುತ್ತದೆ. ನೀವು ಎತ್ತರವಾಗಿದ್ದಾಗ ಜನರು ನಿಮ್ಮನ್ನು ವಿಭಿನ್ನವಾಗಿ ನೋಡುತ್ತಾರೆ. ಹೀಗಾಗಿ ನಾನು ಜಿಮ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದೇನೆ. ಅದರಲ್ಲಿ ಹೆಚ್ಚು ಫಲಿತಾಂಶ ಸಿಗದ ಕಾರಣ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದು, ಹೈಟ್ ಆಗಿರಬೇಕೆಂದು ಬಯಸುತ್ತೇನೆ' ಎಂದಿದ್ದಾರೆ. ಸ್ಪೆಷಲ್ ಸರ್ಜರಿಗಾಗಿ ಬರೋಬ್ಬರಿ 60 ಲಕ್ಷ ರೂ. ವ್ಯಯಿಸಿರುವ ಜಾನ್‌ ಮುಂದಿನ ಐದು ವರ್ಷಗಳವರೆಗೆ ಪ್ರತಿ ತಿಂಗಳು ಲಕ್ಷಗಟ್ಟಲೆ ಹಣವನ್ನು ಕಂತುಗಳಾಗಿ ಪಾವತಿಸಬೇಕಾಗುತ್ತದೆ.

ಜಾನ್‌ ಫೇಸ್‌ಬುಕ್‌ನಲ್ಲಿ ಎತ್ತರ ಹೆಚ್ಚಿಸುವ ಆಪರೇಷನ್ ಬಗ್ಗೆ ತಿಳಿದುಕೊಂಡರಂತೆ. ಲಿಂಬ್‌ಪ್ಲಾಸ್ಟ್‌ಎಕ್ಸ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕ ಡಾ.ಕೆವಿನ್ ದೇಬಿಪರ್ಷದ್ ಅವರು ಶಸ್ತ್ರಚಿಕಿತ್ಸೆ ನಡೆಸುತ್ತಿರುವುದನ್ನು ಜಾನ್ ನೋಡಿದರು. ವರದಿಗಳ ಪ್ರಕಾರ, ದೇಬಿಪ್ರಸಾದ್ USನಲ್ಲಿ ಕಾಸ್ಮೆಟಿಕ್ ಲೆಗ್ ಲೆಂಗ್ನೆನಿಂಗ್ ಮಾಡುವ ಬೆರಳೆಣಿಕೆಯ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾಗಿದ್ದರೆ.

ಹುಡುಗಿಯರಿಗೆ ಹೆಚ್ಚು ಹೈಟ್ ಇರೋ ಹುಡುಗರು ಇಷ್ಟವಾಗೋದು ಯಾಕೆ ?

ಹೈಟ್ ಆಗುವ ಶಸ್ತ್ರಚಿಕಿತ್ಸೆಯನ್ನು ಹೇಗೆ ಮಾಡಲಾಗುತ್ತದೆ ?
ವೈದ್ಯರು ರೋಗಿಯ ಎಲುಬು ಅಥವಾ ತೊಡೆಯ ಮೂಳೆಗಳನ್ನು (Bones) ಸಪರೇಟ್ ಮಾಡಬೇಕು. ನಂತರ ಅವುಗಳನ್ನು ಮತ್ತೆ ಹೊಂದಾಣಿಕೆ ಮಾಡಬಹುದಾದ ಲೋಹವನ್ನು ಅಟ್ಯಾಚ್ ಮಾಡಿ ಸೇರಿಸಬೇಕು. ಇದು ವ್ಯಕ್ತಿಯ ಎತ್ತರವನ್ನು ವಿಸ್ತರಿಸಲು ನಿಧಾನವಾಗಿ ಚಾಚುವ ಸಾಧನವನ್ನು ಸೇರಿಸಲು ಕಾಲಿನ ಮೂಳೆಗಳನ್ನು ಕತ್ತರಿಸುವ ಆಯ್ಕೆಯ ವಿಧಾನವಾಗಿದೆ ಎಂದು ಡಾ.ದೇಬಿಪರ್ಶದ್ ವಿವರಿಸಿದ್ದಾರೆ. ಮೂಳೆಗಳು ನಿಧಾನವಾಗಿ ಉದ್ದವಾಗಲು ಪ್ರಾರಂಭವಾಗುವ ಮೊದಲು ಇದು ತಿಂಗಳುಗಳನ್ನು (Months) ತೆಗೆದುಕೊಳ್ಳಬಹುದು. ಕಳೆದ ವರ್ಷ, ಟೆಕ್ಸಾಸ್‌ನ ಡಲ್ಲಾಸ್‌ನ ಅಲ್ಫೊನ್ಸೊ ಫ್ಲೋರ್ಸ್‌ನಲ್ಲಿ ಡಾ.ಕೆವಿನ್ ದೇಬಿಪರ್ಶದ್ ಈ ವಿಧಾನವನ್ನು ನಿರ್ವಹಿಸಿದರು. ಅವರು 5 ಅಡಿ, 11-ಇಂಚಿನಿಂದ 6 ಅಡಿ, 1-ಇಂಚಿನವರೆಗೆ ಬೆಳೆಯಲು ಅಂಗವನ್ನು ಉದ್ದಗೊಳಿಸುವ ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ಬಗ್ಗೆ ಅವರು ತಮ್ಮ ಅನುಭವವನ್ನು(Experience) ಸಹ ಹಂಚಿಕೊಂಡಿದ್ದಾರೆ.

'ನನಗೆ ಚಿಕ್ಕಂದಿನಲ್ಲೂ ಹೆಚ್ಚು ಉದ್ದವಾಗಬೇಕೆಂಬ ಆಸೆಯಿತ್ತು. ಹೀಗಾಗಿ ನಾನು ಹೆಚ್ಚು ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಿದ್ದೆ. ನನ್ನ ಅಥ್ಲೆಟಿಕ್ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಯತ್ನಿಸಿದೆ. ಸಾಧ್ಯವಾದಷ್ಟು ಚಲನೆಯ ವ್ಯಾಪ್ತಿ, ನಾನು ಎಲ್ಲವನ್ನೂ ಉಳಿಸಿಕೊಂಡಿದ್ದೇನೆ ಏಕೆಂದರೆ ನಾನು ಮೊದಲಿನಂತೆಯೇ ಸ್ಕ್ವಾಟ್ ಮಾಡಲು ಸಾಧ್ಯವಾಗುತ್ತದೆ ಎಂದು ಫ್ಲೋರ್ಸ್ ಹೇಳಿದರು. ಅದೇನೆ ಇರ್ಲಿ ಜಸ್ಟ್ ಹೈಟ್ ಆಗ್ಬೇಕು ಅಂತ ವ್ಯಕ್ತಿ ಇಷ್ಟೆಲ್ಲಾ ಖರ್ಚು ಮಾಡಿರೋದು ನೋಡಿದ್ರೆ ಅಬ್ಬಬ್ಬಾ ಅಂತ ಅನ್ಸೋದಂತೂ ಸುಳ್ಳಲ್ಲ. 

click me!