
ಮನೆ ಸುಗಂಧಭರಿತವಾಗಿದ್ದರೆ ಮನ ಪ್ರಫುಲ್ಲವಾಗಿರುತ್ತದೆ. ಮನ ಪ್ರಫುಲ್ಲವಾಗಿದ್ದರೆ, ಯಾವುದೇ ಕೆಲಸ ಮಾಡಲೂ ಉಲ್ಲಾಸವಿರುತ್ತದೆ. ಒಬ್ಬರ ಉಲ್ಲಾಸ ಚಮತ್ಕಾರವೆಂಬಂತೆ ಅವರ ಸುತ್ತಮುತ್ತವಿರುವ ಮಂದಿಯಲ್ಲೂ ಸಂತೋಷ ತರುತ್ತದೆ. ಹೀಗಾಗಿ, ಮನೆಯನ್ನು ಪರಿಮಳಯುಕ್ತವಾಗಿಟ್ಟುಕೊಳ್ಳಿ ಎನ್ನುತ್ತಿದೆ ಕೊಲಂಬಿಯಾ ವಿಶ್ವವಿದ್ಯಾಲಯದ ಅಧ್ಯಯನ ವರದಿಯೊಂದು.
ನಾವು ಪ್ರತಿಯೊಬ್ಬರೂ ದಿನಕ್ಕೆ ಏನಿಲ್ಲವೆಂದರೂ 2೦,೦೦೦ ಬಾರಿ ಉಸಿರಾಡುತ್ತೇವೆ. ಆ ಉಸಿರಿಗೆ ಸುಗಂಧದ ಲೇಪ ಹಚ್ಚಿದಲ್ಲಿ ಮನಕೆ ಅದೆಷ್ಟು ಮುದ ನೀಡುತ್ತದೆಯಲ್ಲವೇ? ಅದೇ ಕಾರಣಕ್ಕೆ ದೇವಸ್ಥಾನಗಳಲ್ಲಿ, ಹೊಟೇಲ್‌ಗಳಲ್ಲಿ ಸುವಾಸನೆ ಹೊಮ್ಮಿಸಲಾಗುತ್ತದೆ. ಹಾಗಾದರೆ ಮನೆಯಲ್ಲಿ ಸುವಾಸನೆ ಹೊಮ್ಮಿದ್ದರೆ ಆಗುವ ಲಾಭಗಳೇನು ನೋಡೋಣ ಬನ್ನಿ,
ಮನೆ ಬಾಗಿಲಲ್ಲಿದ್ದರೆ ನಾಣ್ಯ, ಬ್ಯಾಡ್‌ಲಕ್ ನಗಣ್ಯ
ಒಳ್ಳೆಯ ಮೂಡ್
ನೀವು ಗಮನಿಸಿರಬಹುದು, ಸುವಾಸನೆ, ದುರ್ವಾಸನೆ ಎಲ್ಲದರೊಂದಿಗೆ ನಮ್ಮ ನೆನಪುಗಳು ಬೆರೆತು ಹೋಗಿರುತ್ತವೆ. ಪರಿಮಳವು ಪರಿಚಿತವಾದುದಾದರೆ ಅದಕ್ಕೆ ಸಂಬಂಧಿಸಿದ ನೆನಪುಗಳು ಛಂಗನೆದ್ದು ಕೂರುತ್ತವೆ. ಹೊಸ ಪರಿಮಳವಾದರೆ ಹೊಸ ನೆನಪುಗಳಿಗೆ ದಾರಿ ಮಾಡಿಕೊಡುತ್ತದೆ. ಹೀಗಾಗಿ, ಹೊರಗಿನಿಂದ ಮನೆಗೆ ಬಂದಾಗ ಮನೆ ಘಮ್ಮೆನ್ನುತ್ತಿದ್ದರೆ, ನಿಮ್ಮ ಒತ್ತಡ ಹಾಗೂ ಆತಂಕಗಳು ಬದಿಗೋಡುತ್ತವೆ. ಇಷ್ಟಕ್ಕೂ ಅರೋಮಾಥೆರಪಿ ಎನ್ನುವುದು ಕೂಡಾ ವಿಜ್ಞಾನವೇ ಅಲ್ಲವೇ?.
ಏಕಾಗ್ರತೆ ಹೆಚ್ಚಿಸುತ್ತದೆ
ನಿಂಬೆಹಣ್ಣಿನಂತೆ ಸುಗಂಧ ಬೀರುವ ಕಛೇರಿಗಳಲ್ಲಿ ಉತ್ಪಾದಕತೆ ಶೇ.54ರಷ್ಟು ಹೆಚ್ಚಿರುತ್ತದೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ನಿಮ್ಮ ಮೂಡ್ ಕರಾಬಾಗಿದ್ದಾಗ, ಅದನ್ನು ತಿಳಿಗೊಳಿಸಿ ಶಾಂತತೆ ನೀಡುವ ಶಕ್ತಿ ನಿಂಬೆಯ ಪರಿಮಳಕ್ಕಿದೆ. ಹೀಗಾಗಿ, ನೀವು ಕೆಲಸದ ಮೇಲೆ ಹೆಚ್ಚಿನ ಗಮನ ಹರಿಸಬಹುದು. ಮಕ್ಕಳ ಅಧ್ಯಯನ ಕೊಠಡಿ ಪರಿಮಳ ಬೀರುತ್ತಿದ್ದರೆ, ಅವರ ಓದು ಸರಾಗವಾಗಿ ಸಾಗುತ್ತದೆ.
ಆ್ಯಂಟಿ ಬ್ಯಾಕ್ಟೀರಿಯಾ ಗುಣ
ಕೆಲವು ಸುಗಂಧ ತೈಲಗಳಲ್ಲಿ, ಏರ್ ಫ್ರೆಶ್‌ನರ್‌ಗಳಲ್ಲಿ ಬಳಸುವ ವಸ್ತುಗಳು ಕ್ರಿಮಿನಿರೋಧಕವಾಗಿದ್ದು, ರೋಗಾಣುಗಳನ್ನು ದೂರವಿಡುವ ಕೆಲಸ ಮಾಡುತ್ತವೆ. ಇದನ್ನು ಉಸಿರಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಹೀಗೆ ಮನೆ ಮಂದಿಯು ಆರೋಗ್ಯ ಕಾಪಾಡಿಕೊಳ್ಳಬಹುದು. ಜೊತೆಗೆ, ಕರ್ಪೂರ, ಧೂಪ, ಕೆಲವು ಊದುಬತ್ತಿಗಳ ಪರಿಮಳ ಹಾಗೂ ಹೊಗೆ ಸೊಳ್ಳೆ, ನೊಣಗಳನ್ನೂ ಮನೆಯಿಂದ ದೂರವಿಡುತ್ತದೆ.
ದಾಂಪತ್ಯ ವಿರಸ ಪರಿಹಾರಕ್ಕೆ ಬೆಡ್‌ರೂಂ ವಾಸ್ತು...
ಕೋಣೆಗೆ ರೊಮ್ಯಾಂಟಿಕ್ ಲೇಪ
ಇಷ್ಟಕ್ಕೂ ನಿಮಗೆ ಕೆಮಿಕಲ್ ಗಳ ಭಯವಿದ್ದಲ್ಲಿ, ಮಲ್ಲಿಗೆ, ಗುಲಾಬಿ, ನಿಂಬೆಹಣ್ಣು, ಕರ್ಪೂರದಂಥ ಪರಿಮಳಯುಕ್ತ ಸರಕುಗಳನ್ನು ಕೋಣೆಯಲ್ಲಿಡಬಹುದು. ಹೂವುಗಳು ಕೋಣೆಯ ಅಂದವನ್ನೂ ಹೆಚ್ಚಿಸಿ, ರೊಮ್ಯಾಂಟಿಕ್ ವಾತಾವರಣವನ್ನೂ ಹುಟ್ಟುಹಾಕುತ್ತವೆ. ಅಲ್ಲದೆ ಇವುಗಳ ರಿಲ್ಯಾಕ್ಸಿಂಗ್ ಗುಣದಿಂದಾಗಿ ಒಳ್ಳೆಯ ನಿದ್ದೆಯನ್ನೂ ತರುತ್ತವೆ. ಸುಗಂಧಕ್ಕಾಗಿ ಲವಂಗ, ಲ್ಯಾವೆಂಡರ್, ಲೆಮನ್ ಗ್ರಾಸ್, ಪುದೀನಾ, ರೋಸ್ ತೈಲಗಳನ್ನು ಆತಂಕವಿಲ್ಲದೆ ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.