ಹನುಮಂತನ ಅಜ್ಞಾನ ಕರಗಿದ್ದು ಹೀಗೆ..

Published : Jul 16, 2018, 04:19 PM IST
ಹನುಮಂತನ ಅಜ್ಞಾನ ಕರಗಿದ್ದು ಹೀಗೆ..

ಸಾರಾಂಶ

ಸೀತಾಪಹರಣದಿಂದ ಕಂಗೆಟ್ಟು ರಾತ್ರಿ ಹಗಲೂ ಸೀತೆಗಾಗಿ ಹಂಬಲಿಸಿ ಅಳುತ್ತಿದ್ದ ರಾಮನನ್ನು ಕಂಡು ಹನುಮಂತನಿಗೆ ಒಳಗೊಳಗೇ ನಗು ಬರುತ್ತಿತ್ತು. ಈ ವಿವಾಹಿತರ, ಗೃಹಸ್ಥರ ಸ್ಥಿತಿ ಇಷ್ಟೇ ಎಂದುಕೊಳ್ಳುತ್ತಿದ್ದ. ಆದರೆ ಹನುಮನ ಅಜ್ಞಾನವನ್ನು ನೀಗಿಸಿದ್ದು ಲಂಕಾನುಭವ. ಸೀತೆಗಾಗಿ ಲಂಕೆಯಿಡೀಸುತ್ತಿದ ಹನುಮಂತ, ರಾವಣನ ಅಂತಃಪುರ ಪ್ರವೇಶಿಸುತ್ತಾನೆ.

ಅಲ್ಲೊಬ್ಬಳು ಸ್ಫುರದ್ರೂಪಿ ಹೆಣ್ಣು ರಾವಣನೊಂದಿಗೆ ಮಲಗಿರುವುದು ಕಂಡು ಆಕೆಯೇ ಸೀತೆ ಇರಬೇಕು. ರಾಮನಿಗೇ ದ್ರೋಹ ಬಗೆದಳಲ್ಲಾ ಅಂತನಿಸಿ ಆಕೆಯನ್ನು ಕೊಲ್ಲುವ ಯೋಚನೆ ಬರುತ್ತದೆ. ಕ್ಷಣವಷ್ಟೇ. ಆತನ ಅಂತರಾತ್ಮ ಸೀತೆ ಅವಳಲ್ಲ ಎನ್ನುತ್ತದೆ. ಅಂತಃಪುರದಿಂದ ಹೊರಬರುವ ಹನುಮ, ಉದ್ಯಾನವನಗಳನ್ನೆಲ್ಲ ಸುತ್ತಿ ಅಶೋಕವನಕ್ಕೆ ಬರುತ್ತಾನೆ. ರಾಮ ರಾಮ’ ಎಂಬ ನಾಮಸ್ಮರಣೆ, ರಾಮ ವಿರೋಧಿ ನೆಲದಲ್ಲಿ ರಾಮಸ್ಮರಣೆ ಮಾಡುವವರು ಯಾರಿರಬಹುದು ಎಂದು ಅಚ್ಚರಿಪಡುತ್ತ ಬಂದವನಿಗೆ ಬೆಳಕಿನ ಪುಂಜದಂಥ ಕೃಶಕಾಯ ಹೆಣ್ಣು ಅಶೋಕ ಮರದಡಿ ಶೋಕಿಸುತ್ತ ಕುಳಿತಿರುವುದು ಕಾಣುತ್ತದೆ. ಆಕೆಯೇ ಸೀತೆ ಎನ್ನುತ್ತದೆ ಅಂತರಂಗ. ಅವಳ ದಿವ್ಯತೆಯನ್ನು ಕಂಡ ಹನುಮನಿಗೆ ರಾಮ ಸೀತೆಗಾಗಿ ಅಷ್ಟೊಂದು ಹಂಬಲಿಸುವುದು ಯಾಕೆ ಎಂದು ತಿಳಿಯುತ್ತದೆ.

ಮುಂದೆ ರಾಮ ಪಟ್ಟಾಭಿಷೇಕವೆಲ್ಲ ಆದ ಬಳಿಕ ಈ ಘಟನೆಯನ್ನು ಮೆಲುಕು ಹಾಕುತ್ತಾ ಹನುಮ ರಾಮನಿಗೆ ಹೇಳುತ್ತಾನೆ, ‘ಪ್ರಭೂ, ಅಲ್ಲಿಯವರೆಗೆ ನಿನ್ನ ವಿರಹವನ್ನು ಕಂಡು ನಗುತ್ತಿದ್ದವನು ನಾನು. ಆದರೆ ಆ ದೇವಿಯನ್ನು ಕಂಡಾಗ ಅನಿಸಿದ್ದು; ಅಂಥಾ ದಿವ್ಯತೇಜಃದ ಮಡದಿಯನ್ನು ಅಗಲಿ ಪ್ರಾಣ ಬಿಡದೇ ದೇಹವನ್ನು ಉಳಿಸಿಕೊಂಡಿರುವೆಲ್ಲ. ಅದು ದೊಡ್ಡದು..’

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫ್ಯಾಷನ್ ಕ್ವೀನ್ ದೀಪಿಕಾ ಪಡುಕೋಣೆಯ 5 ದುಬಾರಿ ಸೀರೆಗಳು.. ಬೆಲೆ ಕೇಳಿದ್ರೆ ಬಾಯ್ಮೇಲೆ ಬೆರಳಿಡ್ತೀರಾ!
ಕಚೇರಿಗಳಿಗೆ ಬಿಗಿಯುಡುಪು, ಸ್ಲೀವ್​ಲೆಸ್​ ಡ್ರೆಸ್​, ಹರಿದ ಜೀನ್ಸ್​ ನಿಷೇಧ: ಸರ್ಕಾರದ ಆದೇಶದಲ್ಲಿ ಇನ್ನೂ ಏನೇನಿವೆ?