25 ವರ್ಷದಿಂದ ಬೆಳೆಸಿದ ಹೂ ತೋಟವನ್ನು ತೆಗೆದು ಹಾಕಲು ಕೌನ್ಸಿಲ್ ಆದೇಶ, 89ರ ಅಜ್ಜಿ ಕಂಗಾಲು

Published : Sep 01, 2026, 04:59 PM IST
25 Years of Gardening at Risk

ಸಾರಾಂಶ

ರಸ್ತೆ ಬದಿಯ ಅಂದಕ್ಕಾಗಿ 89ರ ಹರೆಯದ ಅಜ್ಜಿ ಕಳೆದ 25 ವರ್ಷಗಳಿಂದ ಹೂವಿನ ತೋಟ, ಟೊಮೋಟೊ ಹಿಡ ಸೇರಿದಂತೆ ಹಲವು ಗಿಡ ನೆಟ್ಟು ಬೆಳೆಸಿದ್ದರು. ಇದೀಗ ಮುನ್ಸಿಪಲ್ ಕೌನ್ಸಿಲ್ ತೋಟ ಸಂಪೂರ್ಣ ತೆಗೆದು ಹಾಕಲು ಆದೇಶ ನೀಡಿದೆ.

ಲಂಡನ್ (ಸೆ.01) ಹೂವು, ತರಕಾರಿ, ಗಿಡಮೂಲಿಕೆ ಸೇರಿದಂತೆ ಹಲವು ಗಿಡಗಳನ್ನು ನೆಟ್ಟು ಬೆಳೆಸಿ ಆರೈಕೆ ಮಾಡಿದ್ದಾರೆ. 89 ವರ್ಷದ ಅಜ್ಜಿ ಕಳೆದ 25 ವರ್ಷಗಳಿಂದ ಸತತ ಪ್ರಯತ್ನದ ಮೂಲಕ ಸುಂದರ ತೋಟ ಬೆಳೆಸಿದ್ದರು. ಅಜ್ಜಿಯ ಮನೆಯ ಪಕ್ಕದ ರಸ್ತೆಗಳಲ್ಲಿ ಈ ಸುಂದರ ತೋಟ ಬೆಳೆದು ನಿಂತಿತ್ತು. ಈ ರಸ್ತೆಯಲ್ಲಿ ಓಡಾಡುವ ಮಂದಿಗೆ ಆಹ್ಲಾದಕರ ಅನುಭವವಾಗುತ್ತಿತ್ತು. ಆದರೆ ಮುನ್ಸಿಪಲ್ ಕೌನ್ಸಿಲ್ ಇದೀಗ ಮಹತ್ವದ ಆದೇಶ ನೀಡಿದೆ. ಇಡೀ ತೋಟವನ್ನು ತೆಗದು ಹಾಕುವಂತೆ ಆದೇಶ ನೀಡಿದೆ.

ಲಂಡನ್‌ನ ಸೇಂಟ್ ಜಾನ್ಸ್ ‌ವುಡ್ ನಿವಾಸಿ ಕ್ಯಾಥರಿನ್ ಹಾಸ್ಕಿನ್ಸ್ ಇದೀಗ ಕಂಗಾಲಾಗಿದ್ದಾರೆ. ಕ್ಯಾಥರಿನ್ ತಮ್ಮ ಮನೆ ಮುಂದೆ ಸುಂದರ ತೋಟ ಮಾಡಿದ್ದಾರೆ. ಮನೆ ಮುಂಭಾಗದಲ್ಲೇ ರಸ್ತೆ ಹಾದು ಹೋಗುವ ಕಾರಣ ರಸ್ತೆಯ ಎರಡು ಬದಿಗಳಲ್ಲಿ ಹೂವಿನ ತೋಟ ಮಾಡಿದ್ದಾರೆ. ಆದರೆ ಸಿಟಿ ಕೌನ್ಸಿಲ್ ಬೆಂಚ್, ಗಿಡ, ಹೂವಿನ ಕುಂಡಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ.

ಸಾಮಾಜಿಕ ವಿರೋಧಿ ನಡೆ ಎಂದು ಕೌನ್ಸಿಲ್

ಸರಣಿ ದೂರುಗಳ ಬಂದ ಕಾರಣ ಕೌನ್ಸಿಲ್ ಈ ಆದೇಶ ನೀಡಿದೆ ಎಂದಿದೆ. ತೋಟವು ಅಪಾಯಾಕಾರಿಯಾಗಿದೆ. ಹೂವಿನ ಕುಂಡಗಳು ಬೀಳುವ ಸಾಧ್ಯತೆ ಇದೆ. ಸುರಕ್ಷಿತವಾಗಿಲ್ಲ,ಜೊತೆಗೆ ಸವಾರರಿಗೆ ಅಪಾಯಕ್ಕೆ ದಾರಿ ಮಾಡಲು ಸಾಧ್ಯವಿದೆ. ಹೀಗಾಗಿ ತೋಟಗಳನ್ನು ತೆಗೆದು ಹಾಕುವಂತೆ ಆದೇಶ ನೀಡಿದೆ.

ಅಜ್ಜಿ ಕ್ಯಾಥರೀನ್ ತೋಟವು ಸ್ಥಳೀಯ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿತ್ತು. ಹಲವು ನಿವಾಸಿಗಳು ಈ ತೋಟವು ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿದೆ ಎಂದಿದ್ದಾರೆ. ಈ ರಸ್ತೆಯಲ್ಲಿ ಸಾಗುವಾಗ ಸಂತಸ ಮನೆ ಮಾಡುತ್ತದೆ ಎಂದಿದ್ದಾರೆ. ಕ್ಯಾಥರೀನ್ ಅವರು ಈ ತೋಟವನ್ನು ತಮ್ಮ ಜೀವನದ ಪ್ರೀತಿಯ ಕೆಲಸವೆಂದು ಪರಿಗಣಿಸಿದ್ದಾರೆ ಮತ್ತು ಇದನ್ನು ತೆಗೆದುಹಾಕುವ ಆದೇಶದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.ಕಳೆದ 25 ವರ್ಷಗಳಿಂದ ಈ ತೋಟವನ್ನು ನಡೆಸುತ್ತಿದ್ದಾರೆ. ಯಾರಿಗೂ ಸಮಸ್ಯೆಯಾಗಿಲ್ಲ ಎಂದು ಸ್ಧಳೀಯರು ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

​₹20ರ ಟಿಫಿನ್‌ನಿಂದ ₹2.5 ಕೋಟಿಯ ಸಾಮ್ರಾಜ್ಯ, 65ರ ಪ್ರಾಯದಲ್ಲಿ ಸಾಧನೆ ಮೆರೆದ ಅಮ್ಮ
ಶ್ರಾವಣ ಮಾಸದಲ್ಲಿ ಚಿಕನ್-ಮಟನ್ ರುಚಿಯನ್ನೇ ಮೀರಿಸುವ ಪ್ಯೂರ್ ವೆಜ್ ವೈಟ್ ನುಗ್ಗೆಕಾಯಿ ಪಲಾವ್ ಮಾಡಿ