ಚರ್ಮದಲ್ಲಿರುವ ಈ ಬ್ಯಾಕ್ಟೀರಿಯಾಗೆ ಉಸಿರಾಡಲು ಕಷ್ಟವಾದರೆ ಬೆಳೆಯುತ್ತೆ ಮೊಡವೆ

Published : Oct 31, 2016, 02:50 PM ISTUpdated : Apr 11, 2018, 01:06 PM IST
ಚರ್ಮದಲ್ಲಿರುವ ಈ ಬ್ಯಾಕ್ಟೀರಿಯಾಗೆ ಉಸಿರಾಡಲು ಕಷ್ಟವಾದರೆ ಬೆಳೆಯುತ್ತೆ ಮೊಡವೆ

ಸಾರಾಂಶ

ಚರ್ಮದ ಕೋಶಗಳು ಹಾಗೂ ಕೂದಲಿನಲ್ಲಿ ಗಾಳಿ ಆಡದ ಸ್ಥಿತಿ ನಿರ್ಮಾಣವಾದಾಗ ಈ ಬ್ಯಾಕ್ಟೀರಿಯಾಗಳು ರೊಚ್ಚಿಗೇಳುತ್ತವೆ. ನಮ್ಮ ಚರ್ಮದಲ್ಲಿ ಕಂಡುಬರುವ ಸಿರಮ್ ಎಂಬ ಎಣ್ಣೆಯನ್ನು ಈ ಬ್ಯಾಕ್ಟೀರಿಯಾ ಫ್ಯಾಟಿ ಆಸಿಡ್'ಗಳಾಗಿ ಪರಿವರ್ತಿಸುತ್ತದೆ. ಇದರೊಂದಿಗೆ ಹತ್ತಿರದ ಚರ್ಮ ಕೋಶಗಳು ಊದಿಕೊಳ್ಳುತ್ತವೆ.

ನ್ಯೂಯಾರ್ಕ್(ಅ. 31): ಮೊಡವೆ ಏಕೆ ಬರುತ್ತದೆ ಎಂಬ ಪ್ರಶ್ನೆಗೆ ಹೊಸ ಅಧ್ಯಯನವೊಂದು ಉತ್ತರ ಕಂಡುಕೊಂಡಿದೆ. ಮೊಡವೆ ಹಾಗೂ ಇತರ ಕೆಲ ಚರ್ಮದ ಸೋಂಕಿಗೆ ಕಾರಣವಾಗುವ ಪ್ರೋಪಿಯೋನಿಬ್ಯಾಕ್ಟೀರಿಯಮ್ ಏಕ್ನಿಸ್'ಗೆ ಆಮ್ಲಜನಕದ ಕೊರತೆ ಉಂಟಾದಾಗ ಮೊಡವೆಗಳಾಗುತ್ತವೆ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ.

ಈ ಬ್ಯಾಕ್ಟೀರಿಯಾಗಳು ನಮ್ಮ ಚರ್ಮದ ಮೇಲೆ ಯಾವಾಗಲೂ ಇರುತ್ತವಾದರೂ ಸಾಮಾನ್ಯವಾಗಿ ನಿರುಪದ್ರವಿಗಳಾಗಿರುತ್ತವೆ. ಆದರೆ, ಚರ್ಮದ ಕೋಶಗಳು ಹಾಗೂ ಕೂದಲಿನಲ್ಲಿ ಗಾಳಿ ಆಡದ ಸ್ಥಿತಿ ನಿರ್ಮಾಣವಾದಾಗ ಈ ಬ್ಯಾಕ್ಟೀರಿಯಾಗಳು ರೊಚ್ಚಿಗೇಳುತ್ತವೆ. ನಮ್ಮ ಚರ್ಮದಲ್ಲಿ ಕಂಡುಬರುವ ಸಿರಮ್ ಎಂಬ ಎಣ್ಣೆಯನ್ನು ಈ ಬ್ಯಾಕ್ಟೀರಿಯಾ ಫ್ಯಾಟಿ ಆಸಿಡ್'ಗಳಾಗಿ ಪರಿವರ್ತಿಸುತ್ತದೆ. ಇದರೊಂದಿಗೆ ಹತ್ತಿರದ ಚರ್ಮ ಕೋಶಗಳು ಊದಿಕೊಳ್ಳುತ್ತವೆ. ದೇಹದಲ್ಲಿರುವ ಹಿಸ್ಟೋನ್ಸ್ ಎಂಬ ಗ್ರಂಥಿಗಳು ಈ ಊತವನ್ನು ಕಡಿಮೆ ಮಾಡಲು ಸ್ವಾಭಾವಿಕವಾಗಿ ಯತ್ನಿಸುತ್ತವಾದರೂ ಬ್ಯಾಕ್ಟೀರಿಯಾಗಳು ಉತ್ಪಾದಿಸುವ ಫ್ಯಾಟಿ ಆಸಿಡ್'ಗಳ ಮುಂದೆ ಅವುಗಳ ಆಟ ಸಾಗುವುದಿಲ್ಲ. ಹೀಗಾಗಿ, ಊತ ಕಡಿಮೆ ಆಗುವುದಿಲ್ಲ. ಚರ್ಮದ ಮೇಲೆ ತುರಿಕೆ ತರುವಂತಹ ಕೆಂಪಗಿನ ಗುಳ್ಳೆಗಳೇಳುತ್ತವೆ.

ಅಮೆರಿಕದ ಸ್ಯಾನ್ ಡಿಯೆಗೋದಲ್ಲಿರುವ ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರು ಈ ಹೊಸ ವಿಚಾರವನ್ನು ಪತ್ತೆ ಹಚ್ಚಿದ್ದಾರೆ. ಮೊಡವೆಯ ಚಿಕಿತ್ಸೆಗೆ ಈ ಅಧ್ಯಯನ ಸಹಕಾರ ಆಗುವ ನಿರೀಕ್ಷೆ ಇದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

25 ವರ್ಷಗಳಿಂದ ಹೊರಗಡೆ ಊಟವನ್ನೇ ಮಾಡಿಲ್ಲ... ಸಲ್ಮಾನ್ ಮಾತು ಕೇಳಿ ಬೆಚ್ಚಿಬಿದ್ದ ಬಾಲಿವುಡ್!
ಹೆಂಡತಿಯನ್ನ ಪ್ರೀತಿಸುವ ಗಂಡಂದಿರೂ ಅನೈತಿಕ ಸಂಬಂಧ ಇಟ್ಟುಕೊಳ್ಳಲು ಕಾರಣಗಳು ಇವೇ ನೋಡಿ!