
‘ನಾನು’ ಕಳ್ಳ, ಸುಳ್ಳ, ಮೋಸಗಾರ, ವಂಚಕ, ಆದರೂ ಯಾರ ಹಿಡಿತಕ್ಕೂ ಸಿಗುವುದಿಲ್ಲ, ‘ನಾನು’ ಮಾಹಾ ಬುದ್ಧಿವಂತ, ‘ನಾನು’ ಹುಟ್ಟು ಹಬ್ಬದ ಪ್ರೇಮಿ, ಸಾವನ್ನು ಹತ್ತಿರವೂ ಬರಲು ಬಿಡುವುದಿಲ್ಲ, ‘ನಾನು’ ಅಷ್ಟು ಸುಲ‘ವಾಗಿ ಕಳ್ಳತನ ಬಿಡುವುದಿಲ್ಲ, ನಿಜವ ನುಡಿಯುವುದಿಲ್ಲ, ಏಕೆಂದರೇ ‘ನಾನು’ ಮಾಡಿದ್ದೆಲ್ಲ ಒಪ್ಪಿಕೊಂಡರೇ ‘ನಾನು’ ಬದುಕಲು ಯಾರೂ ಬಿಡುವುದಿಲ್ಲ. ಬ್ಲಾ,ಬ್ಲಾ,ಬ್ಲಾ,ಬ್ಲಾ, ಯಾರ್ರೀ ಈ ‘ನಾನು’ ಎಲ್ಲರೊಳಗೂ ಸೇರಿ ನರ್ತನ ಮಾಡ್ತಾ ಇರೊದು?, ಹೇಗಿರುತ್ತೆ?, ಎಲ್ಲಿರುತ್ತೆ? ಆ ಕಳ್ಳನನ್ನು ಹಿಡಿಯಬೇಕೆಂದರೇ ಏನು ಮಾಡಬೇಕು? ಗೊತ್ತೇ ನಿಮಗೇ? ಆ ವಂಚಕನನ್ನು ಕೊಲ್ಲುವ, ಗೆಲ್ಲುವ ಬಗೆ ತಿಳಿಯ ಬೇಕೆ? ಹಾಗಾದರೇ ಅದರ ಬೌತಿಕ ಲಕ್ಷಣಗಳನ್ನು ತಿಳಿಯೋಣ, ‘ನಾನು’ ಬಣ್ಣವಿಲ್ಲದವ, ರೂಪಬಾರಗಳಿಲ್ಲದವ ಆದರೆ ‘ನಾನು’ ಆತ್ಮನಲ್ಲ, ಹುಟ್ಟುಸಾವುಗಳಿರುವವ ಮತ್ತು ಆತ್ಮಕ್ಕೆ ಹುಟ್ಟು ಸಾವು ಇಲ್ಲ, ‘ನಾನು’
ವಾಸಿಸುವುದು ಇಂದ್ರಿಯಗಳ ನಡುವೆ, ‘ನಾನು’ ಬುದ್ಧಿ ಮತ್ತು ಮನಸ್ಸುಗಳನ್ನು ಬೇರೆ ಮಾಡಿ ಮನಸ್ಸನ್ನು ಅಧೀನಕ್ಕೆ ತೆಗೆದುಕೊಂಡು ಸರ್ವಾಧಿಕಾರ ಸ್ಥಾಪಿಸುವುದು. ಹಾಗಾಗುವುದು ಪ್ರಕೃತಿಯ ಪ್ರತಿರೋಧ. ಇನ್ನು ‘ನಾನು’ ಹೇಗೆ ಕೆಲಸ ಮಾಡತ್ತೆ? ಎಂಬುದರ ಬಗ್ಗೆ ತಿಳಿಯೋಣ, ಮನಸ್ಸಿಗೆ ಐದು ಮಕ್ಕಳು ಅವು ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು. ಇವುಗಳು ತಮ್ಮ ಬಯಕೆಗಳಾದ ಕೇಳುವುದು, ಮುಟ್ಟು'ವುದು, ನೋಡುವುದು, ತಿನ್ನುವುದು ಮತ್ತು ಸುಗಂಧ‘ಗಳ ವಾಂಛೆ ಮುಂತಾದವುಗಳಿಗೆ ನಿರಂತರ ಅಧೀನವಾಗಿ ಆ ಆಸೆಗಳ ಈಡೇರಿಕೆಗೆ ಮನಸ್ಸನ್ನು ಒಪ್ಪಿಸಿ ಅದರಿಂದಾಗುವ ಎಷ್ಟೋ ದುಃಖಗಳಿಗೆ ಮನಸ್ಸನ್ನು ತಳ್ಳಿ , ಜೀವಿಗಳನ್ನು ಸರ್ವ ನಾಶದ ಕಡೆಗೊಯ್ಯುತ್ತದೆ. ಇನ್ನು ಈ ಗುಟ್ಟು ತಿಳಿದಾಗ ನಾವು ಈ ಐದೂ ಇಂದ್ರಿಯಗಳಿಗೂ ಮನಸ್ಸಿಗೂ ಸಂಬಂಧ‘ ಕಡಿದು ಹಾಕಿದರೆ ‘ನಾನು’ ಸಾಯುವುದು, ಅದು ಸತತ ಅಭ್ಯಾಸದಿಂದ ಸಾಧ್ಯರೀ! ಆ ನಾನು ಸತ್ತರೆ ಇವನಾಗುತ್ತೇವೆ ಆ ಇವನೇ ಪ್ರಕೃತಿ, ಯಾವಾಗ ಪ್ರಕೃತಿ ನಮ್ಮೊಡನೆ ಸೇರಿತು ಅಂದರೇ ಅವನು ನೀರು ಕುಡಿದ ಹಾಗೆ ಸಿಗುವನು
- ಅಹೋರಾತ್ರ,
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.