ಕಿಂಗ್ ಕೋಬ್ರಾವನ್ನೇ ಬೇಟಿಯಾಡುತ್ವೆ ಈ ಪ್ರಾಣಿಗಳು !

Published : Apr 04, 2025, 03:39 PM ISTUpdated : Apr 06, 2025, 09:37 AM IST
ಕಿಂಗ್ ಕೋಬ್ರಾವನ್ನೇ ಬೇಟಿಯಾಡುತ್ವೆ ಈ ಪ್ರಾಣಿಗಳು !

ಸಾರಾಂಶ

ಕಿಂಗ್ ಕೋಬ್ರಾ ಅತ್ಯಂತ ವಿಷಕಾರಿ ಹಾವು. ಇದು 12-13 ಅಡಿ ಉದ್ದವಿದ್ದು, ನಿಂತು ಕಣ್ಣಿಗೆ ನೋಡುವ ಸಾಮರ್ಥ್ಯ ಹೊಂದಿದೆ. ಇದರ ವಿಷವು ನರಮಂಡಲವನ್ನು ವಿಫಲಗೊಳಿಸಿ ಹೃದಯಾಘಾತಕ್ಕೆ ಕಾರಣವಾಗಬಹುದು. ಮುಂಗುಸಿ, ಮೊಸಳೆ, ನರಿ, ಕಪ್ಪೆ, ಹದ್ದು ಮತ್ತು ಕೆಲವು ಹಾವುಗಳು ಕಿಂಗ್ ಕೋಬ್ರಾವನ್ನು ಕೊಂದು ತಿನ್ನುತ್ತವೆ. ಇರುಕಂಡ್ಜಿ ಜೆಲ್ಲಿ ಮೀನು ಕಿಂಗ್ ಕೋಬ್ರಾಕ್ಕಿಂತ ಹೆಚ್ಚು ವಿಷಕಾರಿಯಾಗಿದೆ.

ಕಿಂಗ್ ಕೋಬ್ರಾ (King Cobra) ಭೂಮಿಯ ಮೇಲೆ ಕಂಡುಬರುವ ಅತ್ಯಂತ ವಿಷಕಾರಿ ಜೀವಿಗಳಲ್ಲಿ ಒಂದು. ಕಿಂಗ್ ಕೋಬ್ರಾ ಸರಾಸರಿ 12 ರಿಂದ 13 ಅಡಿ ಉದ್ದವಿರುತ್ತದೆ. ಆದ್ರೆ ಬಾಲದ ನೆರವಿನಿಂದ ತನ್ನ ಇಡೀ ದೇಹವನ್ನು ಮೇಲಕ್ಕೆ ಎತ್ತುವ ಸಾಮರ್ಥ್ಯವನ್ನು ಕಿಂಗ್ ಕೋಬ್ರಾ ಹೊಂದಿದೆ. ಅಂದ್ರೆ ಅದು ನಿಮ್ಮಷ್ಟೇ ಎತ್ತರಕ್ಕೆ ನಿಂತು ನಿಮ್ಮ ಕಣ್ಣುಗಳನ್ನು ನೇರವಾಗಿ ನೋಡಬಲ್ಲದು. ಕಿಂಗ್ ಕೋಬ್ರಾದ ವಿಷ ಒಮ್ಮೆಗೆ 20 ಜನರನ್ನು ಕೊಲ್ಲುವಷ್ಟಿರುತ್ತದೆ. 

ಕಿಂಗ್ ಕೋಬ್ರಾ  ಒಬ್ಬರಿಗೆ ಕಡಿದಾಗ 200 ರಿಂದ 500 ಮಿಲಿಗ್ರಾಂ ವಿಷ (poison) ಅದರ ದೇಹದಿಂದ ಬಿಡುಗಡೆಯಾಗುತ್ತದೆ.  ಕಿಂಗ್ ಕೋಬ್ರಾ ವಿಷ ನರಗಳಿಗೆ ಹಾನಿಕಾರಕವಾಗಿರುವುದರಿಂದ, ಅದು ದೇಹದ ನರಮಂಡಲವನ್ನು ವಿಫಲಗೊಳಿಸಿ ಹೃದಯ ವೈಫಲ್ಯ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.  ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಶುರುವಾಗುತ್ತದೆ. ಕಿಂಗ್ ಕೋಬ್ರಾನಿಂದ ಕಚ್ಚಿಸಿಕೊಂಡ ವ್ಯಕ್ತಿ ಬದುಕೋ ಸಾಧ್ಯತೆ ಬಹಳ ಕಡಿಮೆ. ಕಚ್ಚಿದ ಕೆಲವೇ ಕ್ಷಣಗಳಲ್ಲಿ ಆತನ ಪ್ರಾಣ ಹೋಗುತ್ತೆ. ಆದ್ರೆ ಇಷ್ಟು ವಿಷವಿರುವ ಕಿಂಗ್ ಕೋಬ್ರಾವನ್ನೂ ಕೊಂದು ತಿನ್ನುವ ಪ್ರಾಣಿಗಳಿವೆ. ಅವರ ಮೇಲೆ ಕಿಂಗ್ ಕೋಬ್ರಾ ವಿಷ ಪರಿಣಾಮ ಬೀರೋದೇ ಇಲ್ಲ.

ವಾಯ್ಸ್ ಚೆನ್ನಾಗಿರಬೇಕು ಎಂದು ವೀರ್ಯದ ಕಾಕ್ಟೆಲ್ ಕುಡಿತಾರಂತೆ ಈ ಖ್ಯಾತ

ಕಿಂಗ್ ಕೋಬ್ರಾ ವಿಷದಿಂದ ಈ ಪ್ರಾಣಿಗಳು ಸಾಯೋದಿಲ್ಲ : 

ಮುಂಗುಸಿ : ಹಾವಿನ ಶತ್ರು ಮುಂಗುಸಿ. ಇವಕ್ಕೆ ಹಾವಿನ ವಿಷ ತಟ್ಟೋದಿಲ್ಲ. ಎಲ್ಲ ಹಾವುಗಳ ವಿರುದ್ಧ ಹೋರಾಡುವ ಮುಂಗುಸಿ, ಹಾವಿನ  ಪ್ರತಿಯೊಂದು ಹೊಡೆತವನ್ನು ಸಹಿಸಿಕೊಂಡ ನಂತ್ರ, ಕಿಂಗ್ ಕೋಬ್ರಾ ವಿಷಕಾರಿ ಜೀವಿಯನ್ನು ಕೊಂದು ತಿನ್ನುತ್ತದೆ.  

ಮೊಸಳೆ :  ಮೊಸಳೆ ಕೂಡ ಸರೀಸೃಪವಾಗಿರುವುದರಿಂದ, ಸರೀಸೃಪಗಳು ಹಾವಿನ ವಿರುದ್ಧ ಹೋರಾಡುವ ಕಲೆಯನ್ನು ತಿಳಿದಿವೆ. ದೊಡ್ಡ ಹಲ್ಲಿಗಳು, ಅಲಿಗೇಟರ್ಗಳು ಮತ್ತು ಮೊಸಳೆಗಳು ಸಹ ಕಿಂಗ್ ಕೋಬ್ರಾವನ್ನು ಕೊಂದು ತಿನ್ನುತ್ತವೆ. 

ನರಿ : ಕಿಂಗ್ ಕೋಬ್ರಾಕ್ಕೆ ಹೆದರದ ಪ್ರಾಣಿಗಳಲ್ಲಿ ನರಿ ಕೂಡ ಸೇರಿದೆ. ನರಿಗಳು, ರಕೂನ್ಗಳು ಮತ್ತು ವೀಸೆಲ್ಗಳಂತಹ ಪ್ರಾಣಿಗಳು ಕಿಂಗ್ ಕೋಬ್ರಾವನ್ನು ಕೊಂದು, ಅದರ ವಿಷಕಾರಿ ಅಂಗವನ್ನು ತೆಗೆದುಹಾಕಿ ಉಳಿದ ಮಾಂಸವನ್ನು ತಿನ್ನುತ್ತವೆ. 

ಕಪ್ಪೆ : ಹಾವುಗಳನ್ನು ಕೊಂದು ನುಂಗುವುದರಲ್ಲಿ ಕಪ್ಪೆ ನಿಪುಣ. ಅವು ತಮ್ಮ ನಾಲಿಗೆಯಿಂದ  ಬೇಟೆ ಆಡುತ್ವೆ. 

ಹದ್ದು : ಹದ್ದು, ಗಿಡುಗ ಮತ್ತು ಗೂಬೆಗಳಂತಹ ಪಕ್ಷಿಗಳು ಕೂಡ ಹೆಚ್ಚು ಶಕ್ತಿ ಹೊಂದಿವೆ. ಅವು ಕಿಂಗ್ ಕೋಬ್ರಾಗೆ ಚಿತ್ರ ಹಿಂಸೆ ನೀಡಿದ ನಂತ್ರ ಕೊಲ್ಲುತ್ತವೆ. ಕಿಂಗ್ ಕೋಬ್ರಾವನ್ನು ಇವು ಕಚ್ಚಿ ತಿನ್ನುತ್ತವೆ. ಕಿಂಗ್ ಕೋಬ್ರಾಗಳು ಇವುಗಳಿಗೆ ವಿಷ ರವಾನೆ ಮಾಡಲು ಪ್ರಯತ್ನಿಸಿದ್ರೂ ಪ್ರಯೋಜನವಾಗೋದಿಲ್ಲ. 

ಮೈಮರೆತು ರೀಲ್ಸ್ ಮಾಡ್ತಿದ್ದ ಯುವತಿಯ ಕಾಲಿನ ನಡುವೆ ಬಂದ 8 ಅಡಿ ಉದ್ದದ

ಹಾವು :  ಹಾವುಗಳಿಗೆ ಹಾವುಗಳೇ ಶತ್ರುಗಳು. ಹಾವುಗಳನ್ನು ಭೇಟಿಯಾಡಿ ನುಂಗುವ ಕೆಲ ಹಾವುಗಳಿವೆ. ಅವುಗಳಿಗೆ ಕಿಂಗ್ ಕೋಬ್ರಾ ವಿಷ ಯಾವುದೇ ಪರಿಣಾಮ ಬೀರುವುದಿಲ್ಲ.

ಕಿಂಗ್ ಕೋಬ್ರಾಗಿಂತ ವಿಷಕಾರಿ ಈ ಪ್ರಾಣಿ : ಜಗತ್ತಿನಲ್ಲಿ ಅತಿ ಹೆಚ್ಚು ವಿಷಕಾರಿ ಪ್ರಾಣಿ ಅಂದ್ರೆ ಅದು ಕಿಂಗ್ ಕೋಬ್ರಾ ಅಂತ ನಾವು ಭಾವಿಸಿದ್ದೇವೆ. ಆದ್ರೆ ಅದಕ್ಕಿಂತ ವಿಷಕಾರಿ ಪ್ರಾಣಿಗಳು ಭೂಮಿ ಮೇಲಿವೆ. ಇರುಕಂಡ್ಜಿ ಜೆಲ್ಲಿ ಮೀನು, ಕಿಂಗ್ ಕೋಬ್ರಾಕ್ಕಿಂತ 100 ಪಟ್ಟು ಹೆಚ್ಚು ವಿಷಕಾರಿಯಾಗಿದೆ. ಇದೇ ವಿಶ್ವದ ಅತ್ಯಂತ ವಿಷಕಾರಿ ಜೀವಿಯಾಗಿದೆ. ಇದರ ವಿಷಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಇದು ಕೇವಲ 1 ಸೆಂಟಿಮೀಟರ್ ಗಾತ್ರದಲ್ಲಿದೆ. ಅದ್ರ ದೇಹ ಪಾರದರ್ಶಕವಾಗಿರುತ್ತದೆ. ಹಾಗಾಗಿ ಅದು ಸುಲಭವಾಗಿ ನಮ್ಮ ಕಣ್ಣಿಗೆ ಕಾಣಿಸೋದಿಲ್ಲ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿಕ್ಕ ಶುಂಠಿ ಬರೀ ಮಸಾಲೆಯಲ್ಲ ಔಷಧಿಗಳ ಗಣಿ, ಒಂದು ತಿಂಗಳು ಪ್ರತಿ ದಿನ ತಿಂದ್ರೆ ಏನಾಗುತ್ತೆ ಗೊತ್ತಾ?
ಯಾವುದೇ ಸೀಸನ್ ಬಂದ್ರೂ ಮೊಸರು ಹುಳಿಯಾಗಲ್ಲ, ಗಟ್ಟಿಯಾಗಿರುತ್ತೆ .. ಈ ಸುಲಭ ಟ್ರಿಕ್ ಟ್ರೈ ಮಾಡಿ