ಲೈಂಗಿಕ ಚಟುವಟಿಕೆ ಸಕ್ರಿಯವಾಗಲು ಈ ವ್ಯಾಯಾಮ ಮಾಡಿ

By Web DeskFirst Published Sep 15, 2018, 3:39 PM IST
Highlights

ಪೆಲ್ವಿಸ್ ಸ್ನಾಯು ಶಕ್ತಿ ಕಳೆದುಕೊಂಡರೆ ಹೆಣ್ಣು ಮಕ್ಕಳು ಸಣ್ಣ ಸಣ್ಣ ಆರೋಗ್ಯ  ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹೀಗಾಗದಂತೆ ಸುಲಭವಾದ ವ್ಯಾಯಾಮವಿದೆ. ಅದನ್ನು ಹೇಗೆ ಮಾಡುವುದು?

ಗರ್ಭಧಾರಣೆ, ಮಗುವಿಗೆ ಜನ್ಮ ನೀಡುವುದು, ಶಸ್ತ್ರ ಚಿಕಿತ್ಸೆ ಹಾಗೂ ದೇಹದ ತೂಕ ಹೆಚ್ಚಾದರೆ ಪೆಲ್ವಿಕ್ ಫ್ಲೋರ್ ಸ್ನಾಯುಗಳು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಗಟ್ಟಿತನವನ್ನು ಕಳೆದುಕೊಳ್ಳುವ ಈ ಸ್ನಾಯುಗಳು ಗರ್ಭಾಶಯ, ಮೂತ್ರ ಕೋಶ, ಸಣ್ಣ ಕರುಳಿನ ಮೇಲೂ ಪ್ರಭಾವ ಬೀರುತ್ತದೆ. 

ಈ ಸಮಸ್ಯೆ ನಿವಾರಣೆಗೆ ವ್ಯಾಯಾಮ

  • 10 ಸೆಕೆಂಡ್ ಯೋನಿ ಚರ್ಮವನ್ನು ಬಿಗಿಯಾಗಿ ಹಿಡಿದು, ನಂತರ ಸಡಿಲಿಸಬೇಕು. ಇದನ್ನು ದಿನಕ್ಕೆ 5 ಸಲ ಮಾಡಬೇಕು. ಹೀಗೆ ಮಾಡುವಾಗ ಉಸಿರನ್ನು ಹಿಡಿದುಕೊಳ್ಳಬಾರದೆಂಬುವುದು ನೆನಪಿರಲಿ. ಕಲವೇ ವಾರಗಳಲ್ಲಿ ಫಲಿತಾಂಶ ಹೊರ ಬೀಳುವುದು. 

ವ್ಯಾಯಾಮದ ಉಪಯೋಗವೇನು?

  • ಕೆಮ್ಮಿದಾಗ, ನಗುವಾಗ ಮತ್ತು ಸೀನಿದಾಗ ಮೂತ್ರದ ಹನಿಗಳು ಬರುವುದು ತಡೆಯುತ್ತದೆ.
  • ಸುಖಾ ಸುಮ್ಮನೆ ಮೂತ್ರಕ್ಕೆ ಹೋಗಬೇಕೆಂಬ ಭಾವನೆ ಇಲ್ಲವಾಗುತ್ತದೆ.
  • ಲೈಂಗಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಕರಿಸುತ್ತದೆ.

ಯಾವಾಗ ಈ ವ್ಯಾಯಾಮ ಮಾಡಬಾರದು?

ಇದನ್ನು ಗರ್ಭವತಿ ಅಥವಾ ಮಗು ಹುಟ್ಟಿದ ಸಮಯದಲ್ಲಿ ಮಾಡಿದರೆ ಓಕೆ.  ಆದರೆ, ಅತಿ ಹೆಚ್ಚಾಗಿ ಮೂತ್ರ ಸೋರುತ್ತಿದ್ದರೆ, ಈ ವ್ಯಾಯಾಮ ಉಪಯೋಗಕ್ಕೆ ಬರುವುದಿಲ್ಲ. ಆಗ ವೈದ್ಯರನ್ನು ಭೇಟಿಯಾಗಬೇಕು.

click me!