ದುಃಖಿಸಲು ನೂರು ಕಾರಣ, ನಗು ವಿನಾಕಾರಣ; ಮನಸಾರೆ ನಕ್ಕುಬಿಡಿ!

By Web Desk  |  First Published Aug 21, 2019, 3:49 PM IST

ಖುಷಿ ಎನ್ನುವುದು ದೇವರು ಕೊಟ್ಟ ವರವಿದ್ದಂತೆ. ಅದಕ್ಕೆ ಬದುಕುವ ಅಷ್ಟು ಗಳಿಗೆಯಲ್ಲು ಖುಷಿಯನ್ನು ಹುಡುಕುತ್ತಾ, ಖುಷಿಯಾಗೇ ಇರಬೇಕು. ನಮ್ಮ ಜೀವನದ ಮುಖ್ಯ ಉದ್ದೇಶ ಸದಾ ಖುಷಿಯಾಗಿರುವುದೇ ಆಗಿರಬೇಕು.


ಖುಷಿ ಎನ್ನುವುದು ದೇವರು ಕೊಟ್ಟ ವರವಿದ್ದಂತೆ. ಅದಕ್ಕೆ ಬದುಕುವ ಅಷ್ಟು ಗಳಿಗೆಯಲ್ಲು ಖುಷಿಯನ್ನು ಹುಡುಕುತ್ತಾ, ಖುಷಿಯಾಗೇ ಇರಬೇಕು. ನಮ್ಮ ಜೀವನದ ಮುಖ್ಯ ಉದ್ದೇಶ ಸದಾ ಖುಷಿಯಾಗಿರುವುದೇ ಆಗಿರಬೇಕು.

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ದುಃಖ, ನಿರಾಸೆ ಇದ್ದೇ ಇರುತ್ತೆ. ಅದರಿಂದ ಹೊರಬಂದು ಒಂದು ನೆಮ್ಮದಿಯ ಜೀವನ ನಡೆಸುವುದೇ ನಮ್ಮ ಗುರಿಯಾಗಬೇಕು. ಜೀವನದ ಪ್ರತೀ ಹಂತಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಚಿಕ್ಕವರಿದ್ದಾಗ ‘ನಾವು ಬೇಗ ದೊಡ್ಡವರಾಗ್ಲಿ’ ಅಂತ ಅಂದಿಕೊಳ್ಳುತ್ತೇವೆ. ದೊಡ್ಡವರಾದ ಮೇಲೆ ‘ಛೆ, ಚಿಕ್ಕವರಾಗಿಯೇ ಇರಬೇಕಿತ್ತು’ ಅಂತ ಅಂದುಕೊಳ್ಳುತ್ತೇವೆ. ಓದುವಾಗ ‘ಬೇಗ ಓದು ಮುಗ್ದು ಕೆಲಸ ಸಿಗ್ಲಿ’ ಅಂತ ಅಂದುಕೊಂಡರೆ, ಕೆಲಸ ಸಿಕ್ಕ ಮೇಲೆ ‘ಓದುತ್ತಾ ಇರೊವಾಗ್ಲೇ ಚೆನ್ನಾಗಿತ್ತು, ಯಾವುದೇ ಜವಾಬ್ದಾರಿ ಇರ್ಲಿಲ್ಲ’ ಅಂತ ದುಃಖ ಪಡುತ್ತೀವಿ.

Tap to resize

Latest Videos

ಹೊಟ್ಟೆಯೊಳಗಿನ ಕಿಚ್ಚಿಗೆ ತಣ್ಣೀರ್ ಸುರಿಯದಿದ್ರೆ ದಕ್ಕಲ್ಲ ಯಶಸ್ಸು!

ನಾವು ಮಾಡೊ ತಪ್ಪು ಇದೇನೆ. ಪ್ರತೀ ಹಂತವೂ ಮುಗಿದ ಮೇಲೆ ಮುಗಿಯಬಾರದಿತ್ತು ಅಂತ ಯಾಕೆ ಒದ್ದಾಡುತ್ತೀವಿ ಅಂದ್ರೆ ನಮಗೆ ಯಾವುದು ಇದೆಯೋ ಅದನ್ನು ಅನುಭವಿಸೊ ಮನಸ್ಸು ಇಲ್ಲದೇ ಇರೋದ್ರಿಂದ.  ಪ್ರತೀ ಹಂತ ಮಾತ್ರವಲ್ಲ, ಪ್ರತೀ ಕ್ಷಣವೂ ಖುಷಿಯಿಂದ ಅನುಭವಿಸಿದರೆ ಮಾತ್ರ ಮುಂದಿನ ಹಂತಕ್ಕೆ ಹೆಜ್ಜೆಯಿಡುವಾಗ ನಮ್ಮೊಂದಿಗೆ ಸಾರ್ಥಕ(ತೃಪ್ತಿ) ಭಾವವು ಸಹ ಹೆಜ್ಜೆ ಇಡುತ್ತದೆ. ಪ್ರ

ತೀ ಹಂತವನ್ನು ಅನುಭವಿಸಬೇಕು ಎಂದುಕೊಂಡರೆ ಅದೇನೂ ತುಂಬ ಕಷ್ಟದ ಕೆಲಸವಲ್ಲ. ಏಳುತ್ತಲೇ ಯಾವುದೋ ಒಂದು ತಲೆ ಬಿಸಿ ಅಥವಾ ಅಸಮಾಧಾನದ ಜೊತೆಗೆ ಏಳಬಾರದು. ಅದರ ಬದಲಾಗಿ ಏಳುತ್ತಲೇ ಅಂದು ಖುಷಿಯಾಗಿ ಕಳೆಯಬಹುದಾದ ಕ್ಷಣದ ಬಗ್ಗೆ ಯೋಚಿಸಿ ಖುಷಿ ಪಡಬೇಕು. ಸ್ನಾನ ಮಾಡುವಾಗ, ತಯಾರಾಗುವಾಗಲೆಲ್ಲಾ ನಮ್ಮಿಷ್ಟದ ಸಂಗೀತ ಕೇಳಿ ಖುಷಿ ಪಡಬೇಕು. ನಗು ಅನ್ನೋದು ಬೇರೆ ಯಾರೋ ತಂದುಕೊಡೋದಲ್ಲ, ನಗು ನಮ್ಮಲ್ಲೇ ಹುಟ್ಟಬೇಕು.

ಸಂಬಂಧ ಹಾಳು ಮಾಡಿಕೊಳ್ಳದೆ ಹೊಟ್ಟೆಕಿಚ್ಚಿನ ಸಂಗಾತಿಯನ್ನು ನಿಭಾಯಿಸೋದು ಹೇಗೆ?

ದುಃಖಿಸಲು ಬಹಳ ಕಾರಣ ಇರುತ್ತೆ. ಆದರೆ ಸಂತೋಷಕ್ಕೆ ಹಲು ಕಾರಣ ಹುಡುಕಿದರೆ ಸಿಗುತ್ತೆ. ಮೇಲಾಗಿ ಖುಷಿ ಪಡಲು ಕಾರಣ ಬೇಕಿಲ್ಲ. ನಾವು ನಗಲು ಸಂಭ್ರಮಿಸಲು ಸದಾ ಸಿದ್ಧರಿರಬೇಕಷ್ಟೆ. 

- ಸಿಂಧು ಭಟ್ 

 

click me!