
ಕೆಲಸದಿಂದ ಸ್ಟ್ರೆಸ್ ಬರಲ್ಲ!
ಒತ್ತಡಕ್ಕೆ ಕಾರಣ ಕೆಲಸ ಇಲ್ಲದೇ ಇರೋದು. ಎನ್ ಜಾಯ್ ಮಾಡುತ್ತಾ ಕೆಲಸ ಮಾಡುತ್ತಿದ್ದರೆ ಸ್ಟ್ರೆಸ್ ಹತ್ತಿರವೂ ಸುಳಿಯಲ್ಲ. ಅದೇ ತಲೆಯಲ್ಲಿ ನೂರು ಯೋಚನೆಗಳಿದ್ದು, ಏನೂ ಮಾಡಲಿಕ್ಕಾಗದೇ ಇದ್ದರೆ ಆಗ ಒತ್ತಡ ಕಾಣಿಸಿಕೊಳ್ಳುತ್ತದೆ. ಸೂಕ್ಷ್ಮವಾಗಿ ಗಮನಿಸಿ. ಕೆಲಸ ಮಾಡಿ ಬೇಗ ಮುಗಿಸಬೇಕೆಂಬ ಯೋಚನೆ ನಮ್ಮಲ್ಲಿ ಒತ್ತಡ ತರುತ್ತದೆಯೇ ಹೊರತು, ಕೆಲಸವಲ್ಲ. ಬಹಳ ಕೆಲಸ ಮಾಡಿದ ದಿನ ನಮ್ಮಲ್ಲಿ ಒತ್ತಡ ಇರಲ್ಲ. ಹಗುರಾಗಿ ಇರುತ್ತೇವೆ. ಅದೇ ಕೆಲಸ ಕಡಿಮೆ ಇದ್ದ ದಿನ ಯೋಚನೆಗಳು ಹೆಚ್ಚು. ಕೆಲವೊಮ್ಮೆ ಹತ್ತಾರು ಕೆಲಸ ಮಾಡಬೇಕು ಅಂತ ಅಂದುಕೊಂಡು ಯಾವುದನ್ನು ಮೊದಲು ಮಾಡಲಿ ಎಂಬ ಯೋಚನೆಯಲ್ಲೇ ಸಮಯ ಹಾಳು ಮಾಡುತ್ತೇವೆ. ಇಂಥ ಅಂಶಗಳು ಒತ್ತಡ ಹೆಚ್ಚಿಸುತ್ತವೆ. ಹಾಗಾಗಿ ಕೆಲಸ ಜಾಸ್ತಿ ಮಾಡಿ. ತಲೆಯನ್ನು ಕೂಲಾಗಿಟ್ಟಿರಿ.
ದಕ್ಷಿಣ ಏಷ್ಯನ್ನರಿಗೆ ಹಾರ್ಟ್ ಪ್ರಾಬ್ಲಂ ಜಾಸ್ತಿ ಏಕೆ?
ಮಕ್ಕಳ ಸ್ವಚ್ಛತೆ ಹೇಗಿರಬೇಕು?
ಆರೇಳು ವರ್ಷದ ಹುಡುಗಿ ಶರಧಿ ಊಟಕ್ಕೆ ಮೊದಲು ಸ್ಯಾನಿಟೈಸರ್ ಬಳಸಿ ಚೆನ್ನಾಗಿ ಕೈ ತೊಳೆಯುತ್ತಾಳೆ. ಊಟದ ಬಳಿಕವೂ ಮೊದಲಿನಂತೆ ಚೆನ್ನಾಗಿ ಕೈ ತೊಳೆಯುತ್ತಾಳೆ. ಸ್ವಲ್ಪವೂ ಕೈ ಕಾಲು ಕೊಳೆ ಮಾಡಿಕೊಳ್ಳಲ್ಲ. ಆರೋಗ್ಯದ ವಿಷಯದಲ್ಲಿ ಬಹಳ ಕಾಳಜಿ ಇರುವ ಅವಳ ಅಮ್ಮ ಇದನ್ನೆಲ್ಲ ಅಭ್ಯಾಸ ಮಾಡಿಸಿದ್ದಾರೆ. ಈಗಿನ ಹೆಚ್ಚಿನೆಲ್ಲ ಮಕ್ಕಳೂ ಶರಧಿಯಂತೆ ಹೆಚ್ಚು ಸ್ವಚ್ಛವಾಗಿರುತ್ತಾರೆ. ಆದರೆ ನಿಜಕ್ಕೂ ಮಕ್ಕಳ ವಿಷಯದಲ್ಲಿ ಈ ಮಟ್ಟಿನ ಸ್ವಚ್ಛತೆ ಖಂಡಿತಾ ಬೇಡ. ವೈದ್ಯರೇ ಬಹಳ ಸಲ ಹೇಳುತ್ತಾರೆ, ಮಕ್ಕಳನ್ನು ಮಣ್ಣಿನಲ್ಲಿ ಆಡಲು ಬಿಡಿ. ಅತಿಯಾದ ಸ್ವಚ್ಛತೆಯನ್ನು ಹೇರಬೇಡಿ ಅಂತ. ಮಕ್ಕಳು ಮಣ್ಣಿನಲ್ಲಿ ಆಡಿ ಒಂಚೂರು ಕೊಳೆಯಾಗಿದ್ದರೂ ನಿರ್ಲಕ್ಷಿಸಿದರೆ ಅವರ ರೋಗ ನಿರೋಧಕ ಶಕ್ತಿ ಬೆಳೆಯೋದು. ಅದೂ ಅಲ್ಲ, ನಾವು ಬಳಸೋ ಸ್ಯಾನಿಟೈಸರ್ ದೇಹಕ್ಕೆ ಅಗತ್ಯವಿರುವ ಬ್ಯಾಕ್ಟೀರಿಯಾಗಳನ್ನು ಕಿಲ್ ಮಾಡುತ್ತೆ. ಇದು ಒಳ್ಳೆಯದಲ್ಲ.
ನಿಜಕ್ಕೂಬೊಜ್ಜಿಗೆ ಏನು ಕಾರಣ
ತಿನ್ನುವ ಶೈಲಿ. ಈ ವಿಷಯದಲ್ಲಿ ನಮಗೆ ಫ್ರೆಂಚ್ ಹೆಂಗಸರು ಮಾದರಿ. ಅವರು ಪ್ರತೀ ತುತ್ತನ್ನೂ ಎನ್‌ಜಾಯ್ ಮಾಡ್ತಾರೆ. ತಿಂಡಿಯನ್ನು ಸ್ವಲ್ಪ ಸ್ವಲ್ಪವೇ ತಿನ್ನುತ್ತಾರೆ. ಇದರಿಂದ ಮೂರು ಮಕ್ಕಳ ತಾಯಿಯಾದರೂ ವಯಸ್ಸು ನಲುವತ್ತು ದಾಟಿದರೂ ಬಳುಕುವ ಬಳ್ಳಿಯಂತಿರುತ್ತಾರೆ. ಇದಕ್ಕಿಂತ ಮುಖ್ಯವಾಗಿ ಅನಾರೋಗ್ಯ ಅವರನ್ನು ಬಾಧಿಸಲ್ಲ. ನಮ್ಮಲ್ಲಿ ಮನೆಯಲ್ಲಿ ತಿಂಡಿ ತಿನ್ನಲಿಕ್ಕೆ ಸಮಯ ಸಿಗದೇ ಬಸ್‌ನಲ್ಲಿ ಹೋಗುವಾಗ ಬಾಕ್ಸ್ ಬಿಚ್ಚಿ ಗಬಗಬ ತಿಂಡಿ ತಿನ್ನುವ ಹೆಣ್ಮಕ್ಕಳೇ ಹೆಚ್ಚು. ಇನ್ನೂ ಕೆಲವರು ಮೊಬೈಲ್, ಟಿವಿ, ಸಿಸ್ಟಮ್ ನೋಡ್ತಾ ತಿನ್ತಾರೆ. ಊಟದ ರುಚಿಯತ್ತ ಅವರ ಗಮನ ಇರೋದೇ ಇಲ್ಲ. ತಿನ್ನುವ ಶೈಲಿಯಲ್ಲಿ ತುಸು ಬದಲಾವಣೆ ಮಾಡ್ಕೊಳ್ಳೋಣ. ಬೊಜ್ಜಿಗೆ ಬೈ ಮಾಡೋಣ.
ಕೂದಲು ಉದುರಲು ಈ ಆರೋಗ್ಯ ಸಮಸ್ಯೆಯೂ ಆಗಬಹುದು ಕಾರಣ..
ಗಂಡ ಹೆಂಡತಿ ವಿರಸಕ್ಕೆ ಸೂಕ್ಷ್ಮ ಕಾರಣ
‘ಗಂಡ ಹೆಂಡತಿ ಇಂಡಿಪೆಂಡೆಂಟ್ ಆಗಿದ್ದರೆ ಅವರ ನಡುವೆ ಜಗಳ ಬರಲ್ಲ..’ ಅನ್ನುವ ಮಾತು ಆಗಾಗ ಕೇಳಿ ಬರುತ್ತೆ. ಇದು ಒಂದರ್ಥದಲ್ಲಿ ನಿಜವೇ. ಯಾವಾಗ ಏನಾಗುತ್ತೆ ಅಂತ ಗೊತ್ತಿಲ್ಲದ ಈ ಲೈಫ್‌ನಲ್ಲಿ ಸ್ವತಂತ್ರವಾಗಿದ್ದರೆ ಒಳ್ಳೆಯದೇ. ಆದರೆ ಒಂದು ಮಟ್ಟಿನ ಅವಲಂಬನೆಯೂ ವಿರಸವನ್ನು ಸರಸದತ್ತ ತಿರುಗಿಸುತ್ತದೆ. ಹುಡುಗಿಗೆ ಹೊಲಿಗೆ ಬರಲ್ಲ. ಅವಳ ಡ್ರೆಸ್‌ನ ಸ್ಟಿಚ್ ಹೋಗಿದೆ. ಗಂಡನಿಗೆ ದುಂಬಾಲು ಬಿದ್ದು ಅವನಿಂದ ಹೊಲಿಸಿ ಹಾಕ್ಕೊಂಡಾಗ ಅದರಲ್ಲೇನೋ ಹೇಳಲಾಗದ ಅನುಭೂತಿ ಇರುತ್ತೆ. ಕಾಲು ನೋವಾಗುತ್ತೆ ಅಂತ ಹೆಂಡತಿ ಕೈಯಲ್ಲಿ ಕಾಲು ತಿಕ್ಕಿಸಿಕೊಂಡಾಗ ಅವರಿಬ್ಬರ ಬಾಂಡಿಂಗ್ ಇನ್ನಷ್ಟು ಬಲವಾಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.