
ಬದುಕು ಬಹಳ ಚಿಕ್ಕದು. ಹಾಗಾಗಿ ಬದುಕಿದಷ್ಟು ದಿನ ಎಲ್ಲರನ್ನೂ ಪ್ರೀತಿಸಬೇಕು. ಒಳ್ಳೆಯ ನಡತೆ, ಗುಣ, ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಅದರಿಂದ ಜನರು ನಮ್ಮನ್ನು ಗುರುತಿಸಿ, ಗೌರವಿಸುತ್ತಾರೆ. ಅಂತಹ ಕೆಲವು ಒಳ್ಳೆಯ ಅಭ್ಯಾಸಗಳೇ ಮುಂದೆ ನಮ್ಮನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡುಹೋಗುತ್ತದೆ. ಅದೇ ಕೆಟ್ಟ ಅಭ್ಯಾಸಗಳನ್ನು ನಾವು ರೂಢಿಸಿಕೊಂಡರೆ ಅದು ನಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ.
ಜಪಾನಿ (Japanese) ನ ಜನರ ಪ್ರಕಾರ ನಾವು ದಿನನಿತ್ಯದಲ್ಲಿ ಮಾಡುವ ಕೆಲವು ಕೆಲಸಗಳು ಹಾಗೂ ನಮ್ಮ ಹವ್ಯಾಸ (Hobby) ಗಳೇ ನಮ್ಮ ಉತ್ತಮ ಜೀವನಕ್ಕೆ ನಾಂದಿಯಾಗುತ್ತದೆ. ಚಿಕ್ಕ ಹವ್ಯಾಸಗಳೇ ಹೆಚ್ಚು ಪ್ರಭಾವಶಾಲಿಯಾಗಿರುತ್ತೆ ಮತ್ತು ನಮ್ಮ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ. ಹಾಗಾಗಿ ನಾವು ಈ ಕೆಲವು ಹವ್ಯಾಸಗಳನ್ನು ರೂಢಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಜಪಾನೀಯರು ಹೇಳುತ್ತಾರೆ.
ಟಾಯ್ಲೆಟ್ ಕ್ಲೀನ್ ಮಾಡುವುದು : ಟಾಯ್ಲಟ್ ಸ್ವಚ್ಛಗೊಳಿಸೋದಕ್ಕೂ ಜೀವನದ ಸಕ್ಸೆಸ್ ಗೂ ಏನು ಸಂಬಂಧ ಅಂದ್ಕೋಬೇಡಿ. ಟಾಯ್ಲೆಟ್ ಸ್ವಚ್ಛವಾಗಿಟ್ಟುಕೊಳ್ಳುವ ಹವ್ಯಾಸ ನಮ್ಮಲ್ಲಿದ್ದರೆ ಅದೇ ನಮ್ಮ ಸಕ್ಸೆಸ್ ಗೆ ಕಾರಣವಾಗಬಹುದು ಎನ್ನುತ್ತಾರೆ ಜಪಾನೀಯರು. ಜಪಾನಿನ ಅನೇಕ ಸಾಧಕರಿಗೆ ಪ್ರತಿನಿತ್ಯ ಟಾಯ್ಲೆಟ್ ಕ್ಲೀನ್ ಮಾಡುವ ಅಭ್ಯಾಸವವಿತ್ತು. ಉದಾಹರಣೆಗೆ ಪೆನಾಸೋನಿಕ್ ಸ್ಥಾಪಕ ಕೊನೊಸುಕೆ ಮತ್ಸುಶಿತಾ, ನಿರ್ದೇಶಕ ಹಾಗೂ ನಟ ತಕೇಶಿ ಕಿಟಾನೊ ಹಾಗೂ ಪ್ರತಿಷ್ಠಿತ ಹೊಂಡಾ ಕಂಪನಿಯ ಸ್ಥಾಪಕ ಸೊಯ್ಚಿರೊ ಹೊಂಡಾ ಅವರಿಗೆ ಕೂಡ ಪ್ರತಿನಿತ್ಯ ಟಾಯ್ಲೆಟ್ ಕ್ಲೀನ್ ಮಾಡುವ ಹವ್ಯಾಸವಿತ್ತು. ಇವರೆಲ್ಲರೂ ಟಾಯ್ಲೆಟ್ ಕ್ಲೀನ್ ಮಾಡೋದು ನಮ್ಮ ಸಕ್ಸೆಸ್ ಗೆ ಅತೀ ಮುಖ್ಯವಾದ ಅಂಶ ಎಂದೇ ಹೇಳಿದ್ದಾರೆ.
ಪ್ರತಿನಿತ್ಯ ಟಾಯ್ಲೆಟ್ ಕ್ಲೀನ್ ಮಾಡೋದ್ರಿಂದ ನಮ್ಮ ಅದೃಷ್ಟ ಬದಲಾಗುತ್ತೆ. ಜಪಾನಿನವರು ಆರಾಧ್ಯ ದೈವ ಎನ್ನಬಹುದಾದ ಫೆಂಗ್ ಶುಯಿ ಕೂಡ ಇದನ್ನೇ ಹೇಳುತ್ತದೆ. ನಿರಂತರವಾಗಿ ಟಾಯ್ಲೆಟ್ ಕ್ಲೀನ್ ಮಾಡುವವರ ಮನೆಯ ಆದಾಯ ಉಳಿದವರಿಗಿಂತ ಹೆಚ್ಚಿಗೆ ಇರುತ್ತದೆ ಎಂಬುದು ಅಧ್ಯಯನದಿಂದಲೂ ಸಾಬೀತಾಗಿದೆ.
VIRAL VIDEO: ವಾಕ್ಯೂಮ್ ಕ್ಲೀನರ್ ಅಬ್ಬರಕ್ಕೆ ವೃದ್ಧನ ಹಲ್ಲು ಬಲಿ!
ನಿಮ್ಮ ಕೋಣೆಯನ್ನು ಸ್ವಚ್ಛವಾಗಿಡುವುದು : ನಿಮ್ಮ ಕೋಣೆಯನ್ನು ಸ್ವಚ್ಛವಾಗಿಡುವುದು, ಅಲ್ಲಿನ ವಸ್ತುಗಳನ್ನು ಶಿಸ್ತಿನಿಂದ ಜೋಡಿಸುವುದು ಕೂಡ ಬಹಳ ಮುಖ್ಯ. ರೂಮ್ ನ ನೆಲದ ಮೇಲೆ ಹಾಗೂ ಮೂಲೆಗಳಲ್ಲಿರುವ ಧೂಳು, ಕಸ ಮುಂತಾದವುಗಳನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಳ್ಳಬೇಕು.
ನಿಮ್ಮ ಶೂಗಳನ್ನು ಸರಿಯಾಗಿ ಜೋಡಿಸಿ : ನಾವು ಜೀವನದಲ್ಲಿ ಶಿಸ್ತು, ಸ್ವಚ್ಛತೆಯನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸುಂದರವಾಗುತ್ತದೆ. ನಮ್ಮ ಸಣ್ಣ ಪುಟ್ಟ ವರ್ತನೆ, ಅಭ್ಯಾಸಗಳು ಕೂಡ ಇತರರನ್ನು ಪ್ರೇರೇಪಿಸುವಂತಿರಬೇಕು. ಹಾಗೆಯೇ ನಾವು ಚಪ್ಪಲಿ ಅಥವಾ ಶೂಗಳನ್ನು ಇಡುವಾಗ ಕೂಡ ಅದೇ ಶಿಸ್ತನ್ನು ಪಾಲಿಸಬೇಕು. ಇದು ನಿಮ್ಮ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಇದು ಮನೆಗೆ ಶ್ರೀಮಂತಿಕೆ ಬರುವ ಸಂಕೇತ; ಲಕ್ಷ್ಮಿಯ ಆಗಮನದ ಸೂಚನೆ ಹೇಗಿರುತ್ತೆ?
ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ : ನಾವು ಕುಳಿತುಕೊಳ್ಳುವ ಭಂಗಿ ಸರಿಯಾಗಿದ್ದರೆ ನಮ್ಮ ವಿಚಾರವೂ ಸರಿಯಾಗಿರುತ್ತೆ. ಇಂದು ಅನೇಕರು ಮೊಬೈಲ್, ಕಂಪ್ಯೂಟರ್ ಬಳಕೆ ಮಾಡೋದ್ರಿಂದ ಅವರ ಕುಳಿತುಕೊಳ್ಳುವ ಭಂಗಿ ತಪ್ಪಾಗಿದೆ. ಹಾಗಾಗಿ ಹೆಚ್ಚಿನ ಜಪಾನೀಯರು ಕಿಮೊನೋ ಧರಿಸುತ್ತಾರೆ. ಇದರಿಂದ ಬೆನ್ನು ಬಾಗುವುದನ್ನು ತಪ್ಪಿಸಬಹುದಾಗಿದೆ. ಖುರ್ಚಿಯನ್ನು ಬಳಸಿದ ನಂತರ ಅದನ್ನು ಸರಿಯಾಗಿ ಜೋಡಿಸಿ : ಖ್ಯಾತ ಜಪಾನಿ ಆಟಗಾರ ಶೋಹೇ ಒಹ್ತಾನಿ ಇಂಟರವ್ಯೂ ಬಳಿಕ ಆತ ಖುರ್ಚಿಯನ್ನು ಮರಳಿ ಸರಿಯಾಗಿ ಜೋಡಿಸಿದ ಕಾರಣಕ್ಕೇ ಆತ ಆ ಪರೀಕ್ಷೆಯಲ್ಲಿ ಪಾಸಾಗಿದ್ದ. ನೋಡಲು ಇದು ಸಣ್ಣ ಕೆಲಸ ಎನಿಸಿದರೂ ಇದರಿಂದ ಅನೇಕ ಪ್ರಯೋಜನಗಳಾಗುತ್ತವೆ ಹಾಗೂ ಇದು ನಮ್ಮ ಶಿಸ್ತನ್ನು ತೋರಿಸುತ್ತದೆ.
ಬೆಳಿಗ್ಗೆ ಬೇಗ ಏಳುವುದು : ಇಂದು ಅನೇಕ ಮಂದಿ ಕೆಲಸದ ಜಂಜಾಟದಿಂದ ತಡವಾಗಿ ಮಲಗಿ ತಡವಾಗಿ ಏಳುತ್ತಿದ್ದಾರೆ. ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಸೂರ್ಯನಿಗೆ ನಮಸ್ಕರಿಸುವುದು ಜಪಾನೀಯರ ಹವ್ಯಾಸವಾಗಿದೆ. ಇಂತಹ ಉತ್ತಮ ಹವ್ಯಾಸದಿಂದ ನಮ್ಮ ನಿತ್ಯದ ಜೀವನಕ್ಕೆ ಹೊಸ ಉತ್ಸಾಹ ಸಿಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.