
ಯಾವುದೇ ಮಹಿಳೆಯರಿಗೆ ಗರ್ಭಿಣಿಯಾಗಿದ್ದ ಸಮಯ ತುಂಬಾ ಮಹತ್ವ ಪೂರ್ಣದ್ದಾಗಿರುತ್ತದೆ. ಒಂಬತ್ತು ತಿಂಗಳ ಕಾಯುವಿಕೆಯ ನಂತರ ಪುಟ್ಟ ಅತಿಥಿ ಆಗಮಿಸುವಾಗ ಜೀವನದಲ್ಲಿ ಸಕಲವನ್ನೂ ಸಂಭ್ರಮಿಸುವ ಹೊತ್ತು ಅದ್ಭುತ. ಮಗು ಆರೋಗ್ಯದಿಂದ ಇರಬೇಕು ಎಂದಾದರೆ ಗರ್ಭಿಣಿ ಹೆಚ್ಚು ಜಾಗರೂಕರಾಗಿರಬೇಕು.
ಭಾರವಾದ ವಸ್ತುಗಳನ್ನು ಎತ್ತಬೇಡಿ: ಸಣ್ಣ ಪುಟ್ಟ ಭಾರ ಎತ್ತುವುದು ಕೆಟ್ಟದಲ್ಲ. ಆದರೆ ಹೆಚ್ಚು ಭಾರದ ವಸ್ತುಗಳನ್ನು ಎತ್ತುವುದರಿಂದ ಹೊಟ್ಟೆ ಮತ್ತು ಕೆಳಗಿನ ಭಾಗದ ಮೇಲೆ ಒತ್ತಡ ಹೆಚ್ಚಾಗಿ, ನೋವು ಕಾಣಿಸಿಕೊಳ್ಳಬಹುದು.
ಯೋಗ: ಯೋಗ ಆರೋಗ್ಯಕ್ಕೆ ಉತ್ತಮ. ಆದರೆ ಗರ್ಭಿಣಿಯರು ಎಲ್ಲ ಆಸನಗಳನ್ನು ಮಾಡಬಾರದು. ಹೊಟ್ಟೆ ಮೇಲೆ ಪ್ರೇಷರ್ ಬೀಳದಂತ ಆಸನಗಳಿಗೆ ಮಾತ್ರ ಗಮನಿಸಬೇಕು.
ಎಕ್ಸರ್‌ಸೈಸ್: ಯೋಗದಂತೆ ಎಕ್ಸರ್‌ಸೈಸ್ ಅನ್ನು ತುಂಬಾ ಜಾಗರೂಕತೆಯಿಂದ ಮಾಡಿ. ಸೈಕಲಿಂಗ್, ಟ್ರೆಡ್‌ಮಿಲ್ ಮಾಡುವುದನ್ನು ಕಡಿಮೆ ಮಾಡಿ. ಗರ್ಭಿಣಿಗೆ ಸೂಕ್ತವಾದ ಕಸರತ್ತನ್ನು ಮಾತ್ರ ಮಾಡಿ.
ರೈಡ್: ಪ್ರೆಗ್ನೆನ್ಸಿಯಲ್ಲಿ ಲಾಂಗ್ ರೈಡ್ ಒಳ್ಳೆಯದಲ್ಲ. ಹೆಚ್ಚು ತೊಂದರೆ ಇಲ್ಲದ, ಒತ್ತಡವಿಲ್ಲದ ರೈಡ್ ಓಕೆ. ಇದು ಎಲ್ಲ ರೈಡ್‌ಗಳಿಗೂ ಅನ್ವಯಿಸುತ್ತೆ.
ಫಾಸ್ಟ್ ಆಗಿ ಓಡಬೇಡಿ: ನಿಧಾನವಾಗಿ ವಾಕಿಂಗ್ ಮಾಡಿ, ಹೆಚ್ಚು ಜೋರಾಗಿ ಓಡಬೇಡಿ. ಇದರಿಂದ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
ಪ್ರಸವದ ನಂತರ ಕಾಡೋ ಪೇನ್‌ಗೇನು ಮಾಡೋದು?
ಗರ್ಭಿಣಿ ಲೈಂಗಿಕ ಕ್ರಿಯೆ ನಡೆಸಿದರೆ ಪ್ರಸವ ಸುಲಭವಾಗುತ್ತಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.