ಮುಟ್ಟಾದಾಗ ಮಹಿಳೆಯರು ಸ್ವಿಮ್ ಮಾಡ್ಬಹುದಾ?

Published : Dec 07, 2019, 01:18 PM IST
ಮುಟ್ಟಾದಾಗ ಮಹಿಳೆಯರು ಸ್ವಿಮ್ ಮಾಡ್ಬಹುದಾ?

ಸಾರಾಂಶ

ಮುಟ್ಟು ಹೆಣ್ತನದ ಪ್ರತೀಕ. ಕೆಲವೊಮ್ಮೆ ಅಲ್ಲಿ ಇಲ್ಲಿ ನೋವು ಕಾಣಿಸಿಕೊಳ್ಳುವುದು ಹೌದಾದರೂ, ಇದು ಮಹಿಳೆಗೆ ನಿಸರ್ಗ ಕರುಣಿಸಿದ ವರ. ಈ ಸಂದರ್ಭದಲ್ಲಿ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು?

ಮಹಿಳೆಯರಿಗೆ ಪ್ರತಿ ತಿಂಗಳು ಉಂಟಾಗುವ ಋತುಸ್ರಾವದ ಸಂದರ್ಭದಲ್ಲಿ ಹೊಟ್ಟೆ ನೋವು, ಇನ್ಫೆಕ್ಷನ್, ಬೆನ್ನು ನೋವು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಈ ಸಂದರ್ಭದಲ್ಲಿ ಮಹಿಳೆಯರ ತುಂಬಾ ಹೈಜಿನ್ ಆಗಿರುವುದು ಮುಖ್ಯ. ಈ ಕೆಳಗಿನ ವಿಷಯಗಳ ಬಗ್ಗೆ ಗಮನ ಹರಿಸಿದರೆ ಉತ್ತಮ... 

- ಋತುಸ್ರಾವದ ಸ೦ದರ್ಭದಲ್ಲಿ ಸ್ವಿಮ್ಮಿಂಗ್ ಮಾಡಿದರೆ ಓಕೆ. ಆದರೆ, ಟ್ಯಾಂಪೂನ್ ಬಳಸಿದ್ದರೆ ಸೇಫ್.

- ಋತುಸ್ರಾವದ ಸಂದರ್ಭದಲ್ಲಿ ಮೂಡ್ ಸ್ವಿಂಗ್ ಆಗುವುದು ಸಾಮಾನ್ಯ. ಈ ಸಮಯದಲ್ಲಿ ಸ್ಟ್ರೆಸ್, ಖಿನ್ನತೆ, ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾರ್ಮೋನ್ ಬದಲಾವಣೆಯಿಂದಾಗು ಈ ಸಮಸ್ಯೆಯನ್ನು ಪ್ರಿ ಮೆನ್ಸ್ಟ್ರುಯಲ್ ಸಿಂಡ್ರೋಮ್ ಎನ್ನುತ್ತಾರೆ. ಇದರೆಡೆಗೆ ಗಮನವಿರಲಿ.

- ಪಿರಿಯಡ್ಸ್ ಆಗುವ ಮುನ್ನ ಹಾಗೂ ನ೦ತರ ಬಿಳಿ ದ್ರವ ಸ್ರವಿಸುವುದೂ ಕಾಮನ್. ಓವುಲೇಶನ್ ಸ೦ದರ್ಭದಲ್ಲಿ ಹೀಗಾಗುತ್ತದೆ. ಸುಖಾ ಸುಮ್ನೆ ಭಯ ಬೇಡ. 

- ಕೆಲವೊಮ್ಮೆ ಪಿರಿಯಡ್ಸ್ ಬೇಗ ಆಗುತ್ತದೆ, ಇನ್ನು ಕೆಲವೊಮ್ಮೆ ಒತ್ತಡ, ಬದಲಾದ ಜೀವನ ಶೈಲಿಯಿಂದ ತಡವಾಗುತ್ತದೆ. ಅದಕ್ಕಾಗಿ ಟೆನ್ಶನ್ ಬೇಡ.

- ಕೆಲವರಿಗೆ ಈ ಸಮಯದಲ್ಲಿ ವಿಪರೀತ ಹೊಟ್ಟೆ, ಬೆನ್ನು ನೋವಿನೊಂದಿಗೆ ವಾಂತಿಯಾಗುತ್ತದೆ. ಒಂದೆರಡು ದಿನದಲ್ಲಿ ಇದು ಕಡಿಮೆಯಾಗುತ್ತದೆ. ಒಂದು ವೇಳೆ ವಿಪರೀತವಾಗಿದೆ ಎಂದೆನಿಸಿದರೆ ವೈದ್ಯರನ್ನು ನೋಡಿ. 

ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

ಯಾವ ಆಹಾರ ಬೇಡ?

- ಚಾಕೋಲೇಟ್‌, ಕೆಫೆನೇಟೆಡ್‌ ಸೋಡಾ, ಟೀ ಮತ್ತು ಕಾಫಿಯಂತಹ ಕೆಫೆನ್‌ಯುಕ್ತ ಆಹಾರಗಳಿಂದ ದೂರವಿರಿ. 

- ಹೆಚ್ಚು ಮಸಾಲೆ ಪದಾರ್ಥಗಳ ಸೇವನೆಯಿಂದ ಸಮಸ್ಯೆ ಹೆಚ್ಚುತ್ತದೆ. 

- ಕೊಬ್ಬಿನಾಂಶ ಹೊಂದಿರುವ ಆಹಾರ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥ ಬೇಡ. 

- ರೆಡ್ ಮೀಟ್ ಸೇವಿಸಬೇಡಿ. 

- ಫಾಸ್ಟ್ ಫುಡ್ ಸೇವನೆಗೆ ಕಡಿವಾಣ ಹಾಕಿ. 

- ಚೀಸ್, ಕ್ರೀಮ್ ಮೊದಲಾದ ಡೈರಿ ಉತ್ಪನ್ನಗಳನ್ನು ಅವಾಯ್ಡ್ ಮಾಡಿ. 

ಪಿರಿಯಡ್ಸ್ ಬಗ್ಗೆ ಹೆಣ್ಣಿಗಿರಲಿ ಹೆಮ್ಮೆ

ಯಾವ ಆಹಾರ ಸೇವನೆ ಉತ್ತಮ : 

- ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. 

- ಒಮೇಗಾ 3 ಫ್ಯಾಟಿ ಆ್ಯಸಿಡ್ ಹೊಂದಿರುವ ಆಹಾರಗಳಾದ ಸಲ್ಮಾನ್‌ ಫಿಶ್‌, ಟುನಾ, ವಾಲ್‌ನಟ್‌ ಮತ್ತು ಫ್ಲ್ಯಾಕ್ಸ್‌ ಸೀಡ್ಸ್‌ ಸೇವಿಸಿ.

- ತಾಜಾ ಹಣ್ಣುಗಳ ಜ್ಯೂಸ್ ಕುಡಿಯಿರಿ. 

- ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಹೊಂದಿರುವ ಆಹಾರಗಳೂ ಡಯಟ್ಟಲ್ಲಿರಲಿ. 

- ಸಾಧ್ಯವಾದಷ್ಟು ಹೆಲ್ದಿ ಆಹಾರಗಳನ್ನು ಸೇವಿಸಿ. 

- ವಿಟಾಮಿನ್‌ ಸಿ ಹೆಚ್ಚಾಗಿರುವ ಹಸಿರು ತರಕಾರಿಗಳು, ಟೊಮ್ಯಾಟೊ, ಕಿತ್ತಳೆ ಹಣ್ಣು, ನಿಂಬೆ ಹಣ್ಣು, ಸ್ಟ್ರಾಬೆರಿ ತಿನ್ನಿ. 


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Immunity boost: ರೋಗನಿರೋಧಕ ಶಕ್ತಿ ಹೆಚ್ಚಿಸಲು ಸುಲಭ ಉಪಾಯ- ಸದ್ಗುರು ಜಗ್ಗಿ ವಾಸುದೇವ ಟಿಪ್ಸ್​ ಕೇಳಿ
ಒಳ್ಳೆ ನಿದ್ದೆ ಬರ್ಬೇಕು ಅಂದ್ರೆ ಖರ್ಜೂರವನ್ನು ಹಾಲಿನಲ್ಲಿ ನೆನೆಸಿ ತಿನ್ನಿ