ಪುರುಷರ ಮೊಲೆತೊಟ್ಟು: ಸತ್ಯ, ಮಿಥ್ಯಗಳೇನು?

By Suvarna NewsFirst Published Dec 18, 2018, 3:40 PM IST
Highlights

 ಸ್ತನ ಹಾಗೂ ಅದರ ತೊಟ್ಟುಗಳು ಹೆಣ್ಣಿಗೆ ಸಂಬಂಧಿಸಿದ್ದವು ಎಂಬ ನಂಬಿಕೆ ಇದೆ. ಆದರಿದೂ ಪುರುಷರಿಗೂ ಇದು ಅನ್ವಯಿಸುತ್ತದೆ. ಇದರ ಆರೋಗ್ಯದೆಡೆಗ ಪುರುಷರೂ ಗಮನಿಸುವುದು ಅತ್ಯಗತ್ಯ.

ಆರೋಗ್ಯದಲ್ಲಾಗೋ ಕೆಲವು ಬದಲಾವಣೆಗಳು ಮೊಲೆತೊಟ್ಟಿನಿಂದಲೇ ಗ್ರಹಿಸಬಹುದು. ಹಾಗಂಥ ಇದು ಹೆಣ್ಣಿಗೆ ಮಾತ್ರ ಅನ್ವಯವಾಗುತ್ತದೆ ಎಂದರೆ, ನಿಮ್ಮ ತಿಳುವಳಿಕೆ ತಪ್ಪು. ಗಂಡಸರ ಮೊಲೆ ತೊಟ್ಟಿನಿಂದಲೂ ಅನಾರೋಗ್ಯ ಲಕ್ಷಣಗಳನ್ನು ಪತ್ತೆ ಹಚ್ಚಬಹುದು. 

  • ಕೆಲವರಿಗೆ ಇದರ ಬಗ್ಗೆ ಇರುವ ಯಾವ ರಹಸ್ಯವೂ ತಿಳಿದಿರುವುದಿಲ್ಲ. ಈ ಮೊಲೆತೊಟ್ಟುಗಳು ಲೈಂಗಿಕಾಸಕ್ತಿ ಹೆಚ್ಚುವಂತೆ ಮಾಡುತ್ತದೆ. 
  • ಹೆಣ್ಣಿನಷ್ಟು ಅಲ್ಲದೇ ಹೋದರೂ, ಗಂಡಸರಿಗೂ ಹಾಲು ಉತ್ಪಾದಿಸುವ ಸಾಮರ್ಥ್ಯ ಇರುತ್ತದೆ. ಆದರೆ, ಮಗುವಿಗೆ ಉಣಿಸುವುದು ಅಸಾಧ್ಯ. ಒತ್ತಡದಿಂದಲೇ ಇವರಿಗೆ ಹಾಲು ಉತ್ಪನ್ನವಾಗುತ್ತದೆ.
     
  • ಆರೋಗ್ಯಕ್ಕೆ ಮದ್ದು, ಹಾಗಲಕಾಯಿ ಕಹಿ ಹೋಗಿಸುವುದು ಹೇಗೆ?
     
  • ಅವರಿಗೆ ತೊಟ್ಟಿನಲ್ಲಿ ರಕ್ತಸ್ರಾವ ಹಾಗೂ ಗಾಯವಾಗುವ ಸಾಧ್ಯತೆ ಅಲ್ಲಗಳೆಯಲಾಗುವುದಿಲ್ಲ. 
  • ‘ಗಂಡಸರಿಗೇಕೆ ಮೊಲೆತೊಟ್ಟು ಇರುತ್ತದೆ?' ಎಂಬುವುದು ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಆದ ಪ್ರಶ್ನೆ. 
  • ಈ ತೊಟ್ಟು ಗಟ್ಟಿಯಾಗಲು ಲೈಂಗಿಕಾಸಕ್ತಿ ಜತೆ ಹತ್ತು ಹಲವು ಕಾರಣಗಳಿರುತ್ತವೆ. ವಾತಾವರಣವೂ ಒಂದು ಕಾರಣ. ಚಳಿಗಾಲದಲ್ಲಿ ಗಟ್ಟಿಯಾಗಿದ್ದರೆ, ಬೇಸಿಗೆಯಲ್ಲಿ ಮೃದುವಾಗಿರುತ್ತದೆ.
  • ಮ್ಯಾರಥಾನ್‌ನಲ್ಲಿ ಭಾಗವಹಿಸುವ ಗಂಡಸರಿಗೆ ಮೊಲೆ ತೊಟ್ಟಿನ ಸುತ್ತಲೂ ಕೆಂಪು ಗೆರೆಗಳು ಇರುತ್ತವೆ. ಕೆಲವೊಮ್ಮೆ ಧರಿಸಿದ ಬಟ್ಟೆ ಅಥವಾ ಕೆಲವು ಚಟುವಟಿಕೆಗಳಲ್ಲಿ ತೊಡಗುವುದಿಂದ ಹೀಗಾಗುತ್ತದೆ. ಇದನ್ನು ತಡೆಯಲು ಕೆಲವರು ಕ್ರೀಮ್ ಅಥವಾ ಬ್ಯಾಂಡೇಜ್  ಬಳಸುತ್ತಾರೆ. 
  • 100ರಲ್ಲಿ ಒಬ್ಬ ಗಂಡಸಿಗೆ ಮಾತ್ರ ಮೂರು ಮೊಲೆತೊಟ್ಟುಗಳಿರುತ್ತದೆ.
  • ಹೆಣ್ಣು ಮಕ್ಕಳನ್ನು ಕಾಡುವಂತೆ ಗಂಡಸರನ್ನೂ ಸ್ತನ ಕ್ಯಾನ್ಸರ್ ಕಾಡುತ್ತದೆ.
click me!