ಉದ್ಯೋಗ ನಷ್ಟ, ಅರ್ಧ ಕಟ್ಟಿದ ಮನೆ, ಚಿಂತೆಯ ಮನ..! ಬೆಂಗ್ಳೂರಲ್ಲಿ ಕೊರೋನಾ ಟೈಂನಲ್ಲಿ ಹೃದಯಾಘಾತ ಹೆಚ್ಚಳ

Suvarna News   | Asianet News
Published : Sep 29, 2020, 02:08 PM ISTUpdated : Sep 29, 2020, 02:54 PM IST
ಉದ್ಯೋಗ ನಷ್ಟ, ಅರ್ಧ ಕಟ್ಟಿದ ಮನೆ, ಚಿಂತೆಯ ಮನ..! ಬೆಂಗ್ಳೂರಲ್ಲಿ ಕೊರೋನಾ ಟೈಂನಲ್ಲಿ ಹೃದಯಾಘಾತ ಹೆಚ್ಚಳ

ಸಾರಾಂಶ

ಕೊರೋನಾ ಸಮಯದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳ | ಪೂರ್ತಿಯಾಗದ ಮನೆ, ಉದ್ಯೋಗ ನಷ್ಟ, ವೇತನ ಕಡಿತ | ಹೆಚ್ಚಿದ ಮಾನಸಿಕ ಒತ್ತಡದಿಂದ ಹೃದಯಕ್ಕೆ ಅಪಾಯ | ಚಿಂತೆ ಬಿಡಿ, ಎಲ್ಲವೂ ಸರಿಯಾಗುತ್ತೆ | ಹೃದಯದ ಬಗ್ಗೆ ಇರಲಿ ಕಾಳಜಿ

ಕೊರೋನಾ ಕಾಲಾವಧಿಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ. ಕಳೆದ 2 ತಿಂಗಳಲ್ಲಿ ಹಾಟ್‌ ಎಟ್ಯಾಕ್ ಘಟನೆಗಳು ಶೇ.30ರಷ್ಟು ಹೆಚ್ಚಾಗಿದೆ. ಕೊರೋನಾ ಕುರಿತ ಮಾನಸಿಕ ಒತ್ತಡ, ಆರ್ಥಿಕ ತೊಂದರೆ, ಜಡ ಜೀವನಶೈಲಿಯಿಂದ ಹೃದಯಾಘಾತ ಘಟನೆ ಹೆಚ್ಚಾಗಿದೆ ಎನ್ನಲಾಗಿದೆ.

ಕೊರೋನಾ ಭಯದಿಂದಾಗಿ ಬಹಳಷ್ಟು ಜನರು ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ಅವಾಯ್ಡ್ ಮಾಡುತ್ತಿದ್ದಾರೆ. ಇದರಿಂದಾಗಿ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕ್ರಿಟಿಕಲ್ ಅಗಿ ಹೃದಯಾಘಾತದಲ್ಲಿ ಕೊನೆಯಾಗುತ್ತಿವೆ.

World Heard Day 2020: ಪುಟ್ಟ ಹೃದಯದ ಬಗ್ಗೆ ಇರಲಿ ಹೆಚ್ಚು ಕಾಳಜಿ, ಇಲ್ಲಿವೆ ಕೆಲವು ಹೃದಯಸ್ಪರ್ಶಿ ವಿಚಾರಗಳು..!

ಆರ್ಥಿಕ ಸಮಸ್ಯೆ, ಉದ್ಯೋಗವಿಲ್ಲದೆ, ವೇತನ ಕಡಿತ, ಹೆಚ್ಚಾದ ಕೆಲಸದ ಕಾಲಾವಧಿಯಿಂದ ಮಾನಸಿಕ ಒತ್ತಡ, ಫಸ್ಟ್ರೇಷನ್, ಅಭದ್ರತೆ ಹೆಚ್ಚಾಗಿದೆ. ಇದರಿಂದಾಗಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ.

ಹೃದಯಾಘಾತಕ್ಕೆ ಸಂಬಂಧಿಸಿ ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ರೋಗಿಗಳು ಬರುತ್ತಿಲ್ಲ. ಅಸಮಯವಾಗಿ ಬರುವವರ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಚಿಕಿತ್ಸೆಗೆ ಬರುವ ಅಂತಹ ರೋಗಿಗಳ ಸಂಖ್ಯೆಯಲ್ಲಿ 30% ಹೆಚ್ಚಳ ಕಂಡುಬಂದಿದೆ ಎಂದಿದ್ದಾರೆ ಕಾರ್ಡಿಯಾಲಜಿಸ್ಟ್ ಶ್ರೀಕಾಂತ್ ಶೆಟ್ಟಿ.

ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಣ: ಕೇರಳಕ್ಕೆ ವಿಶ್ವಸಂಸ್ಥೆ ಪ್ರಶಸ್ತಿ

ವ್ಯಾಯಾಮದ ಕೊರತೆ: ಕೊರೋನಾ ಸಂದರ್ಭದಲ್ಲಿ ಆರೋಗ್ಯ ಕುರಿತ ನಿರ್ಲಕ್ಷ್ಯ ಮತ್ತು ವ್ಯಾಯಾಮದ ಕೊರತೆಯಿಂದ ಬಹಳಷ್ಟು ಸಮಸ್ಯೆಗಳು ಉಂಟಾಗಿದೆ. ಯುವ ರೋಗಿಗಳು ಬಹಳ ಆರೋಗ್ಯವಾಗಿದ್ದು, ಹಿಂದೆ ಯಾವುದೇ ಹೃದಯ ಸಂಬಂಧಿ ಕಾಯಿಲೆ ಇಲ್ಲದವರಲ್ಲಿಯೂ ಹೃದಯಾಘಾತದಂತಹ ಸಮಸ್ಯೆಯಾಗುತ್ತಿದೆ.

ಐಟಿ ಸೆಕ್ಟರ್‌ಗಳಲ್ಲಿ ಕೆಲಸ ಸಮಯ ಹೆಚ್ಚಿ ಮಾನಸಿಕ ಒತ್ತಡ ಹೆಚ್ಚಾಗಿದೆ. ಇದು ಮುಖ್ಯವಾಗಿ ಹೃದಯವನ್ನು ಬಾಧಿಸುತ್ತಿದೆ. ಮನೆ ಕೆಲಸ ಪೂರ್ತಿ ಮಾಡಲಾಗದೆ, ಹೆಚ್ಚಿನ ಬಿಲ್‌ಗಳ ಪಾವತಿ ಇವೆಲ್ಲವನ್ನೂ ಯೋಚಿಸಿ ಜನರು ಒತ್ತಡ ಹೆಚ್ಚಿಸಿಕೊಳ್ತಿದ್ದಾರೆ. ಆಸ್ಪತ್ರೆಗೆ ಜನರು ಬರುವುದರಲ್ಲಿ ಶೇ 34ರಷ್ಟು ಇಳಿಕೆಯಾಗಿದ್ದರೆ, ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಶೇ 4 ಹೆಚ್ಚಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ