
ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸ್ಥಿರತೆ ಮತ್ತು ಅದಕ್ಕಾಗಿ ಹಣದ ಬೆನ್ನತ್ತುವ ಜನರಿಗೆ ಒತ್ತಡ, ಆರೋಗ್ಯ ಸಮಸ್ಯೆಗಳು ಮತ್ತು ದಣಿವು ಸಾಮಾನ್ಯವಾಗಿವೆ. ಆದರೆ ಕೆಲವರು ಧೈರ್ಯದಿಂದ ಹಣಕ್ಕಿಂತ ಆರೋಗ್ಯವನ್ನು ಆದ್ಯತೆಯಾಗಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಂತಹವರಲ್ಲಿ ಒಬ್ಬರಾದ ಭಾರತೀಯ ಯುವತಿ ಉಪಾಸನ ಅವರ ಇನ್‌ಸ್ಟಾಗ್ರಾಮ್ ವೀಡಿಯೊ ಈಗ ವೈರಲ್ ಆಗುತ್ತಿದೆ.
ಆಧುನಿಕ ಕೆಲಸದ ಜೀವನದ ಸವಾಲುಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ. ಉಪಾಸನ, ಫ್ರೆಂಚ್ ಅಸೋಸಿಯೇಟ್ ಆಗಿ ತಿಂಗಳಿಗೆ 60,000 ರೂಪಾಯಿ ಸಂಪಾದಿಸುತ್ತಿದ್ದರು. ಆದರೆ ರಾತ್ರಿ ಪಾಳಿಯ ಕೆಲಸದಿಂದ ತಲೆನೋವು, ಆಮ್ಲೀಯತೆ, ಕಡಿಮೆ ರಕ್ತದೊತ್ತಡ ಮತ್ತು ಆತಂಕದಂತಹ ಆರೋಗ್ಯ ಸಮಸ್ಯೆಗಳು ಆಕೆಯನ್ನು ಕಾಡಿದವು. ಉಪಾಸನ ಹೇಳುವಂತೆ, '22ನೇ ವಯಸ್ಸಿನಲ್ಲಿ ನಾನು ಆರ್ಥಿಕವಾಗಿ ಸುರಕ್ಷಿತವಾಗಿದ್ದೆ, ಆದರೆ ಆಯ್ಕೆ ಸ್ಪಷ್ಟವಾಗಿತ್ತು. ಹಣ ಅಥವಾ ಆರೋಗ್ಯ ಎಂದು ಉಪಾಸನ ವೀಡಿಯೊದಲ್ಲಿ ಹೇಳಿದ್ದಾರೆ.
ಹಣ ತಾತ್ಕಾಲಿಕ ಬರುತ್ತದೆ ಹೋಗುತ್ತದೆ:
ಹಣ ತಾತ್ಕಾಲಿಕ, ಬರುತ್ತದೆ-ಹೋಗುತ್ತದೆ. ಆದರೆ ಆರೋಗ್ಯ ಹಾಳು ಮಾಡಿಕೊಂಡು ದೇಹ ಕುಗ್ಗಿದರೆ, ಶಕ್ತಿ ಕಳೆದುಕೊಂಡರೆ ಏನು ಮಾಡುವುದು? ಹಾಗಾದರೆ ನಮಗೆ ಯಾವುದು ಮುಖ್ಯ? ಹಣವೋ ಆರೋಗ್ಯವೋ? ಆರೋಗ್ಯದ ಮುಂದೆ ಯಾವುದೂ ಮುಖ್ಯವಲ್ಲ ಎಂದು ಆಕೆ ಹಂಚಿಕೊಂಡಿದ್ದಾರೆ.
ಆರೋಗ್ಯಕ್ಕೆ ಆದ್ಯತೆ ನೀಡಲು 60 ಸಾವಿರ ಸಂಬಳದ ನೌಕರಿಗೆ ಗುಡ್‌ಬೈ:
ಆರೋಗ್ಯವನ್ನು ಆದ್ಯತೆಯಾಗಿಸಿ, ಉಪಾಸನ ತನ್ನ ಉತ್ತಮ ಸಂಬಳದ ಕೆಲಸವನ್ನು ತೊರೆದು, ಹೊಸ ಆರಂಭಕ್ಕೆ ಮುಂದಾಗಿದ್ದಾರೆ. 'ಮುಂದೆ ಏನಾಗುತ್ತದೆ ಎಂದು ತಿಳಿಯದಿದ್ದರೂ, ಜೀವನದಲ್ಲಿ ಮತ್ತೆ ಸಾಧಿಸುವ ಛಲವಿದೆ' ಎಂದು ಆಕೆ ಧೈರ್ಯದಿಂದ ಹೇಳಿದ್ದಾರೆ.
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಯುವ ಜನಾಂಗಕ್ಕೆ ಆರೋಗ್ಯದ ಮಹತ್ವವನ್ನು ಮನವರಿಕೆ ಮಾಡಿದೆ. ಉಪಾಸನ ಅವರ ಈ ನಿರ್ಧಾರವು ಅನೇಕರಿಗೆ ಸ್ಫೂರ್ತಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.