Marriage Rules : ಮದುವೆ ದಿನ ಪೊಲೀಸ್ ಬರಬಾರದು, ಏನಿದೆ ಕಾನೂನು?

By Suvarna NewsFirst Published Dec 21, 2022, 6:18 PM IST
Highlights

ಮದುವೆ ಸಂಭ್ರಮದಲ್ಲಿ ಯಾವುದೇ ಸಣ್ಣ ಸಮಸ್ಯೆಯಾದ್ರೂ ಖುಷಿಗೆ ಧಕ್ಕೆಯಾಗುತ್ತದೆ. ಮದುವೆ ಸಮಸ್ಯೆಯಿಲ್ಲದೆ ಸರಾಗವಾಗಿ ನಡೆಯಬೇಕೆಂದ್ರೆ ಬಟ್ಟೆ, ಬಂಗಾರ ಖರೀದಿ, ಗೆಸ್ಟ್ ಕರೆಯೋದು ಮಾತ್ರವಲ್ಲದೆ ಕೆಲ ವಿಷ್ಯಗಳನ್ನು ಕೂಡ ಪಾಲಿಸಬೇಕಾಗುತ್ತದೆ.
 

ಮನೆಯಲ್ಲಿ ಮದುವೆಯಾಗ್ತಿದೆ ಅಂದ್ರೆ ಪ್ರತಿಯೊಬ್ಬರಿಗೂ ಸಂತೋಷವಾಗುವುದು ಸಹಜ. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂದು ಹಿರಿಯರು ಹೇಳ್ತಾರೆ. ಮದುವೆ ಮಾಡೋದು ಸುಲಭದ ಮಾತಲ್ಲ. ಮದುವೆ ಅಂದ್ಮೇಲೆ ತಿಂಗಳಿನಿಂದಲೇ ತಯಾರಿ ಜೋರಾಗಿ ನಡೆದಿರುತ್ತದೆ. ಬಟ್ಟೆ ಖರೀದಿ, ಸಂಬಂಧಿಕರಿಗೆ ಆಹ್ವಾನ ನೀಡೋದು, ಮಂಟಪ ಬುಕ್ಕಿಂಗ್ ಹೀಗೆ ಅನೇಕ ವಿಷ್ಯಗಳು ತಲೆಯಲ್ಲಿ ಓಡಾಡ್ತಿರುತ್ತವೆ.  ಮದುವೆ ತಯಾರಿಯಲ್ಲಿ ಬ್ಯುಸಿಯಾಗಿರುವ ಕಾರಣ ನಾವು  ಅನೇಕ ವಿಷಯಗಳನ್ನು ಮರೆತುಬಿಡುತ್ತೇವೆ. ಇದರಿಂದಾಗಿ ಮದುವೆಯ ಸಮಯದಲ್ಲಿ  ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆ ಸಂದರ್ಭದಲ್ಲಿ ಯಾವ ತಪ್ಪನ್ನು ಮಾಡಬಾರದು ಎಂಬುದನ್ನು ನಾವಿಂದು ಹೇಳ್ತೆವೆ. 

ಮದುವೆ (Marriage) ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀರ್ಪು ನೀಡಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (Tribunal) ಜಾರಿಗೊಳಿಸಿದ ವಿಷಯಗಳನ್ನು ನಾವು ಪಾಲಿಸಬೇಕಾಗುತ್ತದೆ. ಇಲ್ಲವೆಂದ್ರೆ ಮದುವೆ ಸಮಯದಲ್ಲಿ ತೊಂದರೆಯುಂಟಾಗುತ್ತದೆ. 

ಲವ್ ಲೈಫ್ ರಿಫ್ರೆಶ್ ಮಾಡಿಕೊಳ್ಳಲು ಒಂದು ಸಣ್ಣ ಬ್ರೇಕ್ ತೆಗೆದುಕೊಳ್ಳೊದನ್ನ ಮರಿಬೇಡಿ

ಮದುವೆಯಾಗುವ ಮೊದಲು ಪರಿಗಣಿಸಬೇಕಾದ ಪ್ರಮುಖ ವಿಷಯಗಳು : 
ಮೊದಲೇ ಎಲ್ಲವನ್ನೂ ಗಮನಿಸಿ :
ಮದುವೆ ಹಾಲ್ (Hall) , ಫಾರ್ಮ್ ಹೌಸ್ ಅಥವಾ ಬ್ಯಾಂಕ್ವೆಟ್ ಹಾಲ್ ಅನ್ನು ಬುಕ್ ಮಾಡುವ ಮೊದಲು  ನೀವು ಕೆಲವು ವಿಷಯಗಳನ್ನು ಗಮನಿಸಬೇಕು. ಅಲ್ಲಿ ಸೂಕ್ತ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಬೇಕು. ಇದರಿಂದ ಮದುವೆಯ ದಿನದಂದು ನೀವು ತೊಂದರೆ ಎದುರಿಸುವುದು ತಪ್ಪುತ್ತದೆ.

ತಡರಾತ್ರಿ ಧ್ವನಿವರ್ಧಕ (Loudspeaker) ಬಳಸಬೇಡಿ : ಮದುವೆ ಅಂದ್ಮೇಲೆ ಧ್ವನಿವರ್ದಕ ಬಳಕೆ ಇಲ್ಲದೆ ಹೋದ್ರೆ ಹೇಗೆ ಎನ್ನುವವರಿದ್ದಾರೆ. ಆದ್ರೆ ಧ್ವನಿವರ್ದಕ ಬಳಕೆ ಮಾಡುವ ಮೊದಲು ನೀವು ನಿಯಮಗಳನ್ನು ತಿಳಿದಿರಬೇಕಾಗುತ್ತದೆ. ತಡರಾತ್ರಿ ಅಂದರೆ ರಾತ್ರಿ 10 ಗಂಟೆಯ ನಂತರ ಡಿಜೆ ಮತ್ತು ಧ್ವನಿವರ್ಧಕಗಳನ್ನು ಪ್ಲೇ ಮಾಡಲು ನಿಮಗೆ ಅನುಮತಿ ನೀಡಲಾಗುವುದಿಲ್ಲ.  ಮದುವೆಯಲ್ಲಿ ಡಿಜೆ ಇರಬೇಕು ಎನ್ನುವವರು ರಾತ್ರಿ (night) ಹತ್ತು ಗಂಟೆಗೆ ಮುನ್ನ ಧ್ವನಿವರ್ದಕ ಬಳಸಿ. ನಂತ್ರ ಅದನ್ನು ಬಂದ್ ಮಾಡಿ. ಇಲ್ಲವೆಂದ್ರೆ ಪೊಲೀಸರು ನಿಮ್ಮ ಮದುವೆ ಸಂಭ್ರಮಕ್ಕೆ ಅಡ್ಡಿಯಾಗುವ ಸಾಧ್ಯತೆಯಿರುತ್ತದೆ.  

ಸಾರ್ವಜನಿಕ (Public) ರಿಗೆ ತೊಂದರೆ ಕೊಡಬೇಡಿ : ಮದುವೆ ಸಂದರ್ಭದಲ್ಲಿ ದಾರಿ ಮಧ್ಯದಲ್ಲಿ ನೃತ್ಯ ಮಾಡುವುದನ್ನು ನೀವು ನೋಡಿರ್ತೀರಿ. ಸಾರ್ವಜನಿಕ ಪ್ರದೇಶದಲ್ಲಿ ನೃತ್ಯ ಮಾಡುವುದು ತಪ್ಪು. ಇದ್ರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ರಸ್ತೆ ಜಾಮ್ ಆಗುತ್ತದೆ. ಸಾರ್ವಜನಿಕರಿಗೆ ನೀವು ತೊಂದರೆ ನೀಡ್ತಿದ್ದೀರಿ ಎಂದು ದೂರು ನೀಡಿದ್ರೆ ನಿಮಗೆ ತೊಂದರೆಯಾಗುತ್ತದೆ. ಕೆಲ ಸಂದರ್ಭದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಮದುವೆ ಸಂಭ್ರಮದಲ್ಲಿ ನೃತ್ಯ ಮಾಡ್ಬೇಕು ಅಂದ್ರೆ ಖಾಸಗಿ ಸ್ಥಳದಲ್ಲಿ ಮಾಡಿ. ಮದುವೆ ಮೆರವಣಿಗೆಯಲ್ಲಿ ಡಾನ್ಸ್ ಮಾಡ್ತಾ ಇತರರಿಗೆ ತೊಂದರೆ ನೀಡಬೇಡಿ.  

ಭಾರತದ ಶಾಪಗ್ರಸ್ತ ನದಿಗಳಿವು, ಇವನ್ನು ಸ್ಪರ್ಶಿಸಿದ್ರೆ ಜೀವನವೇ ಹಾಳು!

ರಸ್ತೆಯಲ್ಲಿ ವಾಹನ  ನಿಲುಗಡೆ : ಇದು ಮದುವೆಗೆ ಮಾತ್ರ ಸೀಮಿತವಾಗಿಲ್ಲ, ಬೇರೆ ಸಮಾರಂಭಗಳಲ್ಲಿ ಕೂಡ ರಸ್ತೆ ಮಧ್ಯೆ ವಾಹನ ನಿಲುಗಡೆ ಸಲ್ಲದು. ಸಮಾರಂಭಕ್ಕೆ ಬರುವ ಜನರ ವಾಹನ ನಿಲುಗಡೆಗೆ ನೀವು ಸೂಕ್ತ ವ್ಯವಸ್ಥೆ ಮಾಡಬೇಕು. ನೀವು ಕಲ್ಯಾಣ ಮಂಟಪ ಅಥವಾ ಹಾಲ್ ಬುಕ್ ಮಾಡುವ ಮೊದಲು ವಾಹನ ನಿಲುಗಡೆಗೆ ವ್ಯವಸ್ಥೆ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ವಾಹನ ನಿಲ್ಲಿಸಲು ಸರಿಯಾದ ಜಾಗವಿಲ್ಲವೆಂದಾಗ ಬಂದ ಅತಿಥಿಗಳು ರಸ್ತೆ ಮಧ್ಯದಲ್ಲಿ ವಾಹನ ನಿಲ್ಲಿಸುತ್ತಾರೆ. ಅದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ.  ಖಾಸಗಿ ಸಮಾರಂಭದ ಕಾರಣ ಸಾರ್ವಜನಿಕರಿಗೆ ತೊಂದರೆ ನೀಡ್ತಿದ್ದಾರೆಂದು ಯಾವುದೇ ವ್ಯಕ್ತಿ ದೂರು ನೀಡಿದ್ರೂ ನಿಮ್ಮ ಮನೆಗೆ ಪೊಲೀಸರು ಬಂದು ವಿಚಾರಣೆ ನಡೆಸುತ್ತಾರೆ. ಈ ಎಲ್ಲ ಕಿರಿಕಿರಿ ಇರಬಾರದು ಅಂದ್ರೆ ಮೊದಲೇ ಎಲ್ಲ ವ್ಯವಸ್ಥೆ ಮಾಡಿ.

click me!